ಕಾಡಾನೆ ಪತ್ತೆಗೆ ಶ್ವಾನ ದಳ; ಅರಣ್ಯ ಇಲಾಖೆ ಇತಿಹಾಸದಲ್ಲೇ ಹೊಸ ಪ್ರಯೋಗ, ಹಾಸನದಲ್ಲಿ ಕಾಡಾನೆ ಸೆರೆ ಯಶಸ್ವಿ
x
ಆನೆ ಸೆರೆ ಕಾರ್ಯಾಚರಣೆ ಶ್ವಾನ ದಳ ಎಐ ಚಿತ್ರ

ಕಾಡಾನೆ ಪತ್ತೆಗೆ ಶ್ವಾನ ದಳ; ಅರಣ್ಯ ಇಲಾಖೆ ಇತಿಹಾಸದಲ್ಲೇ ಹೊಸ ಪ್ರಯೋಗ, ಹಾಸನದಲ್ಲಿ ಕಾಡಾನೆ ಸೆರೆ ಯಶಸ್ವಿ

ಟ್ಟವಾದ ಮರಗಳ ಮೇಲಾವರಣದಿಂದ ಆನೆಯ ನಿಖರ ಸ್ಥಳ ಗುರುತಿಸುವಲ್ಲಿ ಡ್ರೋನ್ ಕ್ಯಾಮೆರಾಗಳು ವಿಫಲವಾದವು. ಆಗ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹೊಳೆದದ್ದೇ 'ಇಸ್ಸಾ' ಎಂಬ ಹೆಸರಿನ ಬೆಲ್ಜಿಯನ್ ಮಾಲಿನೋಯಿಸ್ ತಳಿಯ ಶ್ವಾನ.


ವನ್ಯಜೀವಿ-ಮಾನವ ಸಂಘರ್ಷ ನಿರ್ವಹಣೆ ಇತಿಹಾಸದಲ್ಲಿ ಅರಣ್ಯ ಇಲಾಖೆ ಹೊಸ ಮೈಲುಗಲ್ಲು ಸಾಧಿಸಿದೆ. ಆನೆ ಪತ್ತೆ ಹಾಗೂ ಸೆರೆ ಕಾರ್ಯಾಚರಣೆಯಲ್ಲಿ ಕೇವಲ ತಂತ್ರಜ್ಞಾನ ನೆಚ್ಚಿಕೊಳ್ಳದೇ ಶ್ವಾನಗಳನ್ನು ಬಳಸುವ ವಿನೂತನ 'ಎಲಿಫೆಂಟ್ ಆಂಟಿ ಡೆಪ್ರೆಡೇಶನ್ ಡಾಗ್ ಸ್ಕ್ವಾಡ್' (EaDDS) ಯೋಜನೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಏಷ್ಯಾದಲ್ಲೇ ಮೊದಲ ಬಾರಿಗೆ ಇಂತಹ ಪ್ರಯೋಗವನ್ನು ಹಾಸನ ಜಿಲ್ಲೆಯಲ್ಲಿ ನಡೆಸಲಾಗಿದೆ.

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕಣಗುಪ್ಪೆ (ಮಲಸಾವರ) ಅರಣ್ಯ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಶ್ವಾನಗಳನ್ನು ಬಳಸಲಾಗಿದೆ. ಆನೆ ಕಾರ್ಯಾಚರಣೆ ವೇಳೆ ಅರಿವಳಿಕೆ ಮದ್ದು ನೀಡುವ ಮುನ್ನವೇ ದಟ್ಟ ಕಾಡಿನೊಳಗೆ ಪರಾರಿಯಾಗಿದ್ದ ಆನೆಯನ್ನು ಮರಳಿ ಪತ್ತೆ ಹಚ್ಚುವುದು ಅರಣ್ಯ ಸಿಬ್ಬಂದಿಗೆ ದೊಡ್ಡ ಸವಾಲಾಗಿತ್ತು. ದಟ್ಟವಾದ ಮರಗಳ ಮೇಲಾವರಣದಿಂದ ಆನೆಯ ನಿಖರ ಸ್ಥಳ ಗುರುತಿಸುವಲ್ಲಿ ಡ್ರೋನ್ ಕ್ಯಾಮೆರಾಗಳು ವಿಫಲವಾದವು. ಆಗ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹೊಳೆದದ್ದೇ 'ಇಸ್ಸಾ' ಎಂಬ ಹೆಸರಿನ ಬೆಲ್ಜಿಯನ್ ಮಾಲಿನೋಯಿಸ್ ತಳಿಯ ಶ್ವಾನ.

ನಿಶ್ಯಬ್ದ ಕಾರ್ಯಾಚರಣೆ ತಂತ್ರ

ಕರ್ನಾಟಕ ಅರಣ್ಯ ಇಲಾಖೆ ಹಾಗೂ 'ಎ ರೋಚಾ ಇಂಡಿಯಾ' ಸಂಸ್ಥೆಯ ಜಂಟಿ ಆಶ್ರಯದಲ್ಲಿ ವಿಶೇಷ ತರಬೇತಿ ಪಡೆದಿದ್ದ 'ಇಸ್ಸಾ' ಶ್ವಾನವು, ಆನೆಯ ಲದ್ದಿ ಹಾಗೂ ಹೆಜ್ಜೆಗಳ ವಾಸನೆಯ ಜಾಡು ಹಿಡಿದು ದಟ್ಟಾರಣ್ಯದಲ್ಲಿ ಸಾಗಿತು. ಆನೆ ಇರುವ ಸುಮಾರು 100-150 ಮೀಟರ್ ಸಮೀಪ ತಲುಪುತ್ತಿದ್ದಂತೆಯೇ ಇಸ್ಸಾ ಶ್ವಾನವು ನಿಶ್ಯಬ್ದವಾಗಿ ಕುಳಿತುಕೊಳ್ಳುವ ಮೂಲಕ ಅರಣ್ಯ ಸಿಬ್ಬಂದಿಗೆ ಆನೆಯ ನಿಖರ ಇರುವಿಕೆಯ ಮಾಹಿತಿಯನ್ನು ಜಿಪಿಎಸ್ ಮೂಲಕ ರವಾನಿಸಿತು. ಶ್ವಾನದ ಈ ಕರಾರುವಕ್ಕಾದ ಸೂಚನೆಯಿಂದಾಗಿ ಕಾರ್ಯಾಚರಣಾ ತಂಡವು ಯಾವುದೇ ಪ್ರಾಣಾಪಾಯವಿಲ್ಲದೆ ಮುಂದುವರಿದು, ಯಶಸ್ವಿಯಾಗಿ ಆನೆಗೆ ಅರಿವಳಿಕೆ ಮದ್ದು ನೀಡಿ ಸೆರೆ ಹಿಡಿಯಿತು.

ವನ್ಯಜೀವಿ ಸಂರಕ್ಷಣಾ ಇತಿಹಾಸದಲ್ಲಿ ಹೊಸ ಅಧ್ಯಾಯ

ಅರಣ್ಯ ಇಲಾಖೆಯಲ್ಲಿ ಕಳ್ಳಬೇಟೆಗಾರರು ಹಾಗೂ ಅರಣ್ಯ ಲೂಟಿಕೋರರನ್ನು ಪತ್ತೆಹಚ್ಚಲು ಶ್ವಾನಗಳನ್ನು ಬಳಸುವ ಪದ್ಧತಿ ಹಿಂದಿನಿಂದಲೂ ಅಸ್ತಿತ್ವದಲ್ಲಿದೆ. ಆದರೆ, ಬೃಹತ್ ಗಾತ್ರದ ಕಾಡಾನೆಗಳ ವಾಸನೆ ಗ್ರಹಿಸಿ, ಕಾಡಿನಲ್ಲಿ ಅವುಗಳಿಗೆ ಮುಖಾಮುಖಿಯಾದಾಗ ಕಿಂಚಿತ್ತೂ ವಿಚಲಿತರಾಗದೆ ನಿಶ್ಯಬ್ದವಾಗಿ ಕಾರ್ಯಾಚರಣೆ ನಡೆಸುವಂತೆ ಶ್ವಾನಗಳನ್ನು ಸಜ್ಜುಗೊಳಿಸಿರುವುದು ಭಾರತ ಹಾಗೂ ಏಷ್ಯಾದ ವನ್ಯಜೀವಿ ಕಾರ್ಯಾಚರಣೆ ಇತಿಹಾಸದಲ್ಲೇ ಇದು ಪ್ರಥಮ. ಬನ್ನೇರುಘಟ್ಟ ಜೈವಿಕ ಉದ್ಯಾನವನ ಹಾಗೂ ಇತರ ಆನೆ ಶಿಬಿರಗಳ ಬಳಿ ಸುಮಾರು 5 ರಿಂದ 9 ತಿಂಗಳ ಕಾಲ ಈ ಶ್ವಾನಕ್ಕೆ ಕಠಿಣ ತರಬೇತಿ ನೀಡಲಾಗಿತ್ತು.

ಡ್ರೋನ್ನಂತಹ ಆಧುನಿಕ ತಂತ್ರಜ್ಞಾನಗಳು ವಿಫಲವಾಗುವಂತಹ ಕಠಿಣ ಭೌಗೋಳಿಕ ಪರಿಸ್ಥಿತಿಗಳಲ್ಲಿ ಪ್ರಾಣಿಗಳ ನೈಸರ್ಗಿಕ ಶಕ್ತಿ ಬಳಸಿಕೊಳ್ಳುವ ಈ ವಿಶಿಷ್ಟ ಪ್ರಯೋಗವು ಮಾನವ-

ಬೇಲೂರಿನಲ್ಲಿ ಇಸ್ಸಾ ಶ್ವಾನ ಸಾಧಿಸಿದ ಈ ಐತಿಹಾಸಿಕ ಯಶಸ್ಸಿನ ಬೆನ್ನಲ್ಲೇ, ಲೈಕಾ ಎಂಬ ಮತ್ತೊಂದು ಶ್ವಾನಕ್ಕೂ ಇದೇ ಮಾದರಿಯಲ್ಲಿ ತರಬೇತಿ ನೀಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಸಂಘರ್ಷ ಹೆಚ್ಚಿರುವ ರಾಜ್ಯದ ಇತರ ಅರಣ್ಯದಂಚಿನ ಭಾಗಗಳಲ್ಲೂ ಈ ಶ್ವಾನ ದಳವನ್ನು ನಿಯೋಜಿಸಲು ಭರದ ಸಿದ್ಧತೆಗಳು ನಡೆಯುತ್ತಿವೆ.

ಅಧಿಕಾರಿಗಳ ವಿರುದ್ಧ ಆಕ್ರೋಶ

ರಾಜ್ಯದಲ್ಲಿ ಅರಣ್ಯ ಸಂರಕ್ಷಣೆಯಲ್ಲಿ ಬದ್ಧತೆ ತೋರಿಸದ ಅಧಿಕಾರಿಗಳು ಶ್ವಾನಪಡೆ ಹೆಸರಲ್ಲಿ ಹೆಚ್ಚುಗಾರಿಕೆ ತೋರಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ವನ್ಯಜೀವಿಗಳ ರಕ್ಷಣೆಗೆ ಅರಣ್ಯ ಇಲಾಖೆ ಬಳಿ ರಾಪಿಡ್‌ ರೆಸ್ಪಾನ್ಸ್‌ ಟೀಂ ಇದೆ. ತರಬೇತಿ ಪಡೆದ ಹಳ್ಳಿಗಳಿಂದ ಸ್ಥಳೀಯ ಸ್ವಯಂಸೇವಕ ತಂಡಗಳಿವೆ. ಹೀಗಿದ್ದರೂ ಶ್ವಾನ ದಳದ ಅವಶ್ಯಕತೆ ಏಕೆ ಎಂಬುದೇ ತಿಳಿಯದಾಗಿದೆ ಎಂದು ವನ್ಯಜೀವಿ ತಜ್ಞ ಜೋಸೆಫ್‌ ಹೂವರ್‌ ಅಸಮಾಧಾನ ಹೊರಹಾಕಿದರು.

Read More
Next Story