ಟೋಕಿಯೋ ಟು ನಗೋಯಾ.. ಬುಲೆಟ್ ಟ್ರೈನ್‌ನಲ್ಲಿ ಡಿಕೆಶಿ ಪ್ರಯಾಣ- ಎಂ.ಬಿ. ಪಾಟೀಲ್ ಸಾಥ್
ಜಪಾನ್ ಪ್ರವಾಸದಲ್ಲಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವ ಎಂ.ಬಿ. ಪಾಟೀಲ್ ತಂಡ ಬುಲೆಟ್ ಟ್ರೈನ್‌ನಲ್ಲಿ ಪ್ರಯಾಣ. ಟೋಕಿಯೋದಿಂದ ನಗೋಯಾದ ಟೊಯೋಟಾ ಕಚೇರಿಗೆ ಭೇಟಿ.
ಜಪಾನ್ ಪ್ರವಾಸದಲ್ಲಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಚಿವ ಎಂ.ಬಿ. ಪಾಟೀಲ್ ಹಾಗೂ ಅಧಿಕಾರಿಗಳ ತಂಡದೊಂದಿಗೆ ಬುಲೆಟ್ ಟ್ರೈನ್‌ನಲ್ಲಿ ಪ್ರಯಾಣಿಸಿದ್ದಾರೆ. ಟೋಕಿಯೋದಿಂದ ನಗೋಯಾ ನಗರದಲ್ಲಿರುವ ಟೊಯೋಟಾ ಕಂಪನಿಯ ಕೇಂದ್ರ ಕಚೇರಿಗೆ ಸೋಮವಾರ ಬುಲೆಟ್ ಟ್ರೈನ್ ಮೂಲಕ ತೆರಳಿದ್ದಾರೆ. ಜಪಾನ್‌ನ ತಂತ್ರಜ್ಞಾನ, ಕೈಗಾರಿಕಾ ಅಭಿವೃದ್ಧಿ ಮತ್ತು ಸಾರಿಗೆ ವ್ಯವಸ್ಥೆಯನ್ನು ಹತ್ತಿರದಿಂದ ಅರಿಯುವ ಉದ್ದೇಶದಿಂದ ಈ ಭೇಟಿ ಮಹತ್ವ ಪಡೆದುಕೊಂಡಿದೆ.
Next Story

