ಬಿಡದಿ ಟೌನ್ಶಿಪ್ನಲ್ಲಿ 'ಅಪವಿತ್ರ ಮೈತ್ರಿ'; ಎಸ್. ಆರ್.ಹಿರೇಮಠ ಆರೋಪ
ಬಿಡದಿ ಯೋಜನೆ ಹಿಂದೆ ಪ್ರಭಾವಿಗಳ ಶಕ್ತಿಯಿದೆ. ದೇವೇಗೌಡ, ಡಿಕೆಶಿ ಅವರ ಬೇನಾಮಿ ಜಮೀನಿದೆ ಎಂದು ಎಸ್. ಆರ್.ಹಿರೇಮಠ ಗಂಭೀರ ಆರೋಪ ಮಾಡಿದ್ದಾರೆ. ದ ಫೆಡರಲ್ ಕರ್ನಾಟಕಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಹಲವು ವಿಚಾರಗಳನ್ನು ಅವರು ಬಹಿರಂಗಪಡಿಸಿದ್ದಾರೆ.
ಗಣಿ ಹಗರಣದ ವಿರುದ್ಧ ಸಮರ ಸಾರಿದ್ದ ಖ್ಯಾತ ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ ಅವರು ಇದೀಗ ಬಿಡದಿ ಟೌನ್ ಶಿಪ್ (Bidadi Township Project) ಯೋಜನೆಯ ಭೂಸ್ವಾಧೀನದ ಹಿಂದಿನ ಅಸಲಿಯತ್ತನ್ನು ಬಿಚ್ಚಿಟ್ಟಿದ್ದಾರೆ. ದ ಫೆಡರಲ್ ಕರ್ನಾಟಕಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿಎಸ್.ಆರ್. ಹಿರೇಮಠ ಹಲವು ವಿಚಾರಗಳನ್ನು ಹೇಳಿದ್ದಾರೆ. ಬಿಡದಿ ಯೋಜನೆ ಬಗ್ಗೆ ನಿವೃತ್ತ ನ್ಯಾಯಾಧೀಶರಾದ ಗೋಪಾಲಗೌಡರ ಅಧ್ಯಕ್ಷತೆಯಲ್ಲಿ ನಡೆದ ಸಾರ್ವಜನಿಕ ವಿಚಾರಣೆ ವರದಿ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು. ಈ ಬಿಡದಿ ಯೋಜನೆ ಯಾವುದೇ ನ್ಯಾಯಬದ್ದವಾಗಿಲ್ಲ ಎಂದು ಹೇಳಿದರು. 2013 ರ ಭೂ ಸ್ವಾಧೀನ ಕಾಯ್ದೆಯ ವಿರುದ್ಧವಾಗಿ ಬಿಡದಿ ಭೂ ಸ್ವಾಧೀನ ಯೋಜನೆಯಿದೆ. ಈ ಬಿಡದಿ ಯೋಜನೆ ಬಗ್ಗೆ ವಿಧಾನಸಭೆ ಹಾಗು ಪರಿಷತ್ ನಲ್ಲಿ ಚರ್ಚೆಯಾಗಬೇಕು ರೈತರ ವಿರೋಧದ ನಡುವೆ ಭೂ ಸ್ವಾಧೀನ ಮಾಡುವುದು ಬೇಡ ಈ ಯೋಜನೆ ಕೈ ಬಿಟ್ಟು ರೈತರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಅಭಿವೃದ್ಧಿ ಹಿನ್ನೆಲೆಯಲ್ಲಿ ಈ ಯೋಜನೆ ಎಂದು ಹೇಳುತ್ತಿರುವುದು ಸರಿಯಲ್ಲ. ಬಿಡದಿ ಭೂಸ್ವಾಧೀನ ಮಾಡುತ್ತಿರುವ ಜಮೀನಿನಲ್ಲಿ ಎಷ್ಟು ಫಲವತ್ತಾಗಿದೆ ದಿವಸಕ್ಕೆ 6 ಲಕ್ಷ ಲೀಟರ್ ಹಾಲು ಬರುತ್ತಿದೆ ತರಕಾರಿ ಬೆಳೆಯುತ್ತಿದ್ದಾರೆ ಇಂತಹ ಜಮೀನನ್ನು ಬಲವಂತವಾಗಿ ಕಸಿದುಕೊಳ್ಳುವುದು ಎಂತಹ ಅಭಿವೃದ್ಧಿ ಎಂದು ಪ್ರಶ್ನಿಸಿದರು. ಜನರಿಂದ ಆಯ್ಕೆ ಮಾಡಿದ ಜನಪ್ರತಿನಿಧಿಗಳು ಇದನ್ನು ಅರ್ಥಮಾಡಿಕೊಳ್ಳಬೇಕು.
ವಿರೋಧದ ನಡುವೆಯೂ ಬಿಡದಿ ಭೂಸ್ವಾಧೀನ ಮಾಡುತ್ತಿರುವ ಹಿಂದೆ ಪ್ರಭಾವಿಶಾಲಿ ಶಕ್ತಿಗಳಿವೆ ರಿಯಲ್ ಎಸ್ಟೇಟ್ ದಂಧೆಯಿದೆ ಎಂದು ಆರೋಪಿಸಿದರು. ಜನ 5 ವರ್ಷಕ್ಕೆ ಜನಪ್ರತಿನಿಧಿಗಳನ್ನು ಆರಿಸಿಕಳಿಸುತ್ತಾರೆ ಅವರು ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು ಅದನ್ನು ಬಿಟ್ಟು ಮಾಡಬಾರದ ಅಪರಾಧಗಳನ್ನು ಮಾಡಬಾರದು ಎಂದು ಹೇಳಿದರು.
ಬಿಡದಿ ಯೋಜನೆಯಲ್ಲಿ ಮಾಡಬಾರದ ದಂಧೆ ಮಾಡುತ್ತಿದ್ದಾರೆ. ಇಂತಹವರು ಜನಪ್ರತತಿನಿಧಿಗಳಾಗಲೂ ಅರ್ಹರಲ್ಲ. ಜನಪ್ರತಿನಿಧಿಗಳಿಗೆ ಉತ್ತರದಾಯಿತ್ವ ಇರಬೇಕು ಆದರೆ ಬಿಡದಿ ಭೂಸ್ವಾಧೀನ ಯೋಜನೆಯಲ್ಲಿ ದುರಹಂಕಾರ ಇದೆ. ದೆಹಲಿಯಲ್ಲಿ ಹೋರಾಟ ಆದಾಗ ಶಿಕ್ಷಣ ಸಚಿವರು ಕೆಳಗಿಳಿದ ಉದಾಹರಣೆ ಇದೆ. ಇದನ್ನು ಅರ್ಥಮಾಡಿಕೊಂಡು ಬಿಡದಿ ಭೂಸ್ವಾಧೀನ ಕೈ ಬಿಡಬೇಕು ಬಿಡದಿ ಯೋಜನೆ ವಿರುದ್ಧ ಎಲ್ಲರೂ ಹೋರಾಟ ಮಾಡಬೇಕು ಎ಼ಂದು ಕರೆ ನೀಡಿದರು.
ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯನೋ ಅಷ್ಟೆ ಸತ್ಯ ಬಿಡದಿ ಯೋಜನೆಯಲ್ಲಿ ಹಗರಣ ಆಗಿರುವುದು. ಈ ಯೋಜನೆಯ ಹಗರಣ ಎಕ್ಸಪೋಸ್ ಆಗಬೇಕು.ಬಿಡದಿ ಯೋಜನೆಯಲ್ಲಿ ಅಪವಿತ್ರ ಸಂಬಂಧವಿದೆ. ಬಿಡದಿ ಯೋಜನೆಯಲ್ಲಿ ರಿಯಲ್ ಎಸ್ಟೇಟ್ ಹಾಗು ಸರ್ಕಾರದ ನಡುವೆ ಅಪವಿತ್ರ ಸಂಬಂಧವಿದೆ. ಇದರ ಹಿಂದೆ ಯಾರಿದ್ದಾರೆ ಅಂತಾ ಎಲ್ಲರಿಗೂ ಗೊತ್ತಿದೆ ಎಂದರು.
ಬಿಡದಿ ಯೋಜನೆಗೆ ಜೆಡಿಎಸ್ ವಿರೋಧ ಬಗ್ಗೆಯೂ ಪ್ರತಿಕ್ರಿಯಿಸಿದ ಹಿರೇಮಠ ದೇವೇಗೌಡರಿಗೂ ಈ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ. ದೇವೇಗೌಡರ ಕುಟುಂಬ ಗೋಮಾಳ ಜಮೀನು ಕಬಳಿಸಿರುವ ಬಗ್ಗೆ ಸುಪ್ರೀಂಕೋರ್ಟಿನವರೆಗೂ ಕಾನೂನು ಹೋರಾಟ ನಡೆದಿದೆ. 80 ರ ದಶಕದಲ್ಲಿ ದೇವೇಗೌಡರು ಸಂಬಂಧಿ ಡಿ.ಸಿ.ತಮ್ಮಣ್ಣ ಹಾಗು ಕುಮಾರಸ್ವಾಮಿಗೆ ಗೋಮಾಳ ಜಮೀನು ನೀಡಿದ್ದಾರೆ ಎಂದು ಆರೋಪಿಸಿದರು.
ಬಿಡದಿ ಯೋಜನೆಯ ಭೂಮಿಯಲ್ಲಿ ದೇವೇಗೌಡರ ಸಂಬಂಧಿಗಳ ಜಮೀನಿದೆ . ಡಿ.ಕೆ.ಶಿವಕುಮಾರ್ ಅವರ ಬೇನಾಮಿ ಜಮೀನಿದೆ ಎಂದು ಆರೋಪ ಮಾಡಿದರು.

