ಕಾವೇರಿ ವಿವಾದ: ಸರ್ವಪಕ್ಷಗಳ ಸಭೆಯಲ್ಲಿ ಡಿಕೆಶಿಗೆ ಬೆಂಬಲ
x

ಕಾವೇರಿ ವಿವಾದ: ಸರ್ವಪಕ್ಷಗಳ ಸಭೆಯಲ್ಲಿ ಡಿಕೆಶಿಗೆ ಬೆಂಬಲ


ಮಳೆ ಕೊರತೆ ಹಾಗೂ ಬರದ ಆತಂಕದ ನಡುವೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶದಂತೆ ತಮಿಳುನಾಡಿಗೆ ನೀರು ಹಂಚಿಕೆ ಮಾಡುವ ಸಂಬಂಧ ಉಂಟಾದ ಕ್ಲಿಷ್ಟಕರ ಪರಿಸ್ಥಿತಿನ ನಿಭಾಯಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಕರೆದಿದ್ದ ಸಭೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ನಾಯಕರು ಪಕ್ಷಬೇಧ ಮರೆತು ಬೆಂಬಲ ವ್ಯಕ್ತಪಡಿಸಿದ್ದಾರೆ

ಮಾಜಿ ಮುಖ್ಯಮಂತ್ರಿಗಳಾದ ಎಂ. ವೀರಪ್ಪ ಮೊಯ್ಲಿ, ಬಿ.ಎಸ್‌. ಯಡಿಯೂರಪ್ಪ, ಡಿ.ವಿ. ಸದಾನಂದ ಗೌಡ, ಎಚ್‌.ಡಿ. ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ಹಾಗೂ ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರದ ಸಚಿವರಾದ ವಿ. ಸೋಮಣ್ಣ, ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಮುಖಂಡರು, ಕಾವೇರಿ ಕೊಳ್ಳದ ಸಂಸದರು ಮತ್ತು ಶಾಸಕರು ಭಾಗವಹಿಸಿದ್ದರು.

ಎಲ್ಲ ನಾಯಕರು, ಪಕ್ಷಬೇಧ ಮರೆತು ಸರ್ಕಾರಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿ, ಕಾವೇರಿ ನೀರಿನ ಸಮಸ್ಯೆ ಪರಿಹಾರಕ್ಕೆ ಹಲವು ಸಲಹೆಗಳನ್ನು ನೀಡಿದರು. "ಮಾಜಿ ಮುಖ್ಯಮಂತ್ರಿಗಳು ಮತ್ತು ಕೇಂದ್ರದ ಮಂತ್ರಿಗಳು ಮಹತ್ವದ ಸಲಹೆಗಳನ್ನು ನೀಡಿದ್ದಾರೆ," ಎಂದು ಮುಖ್ಯಮಂತ್ರಿ ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.

ಕೊಡಗು ಭಾಗದಲ್ಲಿ ಮಳೆ ಬರುತ್ತಿರುವುದರಿಂದ ಕೆಅರ್‌ಎಸ್‌ ಡ್ಯಾಮ್‌ನಲ್ಲಿ ನೀರಿನ ಒಳಹರಿವು ತುಸು ಹೆಚ್ಚಾಗಿದೆ. ಹೇಮಾವತಿ ಡ್ಯಾಮ್‌ನಲ್ಲೂ ಸುಧಾರಣೆಯಾಗಿದೆ. ಆದರೂ ಸಂಕಟ ಸೂತ್ರದ ಬಗ್ಗೆ ನಾವು ಬಹಳ ಪರಿಣಾಮಕಾರಿಯಾಗಿ ಕಾನೂನಿನ ಚೌಕಟ್ಟಿನಲ್ಲೇ ತಮಿಳುನಾಡನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅನೇಕ ತೀರ್ಮಾನ ಕೂಡ ಮಾಡಬೇಕಾಗಿದೆ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.

ಕರ್ನಾಟಕ ಹಿಂದೆ 19.9, 19 ಟಿಎಂಸಿ ನೀರನ್ನು ಬಿಟ್ಟಿದ್ವು ಈ ವರ್ಷ ಬರೀ 2.9 ಟಿಎಂಸಿ ಮಾತ್ರ ಬಿಟ್ಟಿದೆ. ಕಳೆದ ವರ್ಷ ಜುಲೈನಲ್ಲಿ 31 ಟಿಎಂಸಿ ಬಿಟ್ಟಿದ್ವು ಈಗ 0.7 ಟಿಎಂಸಿ ಮಾತ್ರ ಹೋಗಿದೆ. ಈ ವರ್ಷ ಜುಲೈನಲ್ಲಿ40 ಟಿಎಂಸಿ ನೀರನ್ನು ಈ ವರ್ಷ ಬಿಡಬೇಕಾಗಿತ್ತು. ಆದರೆ ಇಲ್ಲಿವರೆಗೂ ನಾವು ಯಾವ ಡ್ಯಾಮ್ ನಿಂದ ಕೂಡ ನೀರ ಬಿಡುಗಡೆ ನಾವು ಮಾಡಿರಲಿಲ್ಲ. ಶನಿವಾರ ಮಧ್ಯಾಹ್ನ ಕಬಿನಿ ಜಲಾಶಯದಲ್ಲಿ ನೀರು ತುಂಬಿದ್ದು, ಆ ಡ್ಯಾಮಿನ ಸೇಫ್ಟಿಗೋಸ್ಕರ ನೀರು ಬಿಡಲಾಗಿದೆ, ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಇನ್ನೊಂದು ಕಡೆ ರಾಜ್ಯದಲ್ಲಿ ಅಲ್ಲಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ.ಆಗಸ್ಟ್‌ ೧೩ರಂದು ರಾಜ್ಯ ಬಂದ್‌ಗೆ ಕರೆ ನೀಡಿರುವ ಕನ್ನಡ ಸಂಘಟನೆಗಳು, ರೈತರು ಮತ್ತು ವಿರೋಧ ಪಕ್ಷದ ನಾಯಕರುಗಳಿಗೆ, ಜನತಾದಳದ ನಾಯಕರಿಗೆ ಪ್ರತಿಭಟನೆ ನಡೆಸದಂತೆ ಮನವಿ ಮಾಡಲಾಗುವುದು. ಸರ್ಕಾರ ರೈತರ ಪರವಾಗಿದೆ. ಕನ್ನಡಸಂಘಟನೆಗಳ ಜತೆಗೆ ಮಾತುಕತೆಯನ್ನೂ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ. "ಸರ್ವಪಕ್ಷ ಸಭೆಯಲ್ಲೂ ಈ ಬಗ್ಗೆ ತೀರ್ಮಾನ ಮಾಡಲಾಗಿದೆ. ಸರ್ಕಾರದ ಪರವಾಗಿ ನಾನು ಮನವಿ ಮಾಡಬೇಕೆಂದು ಸಲಹೆ ನೀಡಿದ್ದಾರೆ. ಸರ್ಕಾರ ನಿಮ್ಮ ಪರವಾಗಿ ನಿಂತಿರುವಾಗ, ಸರ್ಕಾರ ಮತ್ತು ಪ್ರಕೃತಿ ಎರಡೂ ಕೂಡ ನಿಮ್ಮ ಜೊತೆಯಲ್ಲಿ ನಿಂತಿರುವಾಗ ರಾಜ್ಯ ಬಂದ್‌ ಅಗತ್ಯವಿಲ್ಲ," ಎಂದು ಡಿ.ಕೆ. ಶಿವಕುಮಾರ್‌ ಈ ಸಂದರ್ಭದಲ್ಲಿ ಮನವಿ ಮಾಡಿದರು.

Read More
Next Story