x

ಹವಾಮಾನ ಬಿಕ್ಕಟ್ಟಿಗೆ ರ‍್ಯಾಪ್ ಧ್ವನಿ: ‘ನೀರ್ ಕೊಡು’ ಮೂಲಕ ಜಾಗೃತಿ

ಆಲ್ಬಮ್‌ನಲ್ಲಿ ಒಟ್ಟು ಆರು ರ‍್ಯಾಪ್ ಹಾಡುಗಳಿದ್ದು, ದೇಶದ ವಿವಿಧ ಭಾಗಗಳ ಕಲಾವಿದರು ತಮ್ಮ ಪ್ರಾದೇಶಿಕ ಭಾಷೆಗಳಲ್ಲಿ ಹವಾಮಾನ ಬದಲಾವಣೆಯ ಕುರಿತು ಹಾಡುಗಳನ್ನು ರಚಿಸಿದ್ದಾರೆ.


Click the Play button to hear this message in audio format

ಹವಾಮಾನ ಬದಲಾವಣೆಯ ಪರಿಣಾಮಗಳು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವ ನಡುವೆಯೇ, ಜನರಲ್ಲಿ ಪರಿಸರ ಜಾಗೃತಿ ಮೂಡಿಸಲು ಆರು ಕಲಾವಿದರು ಸಂಗೀತದ ಮೊರೆ ಹೋಗಿದ್ದಾರೆ. ನೀರಿನ ಕೊರತೆ, ಅರಣ್ಯ ನಾಶ, ವಾಯುಮಾಲಿನ್ಯ ಮತ್ತು ಹೆಚ್ಚುತ್ತಿರುವ ತಾಪಮಾನ ಸೇರಿದಂತೆ ಹವಾಮಾನ ಬಿಕ್ಕಟ್ಟಿನ ವಿವಿಧ ಆಯಾಮಗಳನ್ನು ಒಳಗೊಂಡ ‘ದಿ ಕ್ಲೈಮೇಟ್ ಎಮರ್ಜೆನ್ಸಿ ಮಿಕ್ಸ್‌ಟೇಪ್’ ಎಂಬ ಬಹುಭಾಷಾ ರ‍್ಯಾಪ್ ಆಲ್ಬಮ್‌ ರೂಪಿಸಲಾಗಿದೆ.

ಆರು ಭಾಷೆಗಳಲ್ಲಿ ಹವಾಮಾನ ಬಿಕ್ಕಟ್ಟಿನ ಧ್ವನಿ

ಆಲ್ಬಮ್‌ನಲ್ಲಿ ಒಟ್ಟು ಆರು ರ‍್ಯಾಪ್ ಹಾಡುಗಳಿದ್ದು, ದೇಶದ ವಿವಿಧ ಭಾಗಗಳ ಕಲಾವಿದರು ತಮ್ಮ ಪ್ರಾದೇಶಿಕ ಭಾಷೆಗಳಲ್ಲಿ ಹವಾಮಾನ ಬದಲಾವಣೆಯ ಕುರಿತು ಹಾಡುಗಳನ್ನು ರಚಿಸಿದ್ದಾರೆ. ಸಂಗೀತದ ಮೂಲಕ ಪರಿಸರ ಸಮಸ್ಯೆಗಳನ್ನು ಜನರಿಗೆ ತಲುಪಿಸಿ, ಹವಾಮಾನ ಬಿಕ್ಕಟ್ಟಿನ ಗಂಭೀರತೆಯ ಬಗ್ಗೆ ಚರ್ಚೆ ಹುಟ್ಟುಹಾಕುವುದು ಈ ಪ್ರಯತ್ನದ ಉದ್ದೇಶವಾಗಿದೆ.

ಬೆಂಗಳೂರಿನ ನೀರಿನ ಸಮಸ್ಯೆ ಹೇಳುವ ‘ನೀರ್ ಕೊಡು’

ಬೆಂಗಳೂರು ಮೂಲದ ಕಲಾವಿದ ಕಾಳಿ ಅವರು ಕನ್ನಡದ ಲಯಕ್ಕೆ ಹಿಪ್-ಹಾಪ್‌ನ ವಿಶಿಷ್ಟ ಶೈಲಿಯನ್ನು ಬೆರೆಸಿ ‘ನೀರ್ ಕೊಡು’ ಹಾಡನ್ನು ರೂಪಿಸಿದ್ದಾರೆ. ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ನೀರಿನ ಕೊರತೆ, ಕುಸಿಯುತ್ತಿರುವ ಹಸಿರು ಪ್ರದೇಶಗಳು ಮತ್ತು ವರ್ಷದಿಂದ ವರ್ಷಕ್ಕೆ ಏರುತ್ತಿರುವ ತಾಪಮಾನ ಸೇರಿದಂತೆ ನಗರದ ಪರಿಸರ ಸಮಸ್ಯೆಗಳನ್ನು ಹಾಡು ಪ್ರತಿಬಿಂಬಿಸುತ್ತದೆ.

ಮುಂದಿನ ಬೇಸಿಗೆಯಲ್ಲಿ ಪ್ರಶ್ನೆ ಮೂಡಿಸುವ ಆಶಯ

ಹಾಡಿನ ಮೂಲಕ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಜನರು ಅರ್ಥಮಾಡಿಕೊಳ್ಳಬೇಕು ಎಂಬುದು ಕಾಳಿಯ ಆಶಯ. ಮುಂದಿನ ಬೇಸಿಗೆಯಲ್ಲಿ ಈ ಹಾಡನ್ನು ಕೇಳುವಾಗ, ಹಿಂದಿನ ಬೇಸಿಗೆಗಳಲ್ಲಿ ಪರಿಸ್ಥಿತಿ ಹೇಗಿತ್ತು ಮತ್ತು ಪರಿಸರದ ಬಗ್ಗೆ ನಾವು ತೋರಿದ ನಿರ್ಲಕ್ಷ್ಯದಿಂದ ಏನೆಲ್ಲ ಬದಲಾವಣೆಗಳಾಗಿವೆ ಎಂಬುದನ್ನು ಜನರು ಯೋಚಿಸುವಂತಾಗಬೇಕು ಎಂಬ ಉದ್ದೇಶದಿಂದ ಈ ಕೃತಿ ರೂಪಿಸಲಾಗಿದೆ.

Read More
Next Story