x

ಹೂಡಿಕೆ ಬೇಟೆಗಾಗಿ ಜಪಾನ್‌ಗೆ ಡಿಕೆಶಿ.. ಟೋಕಿಯೊದಲ್ಲಿ ಭರ್ಜರಿ ಸ್ವಾಗತ

ಕರ್ನಾಟಕಕ್ಕೆ ಜಪಾನ್ ಹೂಡಿಕೆ ಆಕರ್ಷಿಸಲು ಪ್ರವಾಸದಲ್ಲಿರುವ ಸಿಎಂ ಡಿ.ಕೆ. ಶಿವಕುಮಾರ್‌ಗೆ ಟೋಕಿಯೊದಲ್ಲಿ ಆತ್ಮೀಯ ಸ್ವಾಗತ. ನಗ್ಮಾ ಮೊಹಮ್ಮದ್ ಮಲ್ಲಿಕ್, ಎಂ.ಬಿ. ಪಾಟೀಲ್ ಉಪಸ್ಥಿತಿ.


Click the Play button to hear this message in audio format

ಕರ್ನಾಟಕಕ್ಕೆ ಹೊಸ ಹೂಡಿಕೆಗಳನ್ನು ಆಕರ್ಷಿಸುವ ಮತ್ತು ಜಪಾನ್‌ನೊಂದಿಗೆ ಹೂಡಿಕೆ ಸಂಪರ್ಕವನ್ನು ಬಲಪಡಿಸುವ ಉದ್ದೇಶದಿಂದ ಜಪಾನ್ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಟೋಕಿಯೊದಲ್ಲಿ ಆತ್ಮೀಯ ಸ್ವಾಗತ ದೊರೆತಿದೆ. ಜಪಾನ್‌ನಲ್ಲಿರುವ ಭಾರತದ ರಾಯಭಾರಿ ನಗ್ಮಾ ಮೊಹಮ್ಮದ್ ಮಲ್ಲಿಕ್ ಹಾಗೂ ಟೋಕಿಯೊ ಕನ್ನಡ ಸಂಘದ ಸದಸ್ಯರು ಭಾನುವಾರ ಅವರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಭಾರಿ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಉಪಸ್ಥಿತರಿದ್ದರು. ಕರ್ನಾಟಕದ ಕೈಗಾರಿಕಾ ಕ್ಷೇತ್ರಕ್ಕೆ ಜಪಾನ್‌ನಿಂದ ಹೊಸ ಹೂಡಿಕೆಗಳನ್ನು ಸೆಳೆಯುವ ನಿಟ್ಟಿನಲ್ಲಿ ಈ ಪ್ರವಾಸ ಮಹತ್ವ ಪಡೆದಿದೆ.

Read More
Next Story