ಬೆಂಗಳೂರಿನಲ್ಲಿ ಫುಟ್ಪಾತ್ ಒತ್ತುವರಿ, ಶಬ್ದ ಮಾಲಿನ್ಯಕ್ಕೆ ನಿವಾಸಿಗಳು ಹೈರಾಣ! |Bengaluru Footpath Encroachment
ಬೆಂಗಳೂರಿನ ಗಂಗಾನಗರ ವಾರ್ಡ್ನಲ್ಲಿರುವ ಎಚ್ಎಂಟಿ (HMT) ಮೈದಾನದಿಂದ 108B ಸರ್ಕಲ್ವರೆಗೆ ಮುಖ್ಯ ರಸ್ತೆಯ ಎರಡೂ ಬದಿಗಳಲ್ಲಿ ಹಣ್ಣಿನ ವ್ಯಾಪಾರಿಗಳು ಶಾಶ್ವತವಾಗಿ ಒತ್ತುವರಿ ಮಾಡಿಕೊಂಡಿರುವುದರಿಂದ ಸ್ಥಳೀಯ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ
ಬೆಂಗಳೂರಿನ ಗಂಗಾನಗರ ವಾರ್ಡ್ನಲ್ಲಿರುವ ಎಚ್ಎಂಟಿ (HMT) ಮೈದಾನದಿಂದ 108B ಸರ್ಕಲ್ವರೆಗೆ ಮುಖ್ಯ ರಸ್ತೆಯ ಎರಡೂ ಬದಿಗಳಲ್ಲಿ ಹಣ್ಣಿನ ವ್ಯಾಪಾರಿಗಳು ಶಾಶ್ವತವಾಗಿ ಒತ್ತುವರಿ ಮಾಡಿಕೊಂಡಿರುವುದರಿಂದ ಸ್ಥಳೀಯ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಒಂದೆಡೆ ರಸ್ತೆ ಕಿರಿದಾಗಿ ನಿರಂತರ ಟ್ರಾಫಿಕ್ ಜಾಮ್ ಮತ್ತು ವಾಹನಗಳ ಹಾರ್ನ್ ಶಬ್ದದಿಂದ ಜನರು ಬೇಸತ್ತಿದ್ದರೆ, ಮಧ್ಯಾಹ್ನದ ವೇಳೆ ಟ್ರಾಫಿಕ್ ಕಡಿಮೆಯಾದಾಗ ಮನೆಗಳ ಕಿಟಕಿಗಳ ಪಕ್ಕದಲ್ಲೇ ನಿಂತು ವ್ಯಾಪಾರಿಗಳು ಜೋರಾಗಿ ಹಾಡು, ರೀಲ್ಸ್ ಹಾಕುವುದು ಮತ್ತು ಫೋನ್ ಕರೆಗಳಲ್ಲಿ ಮಾತನಾಡುವುದು ನಿವಾಸಿಗಳ ನೆಮ್ಮದಿ ಕದಡುತ್ತಿದೆ. ಇದರ ಜೊತೆಗೆ, ಫುಟ್ಪಾತ್ಗಳು ಸಂಪೂರ್ಣವಾಗಿ ಬಂದ್ ಆಗಿರುವುದರಿಂದ ಪಾದಚಾರಿಗಳ ಸುರಕ್ಷತೆಗೂ ದೊಡ್ಡ ಸವಾಲಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.
Next Story

