ಪರಪ್ಪನ ಅಗ್ರಹಾರದಲ್ಲಿ ದೇಶದ ಮೊದಲ ಶಿಶುಪಾಲನಾ ಕೇಂದ್ರಕ್ಕೆ ಚಾಲನೆ
x
ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಶಿಶುಪಾಲನಾ ಕೇಂದ್ರ ಆರಂಭಿಸಲಾಯಿತು.

ಪರಪ್ಪನ ಅಗ್ರಹಾರದಲ್ಲಿ ದೇಶದ ಮೊದಲ ಶಿಶುಪಾಲನಾ ಕೇಂದ್ರಕ್ಕೆ ಚಾಲನೆ

ಇಲ್ಲಿ ಮಕ್ಕಳ ಮಾನಸಿಕ ಮತ್ತು ಭಾವನಾತ್ಮಕ ವಿಕಸನಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಜೈಲಿನ ಮಂಕಾದ ಗೋಡೆಗಳ ಮೇಲೆ ಸುಂದರ ವರ್ಣಚಿತ್ರಗಳನ್ನು ಬಿಡಿಸುವ ಮೂಲಕ ಮಕ್ಕಳಲ್ಲಿ ಉತ್ಸಾಹ ಮೂಡಿಸಲಾಗಿದೆ.


ಅಕ್ರಮ ಚಟುವಟಿಕೆ ಹಾಗೂ ವಿವಾದಗಳಿಂದಲೇ ಸದಾ ಸುದ್ದಿಯಲ್ಲಿದ್ದ ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹವು ಈಗ ದೇಶಕ್ಕೆ ಮಾದರಿಯಾಗುವಂತಹ ಬದಲಾವಣೆಗೆ ಸಾಕ್ಷಿಯಾಗಿದೆ. ತಾಯಂದಿರು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿರುವ ಪುಟ್ಟ ಕಂದಮ್ಮಗಳ ಭವಿಷ್ಯ ಹಾಳಾಗಬಾರದು ಎಂಬ ಉದ್ದೇಶದಿಂದ ಕರ್ನಾಟಕ ಮಕ್ಕಳ ರಕ್ಷಣಾ ನಿರ್ದೇಶನಾಲಯವು ಜೈಲಿನ ಆವರಣದಲ್ಲಿ ದೇಶದ ಮೊದಲ ವಿಶೇಷ ಶಿಶುಪಾಲನಾ ಕೇಂದ್ರ ಆರಂಭಿಸಿದೆ.

ತಾಯಿಗೆ ಶಿಕ್ಷೆ, ಮಗುವಿಗೆ ಶಿಕ್ಷಣ

ಸಾಮಾನ್ಯವಾಗಿ ಮಹಿಳಾ ಕೈದಿಗಳೊಂದಿಗೆ ಇರುವ 6 ವರ್ಷದೊಳಗಿನ ಮಕ್ಕಳು ಅನಿವಾರ್ಯವಾಗಿ ಜೈಲಿನ ನಾಲ್ಕು ಗೋಡೆಗಳ ಮಧ್ಯೆ ಬೆಳೆಯಬೇಕಾಗುತ್ತದೆ. ಈ ಮಕ್ಕಳ ಎಳೆ ಮನಸ್ಸಿನ ಮೇಲೆ ಜೈಲಿನ ವಾತಾವರಣ ನಕಾರಾತ್ಮಕ ಪ್ರಭಾವ ಬೀರಬಾರದು ಎನ್ನುವುದೇ ಈ ಕೇಂದ್ರದ ಮೂಲ ಉದ್ದೇಶ. ಸುಪ್ರೀಂ ಕೋರ್ಟ್ ನಿಯಮಗಳ ಅನ್ವಯ 6 ವರ್ಷದವರೆಗಿನ ಮಕ್ಕಳು ತಾಯಿಯೊಂದಿಗೆ ಇರಲು ಅವಕಾಶವಿದ್ದು, ಅವರ ಸರ್ವಾಂಗೀಣ ಬೆಳವಣಿಗೆಗೆ ಇಲ್ಲಿ ‘ಬಾಲ ಸ್ನೇಹಿ’ ವ್ಯವಸ್ಥೆ ಮಾಡಲಾಗಿದೆ.

ಕಲಿಕೆಯ ತಾಣವಾದ ಕಠಿಣ ಕಾರಾಗೃಹ

ಕೇವಲ ಅಕ್ಷರ ಕಲಿಯುವುದಷ್ಟೇ ಈ ಕೇಂದ್ರದ ಮಿತಿಯಲ್ಲ. ಇಲ್ಲಿ ಮಕ್ಕಳ ಮಾನಸಿಕ ಮತ್ತು ಭಾವನಾತ್ಮಕ ವಿಕಸನಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಜೈಲಿನ ಮಂಕಾದ ಗೋಡೆಗಳ ಮೇಲೆ ಸುಂದರ ವರ್ಣಚಿತ್ರಗಳನ್ನು ಬಿಡಿಸುವ ಮೂಲಕ ಮಕ್ಕಳಲ್ಲಿ ಉತ್ಸಾಹ ಮೂಡಿಸಲಾಗಿದೆ. ಇಬ್ಬರು ಪರಿಣತ ಶಿಕ್ಷಕರನ್ನು ನೇಮಿಸಲಾಗಿದ್ದು, ಅವರು ಮಕ್ಕಳಿಗೆ ವರ್ಣಮಾಲೆ, ಅಂಕಿಸಂಖ್ಯೆಗಳ ಜೊತೆಗೆ ಪ್ರಾಸಬದ್ಧ ಹಾಡುಗಳು ಮತ್ತು ಸೃಜನಶೀಲ ಕಲೆಗಳನ್ನು ಹೇಳಿಕೊಡುತ್ತಿದ್ದಾರೆ. ಇಂದಿನ ಸಮಾಜದಲ್ಲಿ ಮಕ್ಕಳು ಸುರಕ್ಷಿತವಾಗಿರಲು ಅಗತ್ಯವಾದ 'ಗುಡ್ ಟಚ್' ಮತ್ತು 'ಬ್ಯಾಡ್ ಟಚ್' ಬಗ್ಗೆಯೂ ಇಲ್ಲಿ ಅರಿವು ಮೂಡಿಸಲಾಗುತ್ತಿದೆ.

9 ಪುಟ್ಟ ಜೀವಗಳಿಗೆ ಹೊಸ ಆಸರೆ

ಪ್ರಸ್ತುತ ಈ ಕೇಂದ್ರದಲ್ಲಿ ಒಂಬತ್ತು ಮಕ್ಕಳು ಆಶ್ರಯ ಪಡೆದಿದ್ದಾರೆ. ವಿಶೇಷವೆಂದರೆ, ಇವರಲ್ಲಿ ಮೂವರು ವಿದೇಶಿ ಪ್ರಜೆಗಳ ಮಕ್ಕಳಾಗಿದ್ದು, ಭಾಷೆ ಮತ್ತು ಸಂಸ್ಕೃತಿಯ ಗಡಿ ದಾಟಿ ಎಲ್ಲರಿಗೂ ಸಮಾನ ಶಿಕ್ಷಣ ನೀಡಲಾಗುತ್ತಿದೆ. ಮಕ್ಕಳಿಗೆ ಶಿಸ್ತು ಕಲಿಸಲು 'ಟೇಬಲ್ ಮ್ಯಾನರ್ಸ್' (ಊಟದ ಕ್ರಮಗಳು) ಹಾಗೂ ಹಿರಿಯರಿಗೆ ಗೌರವ ನೀಡುವಂತಹ ಸಾಮಾಜಿಕ ಮೌಲ್ಯಗಳನ್ನು ಧಾರೆ ಎರೆಯಲಾಗುತ್ತಿದೆ.

ಕೇಂದ್ರ ಸರ್ಕಾರದ ‘ಮಿಷನ್ ವಾತ್ಸಲ್ಯ’ ಮತ್ತು ಬಾಲನ್ಯಾಯ ಕಾಯ್ದೆಯಡಿ ಈ ಸೌಲಭ್ಯಗಳನ್ನು ಒದಗಿಸಲಾಗಿದೆ. ಒಂದು ವೇಳೆ ಮಗುವಿಗೆ 6 ವರ್ಷ ತುಂಬಿದ ನಂತರ ಮನೆಯವರು ಜವಾಬ್ದಾರಿ ವಹಿಸಿಕೊಳ್ಳಲು ಮುಂದೆ ಬಾರದಿದ್ದರೆ, ಅಂತಹ ಮಕ್ಕಳನ್ನು ಎನ್.ಜಿ.ಒಗಳ ಮೂಲಕ ಉತ್ತಮ ಶಾಲೆಗಳಿಗೆ ಸೇರಿಸಿ ಶಿಕ್ಷಣ ಮುಂದುವರಿಸಲು ನಿರ್ದೇಶನಾಲಯ ಸಕಲ ಸಿದ್ಧತೆ ಮಾಡಿಕೊಂಡಿದೆ. ಜೈಲು ಕೇವಲ ಶಿಕ್ಷಿಸುವ ಸ್ಥಳವಾಗಬಾರದು, ಅದು ಪರಿವರ್ತನಾ ಕೇಂದ್ರವಾಗಬೇಕು. ಈ ಶಿಶುಪಾಲನಾ ಕೇಂದ್ರದ ಮೂಲಕ ನಾವು ಅಪರಾಧ ಮಾಡದ ಮಕ್ಕಳಿಗೆ ನ್ಯಾಯಯುತವಾದ ಬಾಲ್ಯ ಮತ್ತು ಶಿಕ್ಷಣವನ್ನು ಒದಗಿಸುತ್ತಿದ್ದೇವೆ ಎಂದು ನ ಅಗ್ರಹಾರದ ಈ ನಡೆ ಇಡೀ ದೇಶದ ಕಾರಾಗೃಹ ವ್ಯವಸ್ಥೆಗೆ ಹೊಸ ದಿಕ್ಸೂಚಿಯಾಗಿದ್ದು, ಜೈಲಿನ ಕಠಿಣ ವಾತಾವರಣವನ್ನೂ ‘ಕಲಿಕೆಯ ತಾಣ’ವನ್ನಾಗಿ ಬದಲಿಸಬಹುದೆಂದು ಸಾಬೀತುಪಡಿಸಿದೆ.

ಮಕ್ಕಳ ಸರ್ವಾಂಗೀಣ ಅಭಿವೃದ್ಧಿ

ಮಕ್ಕಳಲ್ಲಿ ಶಿಸ್ತು ಮತ್ತು ವ್ಯಕ್ತಿತ್ವ ವಿಕಸನ ಬೆಳೆಸಲು ಊಟದ ಕ್ರಮಗಳು (Table Manners), ಹಿರಿಯರಿಗೆ ಗೌರವ ನೀಡುವುದು ಮುಂತಾದ ಸಾಮಾಜಿಕ ಕೌಶಲಗಳನ್ನು ಕಲಿಸಲಾಗುತ್ತಿದೆ. ಜೈಲು ಕೈಪಿಡಿ ಮತ್ತು ಸುಪ್ರೀಂ ಕೋರ್ಟ್ ನಿಯಮದಂತೆ 6 ವರ್ಷದೊಳಗಿನ ಮಕ್ಕಳಿಗೆ ತಾಯಿಯೊಂದಿಗೆ ಇರಲು ಅವಕಾಶವಿದ್ದು, ಅವರ ರಕ್ಷಣೆ ಮತ್ತು ಶಾಲಾ ಸಿದ್ಧತೆಯ ಜವಾಬ್ದಾರಿಯನ್ನು ಈ ಕೇಂದ್ರ ಹೊತ್ತಿದೆ. ಒಂದು ವೇಳೆ ಮಗುವಿಗೆ ಆರು ವರ್ಷ ತುಂಬಿದ ನಂತರ ಕುಟುಂಬದವರು ಜವಾಬ್ದಾರಿ ವಹಿಸಿಕೊಳ್ಳದಿದ್ದರೆ, ಎನ್.ಜಿ.ಒಗಳ ಮೂಲಕ ಶಿಕ್ಷಣ ನೀಡಲು ಕ್ರಮ ವಹಿಸಲಾಗುತ್ತದೆ.

Read More
Next Story