x

ಬೆಂಗಳೂರು ಮೆಟ್ರೋದಲ್ಲಿ ವಿದ್ಯುತ್ ವ್ಯವಸ್ಥೆ ಪರಿಶೀಲನೆ ಶುರು

ಬೆಂಗಳೂರಿನ ನಮ್ಮ ಮೆಟ್ರೋ ಪರೀಕ್ಷಾರ್ಥ ಸಂಚಾರಕ್ಕೆ ಸಿದ್ಧತೆ ನಡೆಸುತ್ತಿದೆ. ವಿದ್ಯುತ್ ವ್ಯವಸ್ಥೆ, ರೈಲುಗಳ ಸುರಕ್ಷತೆ ಪರಿಶೀಲನೆ ನಡೆಯುತ್ತಿದ್ದು, ದೀಪಾವಳಿ ಬಳಿಕ ಟ್ರಯಲ್ ರನ್ ಆರಂಭವಾಗುವ ನಿರೀಕ್ಷೆಯಿದೆ.


Click the Play button to hear this message in audio format

ಬೆಂಗಳೂರು ಮೆಟ್ರೋದಲ್ಲಿ ಪರೀಕ್ಷಾರ್ಥ ಸಂಚಾರಕ್ಕೆ ಸಂಬಂಧಿಸಿದಂತೆ ವಿದ್ಯುತ್ ವ್ಯವಸ್ಥೆಗಳ ಪರಿಶೀಲನೆ, ರೈಲುಗಳ ಸಿದ್ಧತೆ ಹಾಗೂ ಸುರಕ್ಷತಾ ಮಾನದಂಡಗಳ ತಪಾಸಣೆ ನಡೆಸಲಾಗುತ್ತಿದೆ. ಹಳಿಗಳಲ್ಲಿ ಯಾವುದೇ ನಿಯಮ ಉಲ್ಲಂಘನೆ ಅಥವಾ ಅಡೆತಡೆಗಳಿವೆಯೇ ಎಂಬುದನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ದೀಪಾವಳಿ ಹಬ್ಬದ ಬಳಿಕ ಕಾರ್ಮಿಕರ ಲಭ್ಯತೆಯನ್ನು ಆಧರಿಸಿ ಮುಂದಿನ ವಾರದಿಂದ ಪರೀಕ್ಷಾರ್ಥ ಸಂಚಾರ ಮತ್ತೆ ಆರಂಭವಾಗುವ ನಿರೀಕ್ಷೆಯಿದೆ. ಮೆಟ್ರೋ ರೈಲುಗಳ ಪರೀಕ್ಷೆ ಯಾವಾಗ ಪೂರ್ಣಗೊಳ್ಳಲಿದೆ? ಪ್ರಯಾಣಿಕರ ಸಂಚಾರಕ್ಕೆ ಯಾವಾಗ ಸಿದ್ಧವಾಗಲಿದೆ ಎಂಬ ಕುತೂಹಲ ಮೂಡಿದೆ.

Read More
Next Story