x

ಮಕ್ಕಳಿದ್ದ ಶಾಲಾ ಬಸ್‌ನ್ನು ರಾಂಗ್ ರೂಟ್‌ನಲ್ಲಿ ಚಲಾಯಿಸಿದ ಬಿಎಂಟಿಸಿ ಚಾಲಕ! ಮಕ್ಕಳ ಜೀವದ ಜೊತೆ ಚೆಲ್ಲಾಟವೇ?

ಬೆಂಗಳೂರಿನಲ್ಲಿ ಸಂಚಾರ ನಿಯಮಗಳ ಉಲ್ಲಂಘನೆ ಮುಂದುವರಿದಿದ್ದು, ಇದೀಗ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಿಎಂಟಿಸಿ ಬಸ್‌ವೊಂದು ರಾಂಗ್ ರೂಟ್‌ನಲ್ಲಿ ಚಲಿಸಿರುವ ಆರೋಪ ಕೇಳಿಬಂದಿದೆ


ಬೆಂಗಳೂರಿನಲ್ಲಿ ಸಂಚಾರ ನಿಯಮಗಳ ಉಲ್ಲಂಘನೆ ಮುಂದುವರಿದಿದ್ದು, ಇದೀಗ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಿಎಂಟಿಸಿ ಬಸ್‌ವೊಂದು ರಾಂಗ್ ರೂಟ್‌ನಲ್ಲಿ ಚಲಿಸಿರುವ ಆರೋಪ ಕೇಳಿಬಂದಿದೆ. ಬನಸ್ವಾಡಿಯ ರಾಮಸ್ವಾಮಿಪಾಳ್ಯ ಸಮೀಪ ಈ ಘಟನೆ ನಡೆದಿದ್ದು, ಬಸ್‌ನಲ್ಲಿ ಶಾಲಾ ಮಕ್ಕಳು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. KA 57 F2969 ನೋಂದಣಿ ಸಂಖ್ಯೆಯ ಬಿಎಂಟಿಸಿ ಬಸ್ ತಪ್ಪು ದಿಕ್ಕಿನಲ್ಲಿ ಚಲಿಸುತ್ತಿರುವುದನ್ನು ಆಂಬ್ಯುಲೆನ್ಸ್ ಸ್ವಯಂಸೇವಕ ಹಾಗೂ ಟ್ರಾಫಿಕ್ ವಾರ್ಡನ್ ಗಮನಿಸಿದ್ದಾರೆ. ಚಾಲಕನನ್ನು ತಡೆದು ಪ್ರಶ್ನಿಸಿದರೂ ಸಮರ್ಪಕ ಉತ್ತರ ನೀಡದೆ, ಎಚ್ಚರಿಕೆ ನಡುವೆಯೂ ಅದೇ ದಾರಿಯಲ್ಲಿ ಮುಂದುವರಿದಿದ್ದಾರೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿದ್ದಾರೆ. ಬಿಎಂಟಿಸಿ ಚಾಲಕರು ಸಂಚಾರ ನಿಯಮ ಪಾಲನೆ, ಲೇನ್ ಶಿಸ್ತು ಮತ್ತು ನಿಗದಿತ ಬಸ್ ನಿಲ್ದಾಣಗಳ ಬಳಕೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂಬ ಒತ್ತಾಯವೂ ವ್ಯಕ್ತವಾಗಿದೆ. ಸಾರ್ವಜನಿಕ ಸಾರಿಗೆ ವಾಹನಗಳ ಚಾಲಕರಿಗೆ ಕಡ್ಡಾಯ ಸಂಚಾರ ಜಾಗೃತಿ ತರಬೇತಿ ನೀಡಬೇಕೆಂಬ ಆಗ್ರಹ ಕೇಳಿಬಂದಿದೆ. ಮಕ್ಕಳ ಸುರಕ್ಷತೆಯೇ ಮೊದಲ ಆದ್ಯತೆಯಾಗಬೇಕು.

Read More
Next Story