ʼತಾಳ್ಮೆಯಿಂದ ಸಚಿವ ಸ್ಥಾನಕ್ಕೆ ಕಾದು ಕೂದಲೇ ಉದುರಿ ಹೋಗಿದೆʼ
ಸಚಿವ ಸಂಪುಟದಲ್ಲಿ ಸ್ಥಾನ ಸಿಗದವರು ತಾಳ್ಮೆಯಿಂದ ಕಾಯಬೇಕು ಎಂಬ ಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಹಿರಿಯ ಶಾಸಕ ಅಶೋಕ್ ಎಂ.ಪಟ್ಟಣ್ ತಿರುಗೇಟು ನೀಡಿದ್ದಾರೆ. ನಾವು ತಾಳ್ಮೆಯಿಂದ ಕಾದು ಕೂದಲೆಲ್ಲಾ ಉದುರಿ ಹೋಗಿದೆ. ನಮ್ಮ ತಾಳ್ಮೆಗೂ ಮಿತಿಯಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

4 ಹಿರಿಯ ಸಚಿವರನ್ನು ಹೊರತುಪಡಿಸಿ ಎಲ್ಲಾ ಹೊಸಬರಿಗೆ ಸಚಿವಸ್ಥಾನ ನೀಡಲಾಗುವುದು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಅವರು ನಮಗೆ ಹೇಳಿದ್ದರು. ನಿಮ್ಮನ್ನು ಸಚಿವರನ್ನಾಗಿ ಮಾಡುತ್ತೇವೆ ಎಂದು ಹೇಳಿದ್ದರು ಇದು ನಿಜ ದೇವರಸಾಕ್ಷಿಯಾಗಿ ಪ್ರಮಾಣವಾಗಿ ಈ ಮಾತನ್ನು ಸುರ್ಜೆವಾಲಾ ಹೇಳಿದ್ದರು ಎಂದು ತಿಳಿಸಿದರು. 15 ಸಚಿವರನ್ನು ಹಳಬರನ್ನೇ ಮಾಡಿದ್ದಾರೆ ಇದು ಅವಶ್ಯಕತೆ ಇರಲಿಲ್ಲ ನಾವು ಶಾಸಕರಾಗಿಯೇ ಇರಬೇಕಾ ಎಂದು ಪ್ರಶ್ನಿಸಿದರು. ಸಚಿವ ಸ್ಥಾನ ಸಿಗದವರು ತಾಳ್ಮೆಯಿಂದ ಇರಬೇಕು ಎಂಬ ಸಿಎಂ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಅಶೋಕ್ ಪಟ್ಟಣ್ ತಾಳ್ಮೆಯಿಂದ ಕಾದು ಕಾದು ತಲೆಯಲ್ಲಿ ಕೂದಲು ಉದುರಿಹೋಗಿದೆ 72 ವರ್ಷ ಆಗಿದೆ ಮುಂದಿನ ಚುನಾವಣೆಗೆ ಪೂರ್ಣ ಕೂದಲು ಇರುವುದಿಲ್ಲ. ಡಿ.ಕೆ.ಶಿವಕುಮಾರ್ ಅವರು ತಾಳ್ಮೆಯಿಂದ ಕಾದಿದ್ದರು ಅವರಿಗೆ ಚಿಕ್ಕವಯಸ್ಸಿತ್ತು ಎಂದು ಟಾಂಗ್ ನೀಡಿದರು. ನಮ್ಮ ತಾಳ್ಮೆಗೂ ಮಿತಿಯಿರುತ್ತದೆ ನಮ್ಮ ತಾಳ್ಮೆ ಕಳೆದರೆ ಕಷ್ಟವಾಗಲಿದೆ
ಸಿದ್ದರಾಮಯ್ಯ ಮುಂದಿನ ಚುನಾವಣೆಗೆ ಮುಂಚೂಣಿಯಲ್ಲಿದ್ದರೆ ಬಹಳ ಒಳ್ಳೆಯದಾಗಲಿದೆ. ಸಾಮೂಹಿಕವಾಗಿ ಚುನಾವಣೆಗೆ ಹೋದರೆ ಒಳ್ಳೆಯದು. ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಚುನಾವಣೆಗೆ ನಿಲ್ಲಬೇಕು ಎಂದರೆ ನಿಂತುಕೊಳ್ಳಬಹುದು. ಸಿದ್ದರಾಮಯ್ಯ ಅವರು ಪ್ರಚಾರಕ್ಕೆ ಬರದಿದ್ದರೆ ಪಕ್ಷದ ಮೇಲೆ ಪರಿಣಾಮ ಬೀರಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.