ಭರವಸೆ ಕೊಟ್ಟರೂ, ಹಣ ಮಾತ್ರ ಬರಲಿಲ್ಲ: ಸರ್ಕಾರದ ವಿರುದ್ಧ ವಿಕಲಚೇತನರ ಅಸಮಾಧಾನ
ಆರು ವರ್ಷಗಳಿಂದ ಬಾಕಿ ಪಾವತಿ ಸಿಗದಿರುವುದಕ್ಕೆ ಫಲಾನುಭವಿ ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಲವು ಮನವಿಗಳ ಬಳಿಕವೂ ಹಣ ಬಿಡುಗಡೆಯಾಗಿಲ್ಲ, ಭರವಸೆ ಈಡೇರಿಲ್ಲ ಎಂದು ಆರೋಪಿಸಿದ್ದಾರೆ.
ಐದಾರು ವರ್ಷಗಳಿಂದ ಸರ್ಕಾರದಿಂದ ಬರಬೇಕಾದ ಪಾವತಿ ಇನ್ನೂ ಕೈ ಸೇರಿಲ್ಲ. ಬಾಕಿ ಹಣ ಬಿಡುಗಡೆ ಮಾಡುವಂತೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಫಲಾನುಭವಿ ಅಶೋಕ್ ಬೈಲಮ್ಮನವರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಮತ್ತು ಅಧ್ಯಕ್ಷರು ಭೇಟಿ ನೀಡಲಿದ್ದಾರೆ ಎಂಬ ನಿರೀಕ್ಷೆಯಲ್ಲಿ ಸ್ಥಳಕ್ಕೆ ಬಂದಿದ್ದೆವು. ಆದರೆ, ಮುಖ್ಯಮಂತ್ರಿ ಹಾಗೂ ಅಧ್ಯಕ್ಷರು ಇಬ್ಬರೂ ಬರಲಿಲ್ಲ ಎಂದು ಅಶೋಕ್ ತಿಳಿಸಿದ್ದಾರೆ. ತಮ್ಮ ಸಮಸ್ಯೆ ಪರಿಹರಿಸುವಂತೆ ಕೆಸಿಡಿಸಿ ಅಧಿಕಾರಿಗಳು ಮತ್ತು ಅಧ್ಯಕ್ಷರ ಬಳಿ ಮನವಿ ಮಾಡಿದಾಗ, ಪಾವತಿ ಮಾಡಿಸಿಕೊಡುವ ಭರವಸೆ ನೀಡಲಾಗಿತ್ತು. ಆದರೂ ಈವರೆಗೆ ಹಣ ಪಾವತಿಯಾಗಿಲ್ಲ ಎಂದು ಅವರು ಹೇಳಿದ್ದಾರೆ.
Next Story

