SIRನಲ್ಲಿ ಅರ್ಧದಷ್ಟು ಮತದಾರರು ಕಣ್ಮರೆಯಾಗುವ ಆತಂಕ- ಸಿಎಂ ಡಿಕೆಶಿಯನ್ನು ಭೇಟಿಯಾದ ಪ್ರಕಾಶ್‌ ರಾಜ್‌ ನೇತೃತ್ವದ ನಿಯೋಗ
x

ಬೆಂಗಳೂರಿನ ಮತದಾರರ ಪಟ್ಟಿಯಿಂದ ಸುಮಾರು ಅರ್ಧದಷ್ಟು ಮತದಾರರು ಕಣ್ಮರೆಯಾಗುವ ಸಾಧ್ಯತೆಯಿದೆ ಎಂದು ಕಾರ್ಯಕರ್ತರ ನಿಯೋಗ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರಿಗೆ ಆತಂಕ ವ್ಯಕ್ತಪಡಿಸಿದೆ.

SIRನಲ್ಲಿ ಅರ್ಧದಷ್ಟು ಮತದಾರರು ಕಣ್ಮರೆಯಾಗುವ ಆತಂಕ- ಸಿಎಂ ಡಿಕೆಶಿಯನ್ನು ಭೇಟಿಯಾದ ಪ್ರಕಾಶ್‌ ರಾಜ್‌ ನೇತೃತ್ವದ ನಿಯೋಗ

ಬೆಂಗಳೂರಿನಲ್ಲಿ 1.09 ಕೋಟಿ ಮತದಾರರನ್ನು ಎಎಸ್‌ಡಿಡಿಒ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ಬಗ್ಗೆ ಗಮನ ಹರಿಸುವಂತೆ ನಿಯೋಗ ತನ್ನ ಮನವಿಯಲ್ಲಿ ತಿಳಿಸಿದೆ.


Click the Play button to hear this message in audio format

ಬೆಂಗಳೂರಿನ ಮತದಾರರ ಪಟ್ಟಿಯಿಂದ ಸುಮಾರು ಅರ್ಧದಷ್ಟು ಮತದಾರರು ಕಣ್ಮರೆಯಾಗುವ ಸಾಧ್ಯತೆಯಿದೆ ಎಂದು ನಟ ಪ್ರಕಾಶ್‌ ರಾಜ್‌ ನೇತೃತ್ವದ ಸಾಮಾಜಿಕ ಕಾರ್ಯಕರ್ತರ ನಿಯೋಗ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರನ್ನು ಭೇಟಿಯಾಗಿ ಕಳವಳ ವ್ಯಕ್ತಪಡಿಸಿದ್ದಾರೆ. ಚುನಾವಣಾ ಆಯೋಗ ತಿದ್ದುಪಡಿ ಕ್ರಮ ಕೈಗೊಳ್ಳದಿದ್ದರೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಬೇಕು ಎಂದು ನಿಯೋಗ ಒತ್ತಾಯಿಸಿದೆ.

ಸೋಮವಾರ ವಿಧಾನಮಂಡಲ ಅಧಿವೇಶನದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರನ್ನು ನಟ ಪ್ರಕಾಶ್‌ ರಾಜ್‌ ನೇತೃತ್ವದ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿತು. ಬೆಂಗಳೂರಿನಲ್ಲಿ 1.09 ಕೋಟಿ ಮತದಾರರನ್ನು ಎಎಸ್‌ಡಿಡಿಒ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ಬಗ್ಗೆ ಗಮನ ಹರಿಸುವಂತೆ ನಿಯೋಗ ತನ್ನ ಮನವಿಯಲ್ಲಿ ತಿಳಿಸಿದೆ.

ಬೆಂಗಳೂರಿನ ಸುಮಾರು 3,000 ಮತಗಟ್ಟೆಗಳಲ್ಲಿ ಡಿಲೀಟ್‌ ಆಗಲಿರುವ ಮತದಾರರ ಪ್ರಮಾಣ ಶೇ.60ಕ್ಕಿಂತ ಹೆಚ್ಚಿದೆ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ. ಹಲವು ಹಿರಿಯ ನಾಗರಿಕರನ್ನು ‘ಮೃತರು’ ಎಂದು ಗುರುತಿಸಲಾಗಿದೆ. ಎನ್ಯೂಮರೇಷನ್‌ ಫಾರ್ಮ್‌ ಅನ್ನು ಸರಿಯಾಗಿ ಭರ್ತಿ ಮಾಡಲು ಸಾಧ್ಯವಾಗದವರನ್ನು ‘ಇತರೆ’ ಎಂದು ಗುರುತಿಸಿ ಮತದಾರರ ಹೆಸರು ಅಳಿಸುವ ಪಟ್ಟಿಗೆ ಸೇರಿಸಲಾಗಿದೆ ಎಂದು ಆರೋಪಿಸಲಾಗಿದೆ.

2002ರ ಬಳಿಕ ಮನೆ ಬದಲಾಯಿಸಿರುವ ಹಲವರಿಗೆ ಎನ್ಯೂಮರೇಷನ್‌ ಫಾರ್ಮ್‌ಗಳು ತಲುಪಿಲ್ಲ. ಹಲವು ಕುಟುಂಬಗಳಿಗೂ ಇನ್ನೂ ಈ ಅರ್ಜಿಗಳು ಸಿಕ್ಕಿಲ್ಲ ಎಂದು ನಿಯೋಗ ಹೇಳಿದೆ. ಎಸ್‌ಐಆರ್‌ ಎನ್ಯೂಮರೇಷನ್‌ ಪ್ರಕ್ರಿಯೆಗೆ ಮೂರು ತಿಂಗಳ ಕಾಲಾವಕಾಶ ವಿಸ್ತರಿಸಬೇಕು ಎಂದು ನಿಯೋಗ ಒತ್ತಾಯಿಸಿದೆ. ಬೂತ್‌ ಮಟ್ಟದ ಅಧಿಕಾರಿಗಳು (BLO) ಮನೆಗಳಿಗೆ ಮರುಭೇಟಿ ನೀಡಿ, ಅರ್ಜಿಗಳನ್ನು ವಿತರಿಸಬೇಕು ಹಾಗೂ ‘ಅಬ್ಸೆಂಟ್’ ಅಥವಾ ‘ಅದರ್ಸ್‌’ ಎಂದು ಗುರುತಿಸಲ್ಪಟ್ಟ ಮತದಾರರನ್ನು ಸಂಪರ್ಕಿಸಬೇಕು ಎಂದು ಮನವಿ ಮಾಡಿದೆ.

ಎಸ್‌ಐಆರ್‌ ಕುರಿತು ವಿಧಾನಸಭೆಯಲ್ಲಿ ಚರ್ಚಿಸಿ ನಿರ್ಣಯ ಅಂಗೀಕರಿಸಬೇಕು. ಚುನಾವಣಾ ಆಯೋಗ ಸೂಕ್ತ ಕ್ರಮ ಕೈಗೊಳ್ಳಲು ವಿಫಲವಾದರೆ ಸರ್ಕಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಬೇಕು ಎಂದು ಕಾರ್ಯಕರ್ತರು ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರನ್ನು ಆಗ್ರಹಿಸಿದ್ದಾರೆ.

Read More
Next Story