ಎಪಿಎಂಸಿಗೆ ಸೇರಿದ ಜಾಗದಲ್ಲಿ ಪೆಟ್ರೋಲ್ ಬಂಕ್ ನಿರ್ಮಾಣದಲ್ಲಿ ಅಕ್ರಮ
ವ್ಯಾಪಕ ನಿಯಮ ಉಲ್ಲಂಘನೆ, ನಿವೇಶನ ಮತ್ತು ಮಳಿಗೆಗಳ ಅಕ್ರಮ ಹಸ್ತಾಂತರದಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟುಮಾಡಿರುವುದು ಬಳ್ಳಾರಿ ಉಪ ವಿಭಾಗಾಧಿಕಾರಿ ರಾಜೇಶ್ ಹೆಚ್.ಡಿ. ನೇತೃತ್ವದ ತನಿಖಾ ತಂಡದ ವರದಿಯಿಂದ ಬಹಿರಂಗವಾಗಿದೆ.