ಅಮನ ಜೆ ಕುಮಾರ್ ಅವರ  ‘ದಿ ಮಿಸ್ಟಿಕಲ್ ವೇವ್ಸ್’ ಕೃತಿ ಬಿಡುಗಡೆ ಮಾಡಿದ ಸಿ.ಎನ್‌.ಆರ್. ರಾವ್
x

ಭಾರತ ರತ್ನ ಪ್ರೊ. ಸಿ.ಎನ್‌.ಆರ್. ರಾವ್ ಅವರಿಂದ ಯುವ ಕವಯಿತ್ರಿ ಅಮನ ಜೆ. ಕುಮಾರ್ ಅವರ 5ನೇ ಕವನ ಸಂಕಲನ ‘ದಿ ಮಿಸ್ಟಿಕಲ್ ವೇವ್ಸ್’ ಬಿಡುಗಡೆ. 

ಅಮನ ಜೆ ಕುಮಾರ್ ಅವರ ‘ದಿ ಮಿಸ್ಟಿಕಲ್ ವೇವ್ಸ್’ ಕೃತಿ ಬಿಡುಗಡೆ ಮಾಡಿದ ಸಿ.ಎನ್‌.ಆರ್. ರಾವ್

ಭಾರತ ರತ್ನ ಪ್ರೊ. ಸಿ.ಎನ್‌.ಆರ್. ರಾವ್ ಅವರಿಂದ ಯುವ ಕವಯಿತ್ರಿ ಅಮನ ಜೆ. ಕುಮಾರ್ ಅವರ 5ನೇ ಕವನ ಸಂಕಲನ ‘ದಿ ಮಿಸ್ಟಿಕಲ್ ವೇವ್ಸ್’ ಬಿಡುಗಡೆಯಾಗಿದೆ. ಭಾನು ಮುಷ್ಟಾಕ್ ಅವರ ಮುನ್ನುಡಿಯಿದೆ.


Click the Play button to hear this message in audio format

ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತ ರತ್ನ’ ಪುರಸ್ಕೃತ, ಖ್ಯಾತ ವಿಜ್ಞಾನಿ ಪ್ರೊಫೆಸರ್ ಸಿ.ಎನ್.ಆರ್. ರಾವ್ ಅವರು ಅಮನ ಜೆ. ಕುಮಾರ್ ಅವರ ಐದನೇ ಕೃತಿ “ದಿ ಮಿಸ್ಟಿಕಲ್ ವೇವ್ಸ್” ಪುಸ್ತಕವನ್ನು ಇತ್ತೀಚೆಗೆ ಬಿಡುಗಡೆ ಮಾಡಿದರು.

ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ಸಂಸ್ಥೆಯ ಗೌರವಾಧ್ಯಕ್ಷರು, ಲೈನಸ್ ಪಾಲಿಂಗ್ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕರು ಹಾಗೂ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಸಂಸ್ಥೆಯ ಗೌರವ ಪ್ರಾಧ್ಯಾಪಕ ಆಗಿರುವ ಪ್ರೊ. ಸಿ.ಎನ್.ಆರ್. ರಾವ್ ಅವರು ಕಿರಿಯ ಲೇಖಕಿ ಅಮನ ಜೆ. ಕುಮಾರ್ ಅವರ ಕಾವ್ಯ ಪ್ರತಿಭೆಯನ್ನು ಶ್ಲಾಘಿಸಿದರು. ಅಂತರರಾಷ್ಟ್ರೀಯ ಬೂಕರ್‌ ಪ್ರಶಸ್ತಿ ವಿಜೇತೆ ಸಾಹಿತಿ ಬಾನು ಮುಷ್ತಾಕ್‌ ಅವರು ಈ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ.

“ದಿ ಮಿಸ್ಟಿಕಲ್ ವೇವ್ಸ್” ಒಂದು ಅಪೂರ್ವ ಕವನ ಸಂಕಲನವಾಗಿದ್ದು, ಬ್ಲ್ಯಾಕ್‌ಔಟ್ ಕವನಗಳು ಮತ್ತು ಸೊನೆಟ್‌ಗಳ ಸುಂದರ ಸಮನ್ವಯವನ್ನು ಹೊಂದಿದೆ. ಒಬ್ಬ ವ್ಯಕ್ತಿಯ ಜೀವನ ಪಯಣದ ಪ್ರತಿಬಿಂಬದಂತಿರುವ ಈ ಕೃತಿಯು ಅನುಭವಗಳು, ನಿರೀಕ್ಷೆಗಳು ಮತ್ತು ಅಪಾರ ಆನಂದದ ಸಂಯೋಜನೆಯಾಗಿದೆ. ಕಾವ್ಯದ ಎರಡು ವಿಭಿನ್ನ ಶೈಲಿಗಳ ಅದ್ಭುತ ಸಂಗಮವಾಗಿರುವ ಈ ಕೃತಿಯ ಪ್ರತಿಯೊಂದು ಪದವೂ ತನ್ನೊಳಗೆ ಆಳವಾದ ಅರ್ಥ ಮತ್ತು ಚಿಂತನೆಯ ಸಾಗರವನ್ನೇ ಒಳಗೊಂಡಿದೆ. ಕಡಿಮೆ ಪದಗಳಲ್ಲಿ ಹೆಚ್ಚು ಅರ್ಥವನ್ನು ವ್ಯಕ್ತಪಡಿಸುವ ಈ ಕಾವ್ಯಲೋಕವು ಓದುಗರ ಕಲ್ಪನೆ ಹಾಗೂ ಬುದ್ಧಿವಂತಿಕೆಗೆ ಹೊಸ ಆಯಾಮವನ್ನು ನೀಡುತ್ತದೆ.


ಲೇಖಕಿ ಅಮನ ಜೆ. ಕುಮಾರ್ ಅವರು ಇತ್ತೀಚೆಗಷ್ಟೇ ಬೆಂಗಳೂರಿನ ಜಯನಗರದ ಆರ್.ವಿ. ಪಿಯು ಕಾಲೇಜಿನಲ್ಲಿ ದ್ವಿತೀಯ ವರ್ಷದ ಪರೀಕ್ಷೆ ಪೂರ್ಣಗೊಳಿಸಿದ್ದಾರೆ. ಅವರು ಕೇವಲ 11ನೇ ವಯಸ್ಸಿನಲ್ಲಿ, ಬಿಷಪ್ ಕಾಟನ್ ಗರ್ಲ್ಸ್ ಸ್ಕೂಲ್‌ನಲ್ಲಿ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಗಲೇ ಕವನಗಳು ಮತ್ತು ಪುಸ್ತಕಗಳನ್ನು ಬರೆಯಲು ಪ್ರಾರಂಭಿಸಿದ್ದರು.

ಇವರ ಮೂರು ಇಂಗ್ಲಿಷ್ ಕೃತಿಗಳಾದ “Echoes of Soulful Poems”, “World Amidst the Words”, “Galore of Mysteries” ಹಾಗೂ “Lafzon Ki Mehphil” ಎಂಬ ಹಿಂದಿ ಸಾಹಿತ್ಯ ಕೃತಿ ಸೇರಿದಂತೆ ಈಗಾಗಲೇ ನಾಲ್ಕು ಪುಸ್ತಕಗಳು ಪ್ರಕಟವಾಗಿ ಯಶಸ್ಸು ಕಂಡಿವೆ. ಸಾಹಿತ್ಯದ ಜೊತೆಗೆ ವಿದ್ಯಾಭ್ಯಾಸದಲ್ಲೂ ಮುಂಚೂಣಿಯಲ್ಲಿರುವ ಇವರ ಅನೇಕ ಲೇಖನಗಳು ಮತ್ತು ಕಥೆಗಳು ಪ್ರಮುಖ ಮುದ್ರಣ ಹಾಗೂ ಆನ್‌ಲೈನ್ ಮಾಧ್ಯಮಗಳಲ್ಲಿ ಪ್ರಕಟವಾಗಿವೆ.


ಅಮನ ಅವರ ಸಾಹಿತ್ಯ ಸಾಧನೆಯನ್ನು ಗುರುತಿಸಿ ಹಲವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ದಾಖಲೆಗಳ ಸಂಸ್ಥೆಗಳು ಗೌರವಿಸಿವೆ. ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ವರ್ಲ್ಡ್ ರೆಕಾರ್ಡ್ ಯೂನಿವರ್ಸಿಟಿಯಿಂದ “ಭಾರತದ ಅತಿ ಕಿರಿಯ ಕವಯಿತ್ರಿ” ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಇವರಿಗೆ ಗೋವಾ ರಾಜ್ಯಪಾಲರಿಂದ “ಕೌಟಿಲ್ಯ ಯಂಗೆಸ್ಟ್ ಪೊಯೆಟೆಸ್ ಆಫ್ ದಿ ಇಯರ್” ಪ್ರಶಸ್ತಿ ಲಭಿಸಿದೆ. ಏಪ್ರಿಲ್ 2020ರಿಂದ ನವೆಂಬರ್ 2021ರ ಅವಧಿಯಲ್ಲಿ ಬರೋಬ್ಬರಿ 337 ಕವನಗಳನ್ನು ರಚಿಸುವ ಮೂಲಕ ನೋಬಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ “ಅತ್ಯಂತ ಹೆಚ್ಚು ಕವನಗಳನ್ನು ರಚಿಸಿದ ಕವಯಿತ್ರಿ” ಎಂಬ ಗೌರವ ಇವರದ್ದಾಗಿದೆ.

ಇದರೊಂದಿಗೆ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌ನಿಂದ “ಗ್ರ್ಯಾಂಡ್ ಮಾಸ್ಟರ್” ಬಿರುದು, ಇಂಟರ್ನ್ಯಾಷನಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್, ವಂಡರ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಹಾಗೂ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸೇರಿದಂತೆ ಹಲವು ಜಾಗತಿಕ ವೇದಿಕೆಗಳಲ್ಲಿ ಇವರ ಸಾಧನೆ ದಾಖಲಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಲತಾ ಟಿ.ಎಸ್. ಅವರ ಪುತ್ರಿಯಾಗಿರುವ ಅಮನ, ಕಿರಿಯ ವಯಸ್ಸಿನಲ್ಲೇ ಸಾಹಿತ್ಯ ಲೋಕದಲ್ಲಿ ದೊಡ್ಡ ಮೈಲಿಗಲ್ಲು ಸ್ಥಾಪಿಸುತ್ತಿರುವ ಲೇಖಕಿ.

Read More
Next Story