x

ದೆಹಲಿ ದುರಂತದ ಬಳಿಕ ಚಿಂತನೆ: ಬೆಂಗಳೂರಿನ ಪಿಜಿ ಕಟ್ಟಡಗಳು ಎಷ್ಟು ಸೇಫ್‌? 12 ಲಕ್ಷ ನಿವಾಸಿಗಳು ಅಪಾಯದಲ್ಲಿ?

ಇತ್ತೀಚೆಗೆ ದೆಹಲಿಯಲ್ಲಿ ನಡೆದ ಪಿಜಿ ಕಟ್ಟಡ ದುರಂತ ಹಿನ್ವಲೆಯಲ್ಲಿ ಬೆಂಗಳೂರು ಪಿಜಿಗಳ ಮಾಲಿಕರು ಎಚ್ಚೆತ್ತುಕೊಂಡಿದ್ದು ಮಹತ್ವದ ಸಭೆ ಆಯೋಜಿಸಿದ್ದಾರೆ. ಸೆಪ್ಟೆಂಬರ್ 23 ರಂದು ನಡೆಯಲಿರುವ ಸಭೆಯಲ್ಲಿ ಪಿಜಿಗಳ ಸುರಕ್ಷತಾ ಕ್ರಮಗಳ ಬಗ್ಗೆ ಚರ್ಚಿಸಲಾಗುತ್ತದೆ.


Click the Play button to hear this message in audio format

ಇತ್ತೀಚೆಗೆ ದೆಹಲಿಯಲ್ಲಿ ಪಿಜಿ ಕಟ್ಟಡ ಕುಸಿತದಿಂದ ಭಾರಿ ಅನಾಹುತ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರು ಪಿಜಿಗಳ ಬಗ್ಗೆಯೂ ಈಗ ಮುಂಜಾಗ್ರತಾ ಕ್ರಮಗಳ ಬಗ್ಗೆ ಪ್ರಶ್ನೆ ಎದುರಾಗಿದೆ.ಬೆಂಗಳೂರು ಪಿಜಿಗಳು ಎಷ್ಟು ಸುರಕ್ಷಿತವಾಗಿದೆ ಏನು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಈ ಬಗ್ಗೆ ದ 'ಫೆಡರಲ್ ಕರ್ನಾಟಕ' ಪಿಜಿ ಮಾಲೀಕರ ಸಂಘದ ಅಧ್ಯಕ್ಷ ಡಿ.ಟಿ. ಅರುಣ್ ಕುಮಾರ್ ಜತೆ ಸಂದರ್ಶನ ನಡೆಸಲಾಗಿದೆ. ಸಂದರ್ಶನದಲ್ಲಿ ಹಲವು ವಿಚಾರಗಳನ್ನು ಮಾತನಾಡಿದ್ದಾರೆ.

ಸೆಪ್ಟೆಂಬರ್ 23 ರಂದು ಬೆಂಗಳೂರು ಪಿಜಿ ಮಾಲೀಕರ ಸಭೆ ಕರೆಯಲಾಗಿದ್ದು ಪಿಜಿಗಳ ಸುರಕ್ಷತಾ ಕ್ರಮಗಳ ಬಗ್ಗೆ ಚರ್ಚಿಸುತ್ತೇವೆ ಎಂದು ಹೇಳಿದರು.ಬೆಂಗಳೂರು ಪಶ್ಚಿಮ ಭಾಗದಲ್ಲಿ ಅತಿ ಹೆಚ್ಚು ಪಿಜಿಗಳಿರುವುದು ಹಾಗಾಗಿ ಅದೇ ಭಾಗದಲ್ಲಿ ಸಭೆ ಆಯೋಜನೆ ಮಾಡಲಾಗಿದೆ ಎಂದರು

ದೆಹಲಿಯ ಪಿಜಿಯಲ್ಲಿ ಆದ ದುರ್ಘಟನೆ ಬಳಿಕ ಈ ಸಭೆ ನಡೆಸಲಾಗುತ್ತಿದ್ದು ಪ್ರಮುಖವಾಗಿ ಅದೇ ಘಟನೆ ಹಿನ್ನೆಲೆಯಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಲಾಗುತ್ತದೆ ಎಂದು ಹೇಳಿದರು. ಬೆಂಗಳೂರಿನಲ್ಲಿ ಸುಮಾರು 5 ಸಾವಿರ ಪಿಜಿಗಳಿದ್ದು ಸುಮಾರು ೧೨ ಲಕ್ಷ ಪಿಜಿವಾಸಿಗಳಿದ್ದಾರೆ ಎಂದು ಮಾಹಿತಿ ನೀಡಿದರು.

ಕೆಲವು ಕಡೆ ಹಳೆಯ ಕಟ್ಟಡಗಳಲ್ಲಿ ಪಿಜಿ ನಡೆಸುತ್ತಿದ್ದಾರೆ ಅದು ಎಷ್ಟು ಸುರಕ್ಷಿತ ಮುಂದೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಮುಕ್ತವಾಗಿ ಚರ್ಚಿಸಲಾಗುತ್ತದೆ ಎಂದು ಹೇಳಿದರು. ಬೆಂಗಳೂರಿನಲ್ಲಿ ಎಲ್ಲಾ ರಾಜ್ಯದವರೂ ಪಿಜಿಗಳಲ್ಲಿದ್ದಾರೆ ಅದರಲ್ಲೂ ಹಳ್ಳಿ ಕಡೆಯಿಂದ ಕೆಲಸ ಹುಡುಕಿಕೊಂಡು ಬಂದಂತಹವರೂ ಇದ್ದಾರೆ ಇವರಿಗೆ ಕಡಿಮೆ ಬೆಲೆಯಲ್ಲಿ ಎಲ್ಲಾ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದರು.

ವಿಶೇಷವಾಗಿ ಮಹಿಳಾ ಪಿಜಿಗಳಲ್ಲಿ ಹೆಚ್ಚು ಜಾಗೃತಿ ವಹಿಸಬೇಕಾಗುತ್ತದೆ ಈಗ ಏನಾದರೂ ಕೊರತೆಯಿದ್ದರೆ ಅಥವಾ ಸೌಲಭ್ಯ ಸರಿಯಾಗಿಲ್ಲ ಎಂದರೆ ದೂರು ನೀಡುತ್ತಾರೆ ಎಂದು ಹೇಳಿದರು. ಅನಧಿಕೃತವಾಗಿ ಪಿಜಿಗಳನ್ನು ನಡೆಸುತ್ತಿರುವುದು ಗಮನಕ್ಕೆ ಬಂದಿದೆ ಆದರೆ ಗ್ರೇಟರ್ ಬೆಂಗಳೂರು ಅಧಿಕಾರಿಗಳು ಪಿಜಿಗಳಿಗೆ ನೀಡುವ ಅನುಮತಿ ಪ್ರಕ್ರಿಯೆಯನ್ನು ಸರಳಿಕರಣಗೊಳಿಸಬೇಕು ಎಂದು ಮನವಿ ಮಾಡಿದರು. ಸುರಕ್ಷತೆಯಲ್ಲಿ ಯಾವುದೇ ರಾಜಿಯಿಲ್ಲ ಎಂದು ಹೇಳಿದರು.

Read More
Next Story