ಬೌರಿಂಗ್‌ ಆಸ್ಪತ್ರೆ ಗೋಡೆ ಕುಸಿತ ದುರಂತ| ಆಡಳಿತ ವೈಫಲ್ಯದಿಂದ ಅವಗಢ; ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಡ
x
ಬೌರಿಂಗ್‌ ಆಸ್ಪತ್ರೆ ಬಳಿ ಗೋಡೆ ಕುಸಿದಿರುವುದು

ಬೌರಿಂಗ್‌ ಆಸ್ಪತ್ರೆ ಗೋಡೆ ಕುಸಿತ ದುರಂತ| ಆಡಳಿತ ವೈಫಲ್ಯದಿಂದ ಅವಗಢ; ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಡ

ಬೌರಿಂಗ್‌ ಆಸ್ಪತ್ರೆಯಲ್ಲದೇ ಬೆಂಗಳೂರಿನ ಬಿನ್ನಿಮಿಲ್‌ ಸೇರಿದಂತೆ ಹಲವೆಡೆ ಹಳೆಯ ಕಟ್ಟಡಗಳು ಹಾಗೂ ಗೋಡೆಗಳಿವೆ. ಸರ್ಕಾರವು ಮುಂಗಾರು ಪೂರ್ವದಲ್ಲೇ ಎಚ್ಚೆತ್ತುಕೊಳ್ಳದೇ ಹೋದರೆ ಇನ್ನಷ್ಟು ಅವಗಢಗಳು ಸಂಭವಿಸುವ ಸಾಧ್ಯತೆ ಇರಲಿದೆ ಎಂದು ಸಾರ್ವಜನಿಕರು ದೂರಿದ್ದಾರೆ.


ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ಗೋಡೆ ಕುಸಿದು ಏಳು ಮಂದಿ ಮೃತಪಟ್ಟಿರುವ ಘಟನೆಯು ಆಡಳಿತದ ವೈಫಲ್ಯಕ್ಕೆ ಹಿಡಿದ ಕನ್ನಡಿಯಂತಿದೆ. ಬೆಂಗಳೂರಿನಲ್ಲಿ ಐದು ದಿನ ಧಾರಾಕಾರ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದರೂ ಎಚ್ಚೆತ್ತುಕೊಳ್ಳದ ಜಿಬಿಎ ಅಧಿಕಾರಿಗಳ ಲೋಪಕ್ಕೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಗರಂ ಆಗಿದ್ದಾರೆ.

ಬೌರಿಂಗ್ ಆಸ್ಪತ್ರೆಯ ಗೋಡೆ ತುಂಬಾ ಹಳೆಯದ್ದಾಗಿತ್ತು. ಗೋಡೆಯ ಸಮೀಪ ಜೆಸಿಬಿ ಮೂಲಕ ಚರಂಡಿ ಕೆಲಸ ಮಾಡಿದ್ದರಿಂದ ಗೋಡೆ ತುಂಬಾ ಸಡಿಲವಾಗಿತ್ತು. ಬುಧವಾರ ಸಂಜೆ ರಭಸ ಮಳೆ ಸುರಿದಿದ್ದರಿಂದ ಗೋಡೆ ಕುಸಿದಿದೆ. ಈ ವೇಳೆ ಗೋಡೆಯ ಪಕ್ಕದಲ್ಲೇ ಬೀದಿ ಬದಿ ವ್ಯಾಪಾರ ಮಾಡುತ್ತಿದ್ದವರು ಪ್ರಾಣ ಕಳೆದುಕೊಂಡಿದ್ದಾರೆ.

ಬೌರಿಂಗ್‌ ಆಸ್ಪತ್ರೆಯಲ್ಲದೇ ಬೆಂಗಳೂರಿನ ಬಿನ್ನಿಮಿಲ್‌ ಸೇರಿದಂತೆ ಹಲವೆಡೆ ಹಳೆಯ ಕಟ್ಟಡಗಳು ಹಾಗೂ ಗೋಡೆಗಳಿವೆ. ಸರ್ಕಾರವು ಮುಂಗಾರು ಪೂರ್ವದಲ್ಲೇ ಎಚ್ಚೆತ್ತುಕೊಳ್ಳದೇ ಹೋದರೆ ಇನ್ನಷ್ಟು ಅವಗಢಗಳು ಸಂಭವಿಸುವ ಸಾಧ್ಯತೆ ಇರಲಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಇತ್ತೀಚೆಗೆ ಕೆ.ಆರ್‌.ಪುರಂನಲ್ಲೂ ಗೋಡೆ ಕುಸಿದು ಸಾವು ನೋವು ಸಂಭವಿಸಿತ್ತು.

ಬೌರಿಂಗ್‌ ಆಸ್ಪತ್ರೆಯಿಂದ ಪ್ರತ್ಯಕ್ಷ ವರದಿ ಇಲ್ಲಿದೆ.

ಹಳೆಯ ಘಟನೆಯ ಮೆಲುಕು

2010 ರ ಮೇ ತಿಂಗಳಲ್ಲಿ ಹೆಬ್ಬಾಳದ ಪಶು ವೈದ್ಯ ಕಾಲೇಜಿನ ಗೋಡೆ ಕುಸಿದು ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿನಿ 17 ವರ್ಷದ ಸಂಜನಾ ಸಿಂಗ್ ಮೃತಪಟ್ಟಿದ್ದರು. ಸಿಬಿಐ ಎದುರಿನ ಪಶುವೈದ್ಯಕೀಯ ಕಾಲೇಜಿನ ಗೋಡೆಯನ್ನು ಅಂದಿನ ಯಶವಂತಪುರ ಪಾಲಿಕೆ ಸದಸ್ಯ ಹಾಗೂ ಗುತ್ತಿಗೆದಾರರಾಗಿದ್ದ ಬಿ. ಮುನಿರತ್ನ ಕಾಮಗಾರಿ ಕೈಗೊಂಡಿದ್ದರು. ಒಂದೇ ಮಳೆಗೆ ಗೋಡೆ ಕುಸಿದು, ಮಳೆಗೆ ಆಶ್ರಯ ಪಡೆದಿದ್ದ ವಿದ್ಯಾರ್ಥಿನಿ ಮೃತಪಟ್ಟಿದ್ದರು.

ಈ ಕುರಿತಂತೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡ ಅಂದಿನ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು. 2010 ರ ಅಂತ್ಯದಲ್ಲಿ ರಲ್ಲಿ ವರದಿ ಸಲ್ಲಿಸಿದ್ದರು. ವರದಿಯಲ್ಲಿ ಗುತ್ತಿಗೆದಾರ ಬಿ.ಮುನಿರತ್ನ ಮತ್ತು ಬಿಬಿಎಂಪಿ ಎಂಜಿನಿಯರ್ಗಳ ಹೆಸರು ಉಲ್ಲೇಖಿಸಲಾಗಿತ್ತು. ಆದರೂ ಯಾವುದೇ ಕ್ರಮ ಆಗಿರಲಿಲ್ಲ. ಈ ಬಗ್ಗೆ ಸ್ವತಃ ಸಂತೋಷ್ ಹೆಗ್ಡೆ ಅವರೇ ನಿವೃತ್ತಿಯ ವೇಳೆ ಬೇಸರ ಹೊರಹಾಕಿದ್ದರು.

ಉನ್ನತ ಮಟ್ಟದ ತನಿಖೆಗೆ ಆದೇಶ

ಬೌರಿಂಗ್ ಆಸ್ಪತ್ರೆ ಕಟ್ಟಡ ಹಳೆಯದಾಗಿದ್ದರೂ ಜಿಬಿಎ ಅಧಿಕಾರಿಗಳಾಗಲಿ, ಶಾಸಕರಾಗಲಿ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದೇ ದುರಂತಕ್ಕೆ ಕಾರಣ ಎಂದು ವಿಪಕ್ಷಗಳು ಆರೋಪಿಸಿವೆ. ಏಳು ಮಂದಿ ಅಮಾಯಕರ ಸಾವಿಗೆ ಆಡಳಿತದ ನಿರ್ಲಕ್ಷ್ಯವೇ ಕಾರಣವಾಗಿದ್ದು, ಜಿಬಿಎ ಅಧಿಕಾರಿಗಳು, ಸ್ಥಳೀಯ ಶಾಸಕರನ್ನು ಹೊಣೆಗಾರರನ್ನಾಗಿಸಬೇಕು. ಜತೆಗೆ ದುರಂತ ಕುರಿತಂತೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು, ಉನ್ನತ ಮಟ್ಟದ ತನಿಖೆ ನಡೆಸಬೇಕು. ಸಂತ್ರಸ್ತರ ಕುಟುಂಬಗಳಿಗೆ ತಲಾ ಹತ್ತು ಲಕ್ಷ ರೂ. ಪರಿಹಾರ ನೀಡಬೇಕು ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ.

Read More
Next Story