ಪೀಣ್ಯ ಮೇಲ್ಸೇತುವೆ: ಯಶಸ್ವಿಯಾದ ಸಾಮರ್ಥ್ಯ ಪರೀಕ್ಷೆ, ವಾಹನ ಸಂಚಾರಕ್ಕೆ ಮುಕ್ತ
x

ಮೇಲ್ಸೇತುವೆಯ ಕೇಬಲ್ ಬದಲಾವಣೆ ಹಾಗೂ ಅಳವಡಿಸಲಾದ ಹೊಸ ಕೇಬಲ್‌ಗಳ ಸಾಮರ್ಥ್ಯ ಪರೀಕ್ಷೆ ನಡೆಸುವ ಸಲುವಾಗಿ ಕಳೆದ ನಾಲ್ಕು ದಿನಗಳಿಂದ ಮೇಲ್ಸೇತುವೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. 

ಪೀಣ್ಯ ಮೇಲ್ಸೇತುವೆ: ಯಶಸ್ವಿಯಾದ ಸಾಮರ್ಥ್ಯ ಪರೀಕ್ಷೆ, ವಾಹನ ಸಂಚಾರಕ್ಕೆ ಮುಕ್ತ

ಮೇಲ್ಸೇತುವೆಯ ಕೇಬಲ್ ಬದಲಾವಣೆ ಹಾಗೂ ಅಳವಡಿಸಲಾದ ಹೊಸ ಕೇಬಲ್‌ಗಳ ಸಾಮರ್ಥ್ಯ ಪರೀಕ್ಷೆ ನಡೆಸುವ ಸಲುವಾಗಿ ಕಳೆದ ನಾಲ್ಕು ದಿನಗಳಿಂದ ಮೇಲ್ಸೇತುವೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು.


Click the Play button to hear this message in audio format

ಸಿಲಿಕಾನ್ ಸಿಟಿ ನಮ್ಮ ಬೆಂಗಳೂರಿನ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ರಾಷ್ಟ್ರೀಯ ಹೆದ್ದಾರಿ-4ರ ಪೀಣ್ಯ ಮೇಲ್ಸೇತುವೆಯ (ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ) ಸಾಮರ್ಥ್ಯ ಪರೀಕ್ಷೆ ಯಶಸ್ವಿಯಾಗಿದ್ದು, ಶುಕ್ರವಾರ (ಮೇ 8) ಬೆಳಿಗ್ಗೆ 11 ಗಂಟೆಯ ಬಳಿಕ ವಾಹನ ಸಂಚಾರಕ್ಕೆ ಸಂಪೂರ್ಣ ಮುಕ್ತಗೊಳಿಸಲಾಗಿದೆ.

ಮೇಲ್ಸೇತುವೆಯ ಕೇಬಲ್ ಬದಲಾವಣೆ ಹಾಗೂ ಅಳವಡಿಸಲಾದ ಹೊಸ ಕೇಬಲ್‌ಗಳ ಸಾಮರ್ಥ್ಯ ಪರೀಕ್ಷೆ ನಡೆಸುವ ಸಲುವಾಗಿ ಕಳೆದ ನಾಲ್ಕು ದಿನಗಳಿಂದ ಮೇಲ್ಸೇತುವೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಇದೀಗ ಪರೀಕ್ಷೆ ಯಶಸ್ವಿಯಾದ ಬೆನ್ನಲ್ಲೇ ಕೆನ್ನಮೆಟಲ್ ವಿಡಿಯಾದ ಅಪ್ಪರ್ ರ್‍ಯಾಂಪ್‌ನಿಂದ ಎಸ್‌ಆರ್‌ಎಸ್ ಡೌನ್ ರ್‍ಯಾಂಪ್‌ವರೆಗೆ ಎರಡೂ ಕಡೆಗಳಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ನಿತ್ಯ ಸಂಚರಿಸುವ ಸಾವಿರಾರು ವಾಹನ ಸವಾರರಿಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.

32 ಕೋಟಿ ರೂಪಾಯಿ ವೆಚ್ಚ , 1,422 ಕೇಬಲ್‌ಗಳ ಬದಲಾವಣೆ:

ಸುರಕ್ಷತಾ ದೃಷ್ಟಿಯಿಂದ ಸೇತುವೆಯ ನಿರ್ವಹಣೆಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಅಂದಾಜು 32 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆಯಲ್ಲಿದ್ದ ಬರೋಬ್ಬರಿ 1,422 'ಪ್ರಿಸ್ಟ್ರೆಸ್ಸಿಂಗ್ ಕೇಬಲ್‌'ಗಳನ್ನು (Pre-stressing cables) ಬದಲಾಯಿಸಿ, ಹೊಸದಾಗಿ ಅಳವಡಿಸಲಾಗಿತ್ತು.

ಭಾರ ಪರೀಕ್ಷೆ ನಡೆದಿದ್ದು ಹೇಗೆ?

ಹೊಸ ಕೇಬಲ್‌ಗಳ ಅಳವಡಿಕೆ ಕಾರ್ಯ ಪೂರ್ಣಗೊಂಡ ಬಳಿಕ ಸೇತುವೆಯ ಸಾಮರ್ಥ್ಯ ಮತ್ತು ಸುರಕ್ಷತೆಯನ್ನು ವೈಜ್ಞಾನಿಕವಾಗಿ ದೃಢಪಡಿಸಿಕೊಳ್ಳಲು ಸತತ ನಾಲ್ಕು ದಿನಗಳ ಕಾಲ ನಿರಂತರ ಭಾರ ಪರೀಕ್ಷೆ ನಡೆಸಲಾಗಿದೆ. ತಲಾ 32 ಟನ್ ಭಾರವಿದ್ದ ಒಟ್ಟು ಎಂಟು ಟ್ರಕ್‌ಗಳನ್ನು ಆಯ್ಕೆ ಮಾಡಲಾದ ನಾಲ್ಕು ನಿರ್ದಿಷ್ಟ ಸ್ಪ್ಯಾನ್‌ಗಳ ಮೇಲೆ ನಿಲ್ಲಿಸಿ, ಸೇತುವೆಯ ರಚನಾತ್ಮಕ ಬದಲಾವಣೆಗಳನ್ನು ಗೇಜ್‌ಗಳ ಮೂಲಕ ಸೂಕ್ಷ್ಮವಾಗಿ ಅಳೆಯಲಾಗಿದೆ. ಈ ಪರೀಕ್ಷೆಯಲ್ಲಿ ಸೇತುವೆ ಸಂಪೂರ್ಣ ಸುಭದ್ರವಾಗಿದೆ ಎಂಬುದು ಖಚಿತವಾಗಿದೆ ಎಂದು ಮೂಲಗಳು ತಿಳಿಸಿವೆ.

ಪರೀಕ್ಷೆಯ ಜೊತೆಗೆ ಮೇಲ್ಸೇತುವೆಯ ಸ್ವಚ್ಛತಾ ಕಾರ್ಯವನ್ನೂ ಪೂರ್ಣಗೊಳಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

Read More
Next Story