ಏಳನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ- 15 ಸಾವಿರ ರೂ. ಗೌರವಧನಕ್ಕಾಗಿ ಆಶಾಗಳ ಅಹೋರಾತ್ರಿ ಹೋರಾಟ
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ 7ನೇ ದಿನಕ್ಕೆ. 15 ಸಾವಿರ ರೂ. ಗೌರವಧನ, ನಿವೃತ್ತಿಗೆ 5 ಲಕ್ಷ ರೂ. ಪರಿಹಾರಕ್ಕಾಗಿ ಅಹೋರಾತ್ರಿ ಹೋರಾಟ.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಪ್ರತಿಭಟನೆ ಏಳನೇ ದಿನಕ್ಕೆ ಕಾಲಿಟ್ಟಿದೆ. 15 ಸಾವಿರ ರೂ. ಗೌರವಧನ, ನಿವೃತ್ತಿ ವೇಳೆ 5 ಲಕ್ಷ ರೂ. ಪರಿಹಾರಕ್ಕೆ ಆಗ್ರಹಿಸಿ ಸಾವಿರಾರು ಕಾರ್ಯಕರ್ತೆಯರು ಚಳಿ, ಗಾಳಿಯನ್ನೂ ಲೆಕ್ಕಿಸದೆ ಅಹೋರಾತ್ರಿ ಹೋರಾಟ ಮುಂದುವರಿಸಿದ್ದಾರೆ. ಸರ್ಕಾರದ ಅಧಿಕೃತ ಆದೇಶಕ್ಕಾಗಿ ಕಾಯುತ್ತಿರುವ ಆಶಾಗಳ ಹೋರಾಟಕ್ಕೆ ಯಾವಾಗ ಸಿಗಲಿದೆ ನ್ಯಾಯ?
Next Story

