ಚಿಕ್ಕಣ್ಣ ಮದುವೆ ತಡವಾಗಲು ದರ್ಶನ್ ಕಾರಣ
ನಟ ಚಿಕ್ಕಣ್ಣ ಆಗಸ್ಟ್ 29-30ರಂದು ಮೈಸೂರಿನಲ್ಲಿ ಪಾವನಾ ಜೊತೆ ವಿವಾಹವಾಗಲಿದ್ದಾರೆ. ದರ್ಶನ್ ಜೈಲು ಸೇರಿದ ಬಳಿಕ ಮದುವೆ ಮುಂದೂಡಿದ್ದ ಚಿಕ್ಕಣ್ಣಗೆ ಇದೀಗ ದರ್ಶನ್ ಸಂದೇಶದ ಬಳಿಕ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಕನ್ನಡದ ಜನಪ್ರಿಯ ಹಾಸ್ಯ ನಟ ಚಿಕ್ಕಣ್ಣ ಇದೇ ಆಗಸ್ಟ್ 29 ಮತ್ತು 30ರಂದು ಮೈಸೂರಿನಲ್ಲಿ ತಮ್ಮ ಬಹುಕಾಲದ ಗೆಳತಿ ಪಾವನಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಆದರೆ ನಿಶ್ಚಿತಾರ್ಥವಾಗಿ ಎರಡು ವರ್ಷಗಳಾದರೂ ಮದುವೆ ಮುಂದೂಡಿದ್ದಕ್ಕೆ ಕಾರಣ ನಟ ದರ್ಶನ್ ಎನ್ನಲಾಗಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ್ದಾಗ, ಅವರೊಂದಿಗೆ ಅಣ್ಣ-ತಮ್ಮನ ಬಾಂಧವ್ಯ ಹೊಂದಿದ್ದ ಚಿಕ್ಕಣ್ಣ ತೀವ್ರವಾಗಿ ಮನನೊಂದಿದ್ದರು. ದರ್ಶನ್ ಎಲ್ಲಾ ಸಂಕಷ್ಟಗಳಿಂದ ಹೊರಬರುವವರೆಗೂ ತಾನು ಮದುವೆಯಾಗುವುದಿಲ್ಲ ಎಂದು ಆಪ್ತರ ಬಳಿ ಹೇಳಿಕೊಂಡಿದ್ದರೆಂದು ವರದಿಯಾಗಿದೆ. ಇತ್ತೀಚೆಗೆ ದರ್ಶನ್ ಅವರೇ ತಮ್ಮ ಪತ್ನಿ ವಿಜಯಲಕ್ಷ್ಮಿ ಮೂಲಕ, "ನನಗೋಸ್ಕರ ಕಾಯಬೇಡ, ಮದುವೆಯಾಗು" ಎಂದು ಸಂದೇಶ ಕಳುಹಿಸಿದ್ದಾರಂತೆ. ಕುಟುಂಬದವರ ಒತ್ತಾಯ ಮತ್ತು ದರ್ಶನ್ ಅವರ ಆಶೀರ್ವಾದದ ಬಳಿಕ ಇದೀಗ ಚಿಕ್ಕಣ್ಣ ಮದುವೆ ಸಿದ್ಧತೆಯಲ್ಲಿ ತೊಡಗಿದ್ದಾರೆ.
Next Story

