x

KPSC ಹಗರಣ: ನೀಟ್ ಮಾದರಿ ಅಭಿಯಾನಕ್ಕೆ CJP ತಯಾರಿ

ಸಿಜೆಪಿ ಸಹ ಸಂಚಾಲಕ ಅಶುತೋಷ್‌ ರಂಕಾ ನೇತೃತ್ವದ ನಿಯೋಗವು ಕರ್ನಾಟಕದ ಶಾಲೆಗಳಿಗೆ ಭೇಟಿ‌ ನೀಡಿ ಪರಿಶೀಲನೆ ನಡೆಸಿದೆ. ʼದ ಫೆಡರಲ್‌ ಕರ್ನಾಟಕʼ ಸಂದರ್ಶನದಲ್ಲಿ ಅಶುತೋಷ್‌ ರಂಕಾ ಅವರು KPSC ಹಗರಣ ಬಗ್ಗೆಯೂ ಮಾತವಾಡಿದ್ದಾರೆ.


'ಸ್ಕೂಲ್ ಠೀಕ್ ಕರೊ' ಅಭಿಯಾನದ ಅಂಗವಾಗಿ ಕಾಕ್ರೋಚ್ ಜನತಾ ಪಾರ್ಟಿಯ ನಿಯೋಗವು ಕರ್ನಾಟಕದ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಸಿಜೆಪಿ ಸಹ ಸಂಚಾಲಕ ಅಶುತೋಷ್‌ ರಾಂಕ ನೇತೃತ್ವದ ನಿಯೋಗ ಹಲವು ಶಾಲೆಗಳಿಗೆ ಭೇಟಿ‌ ನೀಡಿದೆ. ದ ಫೆಡರಲ್ ಕರ್ನಾಟಕ ಸಂದರ್ಶನದಲ್ಲಿಅಶುತೋಷ್‌ ರಾಂಕ ಹಾಗು ಸಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಆಪ್ರಿನ್ ನವಾಜ್ ಅವರು ಮಾತನಾಡಿದ್ದಾರೆ. ಸರ್ಕಾರಿ ಶಾಲೆಗಳ ಭೇಟಿಯಲ್ಲಿ ಕಂಡುಕೊಂಡ ಅಂಶಗಳ ಬಗ್ಗೆ ಮಾತನಾಡಿದ್ದಾರೆ. ಇದರ ಜತೆಗೆ ಕರ್ನಾಟಕ ಲೋಕಸೇವಾ ಆಯೋಗದ ಹಗರಣದ ಬಗ್ಗೆ ಹಾಗು ಹೋರಾಟದ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ.

ನಮ್ಮ‌ ತಂಡ ರಾಜ್ಯದ ಸುಮಾರು 50 ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಕಳೆದ ಎರಡು ದಿನಗಳಲ್ಲಿ ಬೆಂಗಳೂರಿನ ನಾಲ್ಕು ಶಾಲೆಗಳಿಗೆ ನಾನು ಭೇಟಿ ನೀಡಿದ್ದೇನೆ ಎಂದು ಹೇಳಿದರು. ಭೇಟಿಯ ವೇಳೆ ಶಾಲೆಯಲ್ಲಿ ಶುಚಿತ್ವ ಕೊರತೆ ಕಾಣಿಸಿತು. ಶೌಚಾಲಯಗಳಲ್ಲಿ ಶುಚಿತ್ವ ಇರಲಿಲ್ಲ, ಶಿಕ್ಷಕರ ಕೊರತೆಯಿತ್ತು ಕೆಲವು ಶಾಲೆಗಳಲ್ಲಿ ದುರಸ್ತಿಯಾಗಬೇಕು ಎಂದು ಹೇಳಿದರು

ಮುಂದಿನ ದಿನಗಳಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೂ ಭೇಟಿ ನೀಡುತ್ತೇನೆ ಎಂದು ಹೇಳಿದರು. ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರನ್ನು ಭೇಟಿ ಮಾಡಿದ್ದು ಶಾಲೆಗಳ ಭೇಟಿ ವೇಲೆ ಕಂಡುಕೊಂಡ ಅಂಶಗಳ ಬಗ್ಗೆ ಗಮನಕ್ಕೆ ತಂದಿದ್ದೇವೆ ಎಂದು ತಿಳಿಸಿದರು.

ಕರ್ನಾಟಕ ಲೋಕಸೇವಾ ಆಯೋಗದ ಹಗರಣದ ಬಗ್ಗೆ ಪ್ರತಿಕ್ರಿಯಿಸಿ ಇದು ನಮ್ಮ ಗಮನಕ್ಕೆ ಬಂದಿದೆ ಅನೇಕರು ಈ ಬಗ್ಗೆ ನಮ್ಮ ಗಮನ ಸೆಳೆದಿದ್ದಾರೆ ಎಂದು ಹೇಳಿದರು.ಕರ್ನಾಟಕ ಲೋಕಸೇವಾ ಆಯೋಗದ ಹಗರಣದ ಬಗ್ಗೆ ವಿದ್ಯಾರ್ಥಿಗಳು ನಡೆಸುವ ಪ್ರತಿಭಟನೆಗೆ ನಮ್ಮ ಬೆಂಬಲವಿರುತ್ತದೆ ಎಂದು ಹೇಳಿದರು. ಈ ಹಗರಣದ ಬಗ್ಗೆ ನಾವು ಸಂಶೋಧನೆ ಮಾಡುತ್ತಿದ್ದೇವೆ ಮುಂದಿನ ನಿಲುವು ಬಗ್ಗೆ ನಮ್ಮ ತಂಡದ ಜತೆ ಚರ್ಚಿಸುತ್ತೇವೆ ಎಂದು ಮಾಹಿತಿ ನೀಡಿದರು.

ಕೆಪಿಎಸ್ ಸಿ ಹಗರಣದ ಬಗ್ಗೆ ಸಿಜೆಪಿ ಮೃದುಧೋರಣೆಯಿಲ್ಲ ಇದರ ವಿರುದ್ಧ ಹೋರಾಟದ ಅಭಿಯಾನದ ಬಗ್ಗೆ ಅಬಿಜಿತ್ ಧೀಪ್ಕೆ ಬಗ್ಗೆ ಬೆಂಗಳೂರಿಗೆ ಆಗಮಿಸಿ ವಿದ್ಯಾರ್ಥಿಗಳ ಜತೆ ಚರ್ಚಿಸಲಿದ್ದಾರೆ ಎಂದು ಹೇಳಿದರು

Read More
Next Story