ಬೆಂಗಳೂರಿನಲ್ಲಿ ವರುಣನ ಆರ್ಭಟ; ರಸ್ತೆಗಳು ಜಲಾವೃತ, ಸಂಚಾರ ಅಸ್ತವ್ಯಸ್ತ
x

ಬೆಂಗಳೂರಿನಲ್ಲಿ ವರುಣನ ಆರ್ಭಟ; ರಸ್ತೆಗಳು ಜಲಾವೃತ, ಸಂಚಾರ ಅಸ್ತವ್ಯಸ್ತ

ಬಿರುಗಾಳಿ ಸಹಿತ ಮಳೆಗೆ ವಿಜ್ಞಾನ ನಗರ ಹಾಗೂ ವಿದ್ಯಾಸೌಧ ಶಾಲೆಯ ಬಳಿ ಬೃಹತ್ ಮರಗಳು ಧರೆಗುರುಳಿವೆ. ಇದರಿಂದ ಕಗ್ಗದಾಸಪುರ ಮಾರ್ಗದಲ್ಲಿ ಭಾರೀ ವಾಹನ ದಟ್ಟಣೆ ಎದುರಾಗಿದೆ.


ಬೆಂಗಳೂರಿನಲ್ಲಿ ಬುಧವಾರ ಸಂಜೆ ಸುರಿದ ಭಾರೀ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನಗರದ ಪ್ರಮುಖ ರಸ್ತೆಗಳು, ಮೇಲ್ಸೇತುವೆಗಳು ಮತ್ತು ಅಂಡರ್ಪಾಸ್ಗಳು ನೀರಿನಿಂದ ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

ಪೀಣ್ಯ ಮೇಲ್ಸೇತುವೆಯಲ್ಲಿ ಭಾರಿ ಪ್ರಮಾಣದ ನೀರು ನಿಂತ ಕಾರಣ ಸಂಚಾರ ದಟ್ಟಣೆ ಉಂಟಾಯಿತು. ಬಿರುಗಾಳಿ ಸಹಿತ ಮಳೆಗೆ ವಿಜ್ಞಾನ ನಗರ ಹಾಗೂ ವಿದ್ಯಾಸೌಧ ಶಾಲೆಯ ಬಳಿ ಬೃಹತ್ ಮರಗಳು ಧರೆಗುರುಳಿವೆ. ಇದರಿಂದ ಕಗ್ಗದಾಸಪುರ ಮಾರ್ಗದಲ್ಲಿ ಭಾರೀ ವಾಹನ ದಟ್ಟಣೆ ಎದುರಾಗಿದೆ. ಮಳೆಯಿಂದಾಗಿ ಹೆಬ್ಬಾಳ ರಿಂಗ್ ರಸ್ತೆಯಲ್ಲೂ ಟ್ರಾಫಿಕ್ ಜಾಮ್ ಆಗಿತ್ತು. ಯೋಗೀಶ್ವರನಗರ ಬಳಿ ಮಳೆ ನೀರು ಶೇಖರಣೆಯಾಗಿದ್ದರಿಂದ ಹೆಬ್ಬಾಳ ರಿಂಗ್ ರಸ್ತೆ ಕಡೆಗೆ ವಾಹನಗಳು ನಿಧಾನವಾಗಿ ಸಾಗಿದವು .

ಯಲಹಂಕದ ವಿದ್ಯಾಶಿಲ್ಪ ರೈಲ್ವೆ ಕೆಳಸೇತುವೆ, ರಾಷ್ಟ್ರೋತ್ಥಾನ ಮೇಲ್ಸೇತುವೆ, ಚೌಡಪ್ಪ ಲೇಔಟ್, ಥಣಿಸಂದ್ರ ರಸ್ತೆ, ರೇನ್ಬೋ ಆಸ್ಪತ್ರೆಯಿಂದ ಕಾರ್ತಿಕ್ ನಗರ, ಯಲಹಂಕ ಬಿಎಸ್ಎಫ್‌ನಿಂದ ವಿಮಾನ ನಿಲ್ದಾಣ ರಸ್ತೆ ಹಾಗೂ ಮಹದೇವಪುರದಿಂದ ಲೋರಿ ಜಂಕ್ಷನ್ವರೆಗೆ ರಸ್ತೆ ಮೇಲೆ ನೀರು ನಿಂತು ಸವಾರರು ಪರದಾಡಿದರು.

ವಾಹನ ಸವಾರರು ಜಲಾವೃತಗೊಂಡಿರುವ ಅಂಡರ್‌ಪಾಸ್‌ಗಳು ಹಾಗೂ ಮರಗಳು ಬಿದ್ದಿರುವ ಮಾರ್ಗಗಳನ್ನು ತಪ್ಪಿಸಿ, ಪರ್ಯಾಯ ರಸ್ತೆಗಳನ್ನು ಬಳಸಲು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.

Read More
Next Story