Iran-Isreal War|ವಲಸೆ ಹಕ್ಕಿಗಳಿಗೆ ಮೃತ್ಯುಪಥವಾದ ಮಧ್ಯಏಷ್ಯಾ ಮಾರ್ಗ
x

Iran-Isreal War|ವಲಸೆ ಹಕ್ಕಿಗಳಿಗೆ ಮೃತ್ಯುಪಥವಾದ ಮಧ್ಯಏಷ್ಯಾ ಮಾರ್ಗ

ಮಧ್ಯ ಏಷ್ಯಾ ರಾಷ್ಟ್ರಗಳಲ್ಲಿ ಯುದ್ಧದ ಸಂಘರ್ಷ ಇದ್ದ ಕಾರಣ, ಪಕ್ಷಿಗಳು ವಾಪಸ್‌ ತೆರಳಲು ತ್ರಾಸ ಪಡುವಂತಾಗಿದೆ. ಬಾಂಬ್ ಸ್ಫೋಟಗಳ ವಿಷಕಾರಿ ಹೊಗೆ ಪಕ್ಷಿಗಳಿಗೆ ತೊಂದರೆ ಉಂಟುಮಾಡಿದೆ.


Click the Play button to hear this message in audio format

ಭಾರತಕ್ಕೆ ಅತಿಥಿಗಳಾಗಿ ಪ್ರತಿ ವರ್ಷ ಬಂದು ಹೋಗುವ ಲಕ್ಷಾಂತರ ವಲಸೆ ಹಕ್ಕಿಗಳಿಗೆ ಮಧ್ಯ ಏಷ್ಯಾದ ಸಂಘರ್ಷವೇ ಮೃತ್ಯುಪಥವಾಗಿ ಪರಿಣಮಿಸಿದೆ. ಇರಾನ್‌- ಇಸ್ರೇಲ್‌-ಅಮೆರಿಕದ ಯುದ್ಧದ ಪರಿಣಾಮ ಇರಾನ್, ಇಸ್ರೇಲ್ ಮತ್ತು ಸೌದಿ ಅರೇಬಿಯಾ ಮಾರ್ಗವಾಗಿ ಭಾರತಕ್ಕೆ ಬರುವ ಹಾಗೂ ಹಿಂದಿರುಗುವ ವಲಸೆ ಹಕ್ಕಿಗಳಿಗೆ ಅಡ್ಡಿಯಾಗಿದ್ದು, ವಲಸೆ ಪ್ರಮಾಣ ಕುಸಿದಿದೆ.!

ಪ್ರತಿ ವರ್ಷ ಸೈಬೀರಿಯಾ, ರಷ್ಯಾ ಮತ್ತು ಯುರೋಪ್ ಭಾಗದಿಂದ ಹತ್ತಾರು ಸಾವಿರ ಕಿ.ಮೀ. ಕ್ರಮಿಸಿ ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಿಗೆ ಬರುತ್ತಿದ್ದ ಬಾರ್ ಹೆಡೆಡ್ ಗೂಸ್, ರೋಸಿ ಸ್ಟಾರ್ಲಿಂಗ್ ಮತ್ತು ಫ್ಲೆಮಿಂಗೊಗಳ ಸಂಖ್ಯೆ ಯುದ್ಧ ಆರಂಭವಾದ ಬಳಿಕ ಇಳಿಕೆಯಾಗಿದೆ. ಮಧ್ಯಪ್ರಾಚ್ಯದ ರಾಷ್ಟ್ರಗಳಲ್ಲಿ ಕ್ಷಿಪಣಿಗಳ ದಾಳಿ, ಬಾಂಬ್‌ ಸ್ಫೋಟ, ಅನಿಲ ಹಾಗೂ ತೈಲ ಸ್ಥಾವರಗಳ ಸ್ಫೋಟದಿಂದ ವಾಯುಮಾಲಿನ್ಯ ಹೆಚ್ಚಾಗಿದ್ದು, ವಾತಾವರಣದಲ್ಲಿ ವಿಪರೀತ ಶಾಖ ಉತ್ಪತ್ತಿಯಾಗಿದೆ. ಇದು ವಾರ್ಷಿಕವಾಗಿ ವಲಸೆ ಬರುವ ಪಕ್ಷಿಗಳಿಗೆ ಸಮಸ್ಯೆಯಾಗಿದೆ.

ಸಾಮಾನ್ಯವಾಗಿ ಪಕ್ಷಿಗಳು ಭೂಮಿಯ ಕಾಂತೀಯ ಕ್ಷೇತ್ರ ಮತ್ತು ಸಮುದ್ರ, ಗಿರಿ ಶಿಖರಗಳ ಗುರುತಿನ ಆಧಾರದ ಮೇಲೆ ಆಕಾಶ ಮಾರ್ಗ ಬಂದು ಹೋಗುತ್ತವೆ. ಯುದ್ಧದಿಂದಾಗಿ ಹೊಗೆ ಮತ್ತು ಶಾಖ ವಿಪರೀತ ಹೆಚ್ಚಳವಾಗಿದ್ದು, ಅವುಗಳ ನೈಸರ್ಗಿಕ ಸಂವೇದನೆಗೆ ಅಡ್ಡಿಯಾಗಿದೆ. ಹಾಗಾಗಿ ಈಗ ಇರಾನ್‌-ಯುಎಸ್‌ಎ ಯುದ್ಧವಿರಾಮ ಇದ್ದರೂ, ಪಕ್ಷಿಗಳ ವಲಸೆ ಬಹುತೇಕ ಕಡಿಮೆಯಾಗಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಬೆಚ್ಚಗಿನ ವಾತಾವರಣಕ್ಕಾಗಿ ವಲಸೆ ಬರುವ ಪಕ್ಷಿಗಳು

ಯುರೋಪ್‌, ರಷ್ಯಾ, ಸೈಬೀರಿಯಾ ದೇಶಗಳಲ್ಲಿ ಶೀತ ಮಾರುತಗಳು ಹೆಚ್ಚಾದಾಗ ಸಂತಾನೋತ್ಪತ್ತಿ ಹಾಗೂ ಚಳಿಯಿಂದ ರಕ್ಷಣೆ ಪಡೆಯಲು ಕರ್ನಾಟಕ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಗೆ ಲಕ್ಷಾಂತರ ಪಕ್ಷಿಗಳು ಮಧ್ಯ ಏಷ್ಯಾ ಮಾರ್ಗದ ಮೂಲಕ ವಲಸೆ ಬರಲಿವೆ.

ಕಳೆದ ವರ್ಷ ಅಕ್ಟೋಬರ್-ನವೆಂಬರ್‌ ತಿಂಗಳಲ್ಲಿ ಭಾರತಕ್ಕೆ ಬಂದಿರುವ ವಲಸೆ ಹಕ್ಕಿಗಳು ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಸಂತಾನೋತ್ಪತ್ತಿ ಮುಗಿಸಿ ವಾಪಸ್‌ ತೆರಳಲಿವೆ. ಆದರೆ, ಕಳೆದ ಎರಡು ತಿಂಗಳಿಂದ ಮಧ್ಯ ಏಷ್ಯಾ ರಾಷ್ಟ್ರಗಳಲ್ಲಿ ಯುದ್ಧದ ಸಂಘರ್ಷ ಇದ್ದ ಕಾರಣ, ಪಕ್ಷಿಗಳು ವಾಪಸ್‌ ತೆರಳಲು ತ್ರಾಸ ಪಡುವಂತಾಗಿದೆ. ಏಕೆಂದರೆ ಬಾಂಬ್ ಸ್ಫೋಟಗಳಿಂದ ಹೊರಬರುವ ವಿಷಕಾರಿ ಹೊಗೆಯು ಪಕ್ಷಿಗಳ ಉಸಿರಾಟಕ್ಕೆ ಸಮಸ್ಯೆಯಾಗಿದ್ದು, ಇದರಿಂದ ಪಕ್ಷಿಗಳು ದಾರಿ ತಪ್ಪುವ ಸಾಧ್ಯತೆಗಳು ಹೆಚ್ಚಾಗಿವೆ.

ವಲಸೆ ಪಕ್ಷಿಗಳ ವಲಸೆ ಮಾರ್ಗ ಯಾವುದು?

ಸೈಬೀರಿಯಾ, ಆಫ್ರಿಕಾ ಖಂಡದಿಂದ ಬರುವ ವಲಸೆ ಪಕ್ಷಿಗಳು ಸಾಮಾನ್ಯವಾಗಿ ಮಧ್ಯ ಏಷ್ಯಾ ಮಾರ್ಗ ಮತ್ತು ಪೂರ್ವ ಏಷ್ಯಾ- ಆಸ್ಟ್ರೇಲಿಯನ್ ಮಾರ್ಗದಲ್ಲೇ ಸಂಚರಿಸಲಿವೆ.

ಕೆಲ ಪಕ್ಷಿಗಳು ಮಂಗೋಲಿಯಾ ಹಾಗೂ ಟಿಬೆಟ್‌ನಿಂದ ಬಂದರೆ, ಮತ್ತೆ ಕೆಲವು ಮಧ್ಯ ಏಷ್ಯಾ, ಯುರೋಪ್‌ನಿಂದ ವಲಸೆ ಬರಲಿವೆ. ಗಾರ್ಗನಿ, ನಾರ್ದರ್ನ್ ಶೊವೆಲರ್ ಮತ್ತು ಯುರೇಷಿಯನ್ ವಿಂಬ್ರೆಲ್ ನಂತಹ ವೇಡರ್‌ಗಳು ಕರ್ನಾಟಕದ ರಂಗನತಿಟ್ಟು ಪಕ್ಷಿಧಾಮ, ಉತ್ತರ ಕರ್ನಾಟಕದ ಹಿನ್ನೀರಿನಂತಹ ಜೌಗು ಪ್ರದೇಶಗಳಿಗೆ ಬರಲಿವೆ.

ಯಾವ ಪ್ರದೇಶಕ್ಕೆ ಯಾವ ಪಕ್ಷಿಗಳು?

ಬಾರ್-ಹೆಡೆಡ್ ಗೂಸ್ ಭದ್ರಾ ಹಿನ್ನೀರು ಮತ್ತು ಗದಗಿನ ಮಾಗಡಿ ಸರೋವರಕ್ಕೆ ವಲಸೆ ಬರಲಿದೆ. ರೋಸಿ ಸ್ಟಾರ್ಲಿಂಗ್ ಪಕ್ಷಿಯು ಬೆಂಗಳೂರು ಹೊರವಲಯದ ದೊಡ್ಡ ಕೆರೆಗಳಲ್ಲಿ ಕಂಡುಬರಲಿದೆ. ಗಾರ್ಗನೆ, ಗ್ರೇಟರ್ ಫ್ಲೆಮಿಂಗೊ ಹಾಗೂ ನಾರ್ತ್ ಶೊವೆಲರ್ ಜಾತಿಯ ಬಾತುಕೋಳಿಗಳು ಆಲಮಟ್ಟಿ ಹಾಗೂ ಹಂಪಿಯ ಹಿನ್ನೀರಿಗೆ ಬರಲಿವೆ. ಯುರೇಷಿಯನ್ ವಿಂಬ್ರೆಲ್ ಎಂಬ ಪಕ್ಷಿಯು ಕರಾವಳಿ ಕರ್ನಾಟಕಕ್ಕೆ ಚಳಿಗಾಲದಲ್ಲಿ ಬರಲಿದೆ. ದೊಡ್ಡ ಗಾತ್ರದ ಪಕ್ಷಿಗಳು ಪ್ರಯಾಣದ ಸಂದರ್ಭದಲ್ಲಿ ಶಕ್ತಿ ಉಳಿಸಲು ʼವಿʼ ಆಕಾರದಲ್ಲಿ ಹಾರಲಿವೆ. ಪ್ರಯಾಣದ ಹಾದಿಯಲ್ಲಿ ಅಲ್ಲಲ್ಲಿ ವಿಶ್ರಾಂತಿಯ ಮೊರೆ ಹೋಗಲಿವೆ.

ವಲಸೆ ಪಕ್ಷಿಗಳು ವಾಪಸ್‌ ತೆರಳಲು ಸಮಸ್ಯೆ

“ಈಗಾಗಲೇ ಚಳಿಗಾಲಕ್ಕಾಗಿ ಬಂದಿರುವ ಪಕ್ಷಿಗಳು ವಾಪಸ್‌ ಹೋಗಲು ಮಧ್ಯ ಏಷ್ಯಾ ಸಂಘರ್ಷವು ದೊಡ್ಡ ಸಮಸ್ಯೆಯಾಗಿದೆ. ಇರಾನ್‌ನಲ್ಲಿ ಪವರ್‌ ಪ್ಲಾಂಟ್‌ ಹಾಗೂ ತೈಲ ಘಟಕಗಳ ಮೇಲೆ ಬಾಂಬ್‌ ದಾಳಿಯಿಂದ ಹೊತ್ತಿ ಉರಿದ ಪರಿಣಾಮ ವಾಯುವಾಲಿನ್ಯ ಹೆಚ್ಚಿದೆ. ಸದ್ಯ ಮಧ್ಯ ಏಷ್ಯಾದಲ್ಲಿ ಸಂಘರ್ಷ ಹೆಚ್ಚುತ್ತಿದ್ದು, ವಲಸೆ ಪಕ್ಷಿಗಳಿಗೆ ದೊಡ್ಡ ಸಮಸ್ಯೆಯಾಗಿದೆ.

ರಂಗನತಿಟ್ಟು ಪಕ್ಷಿಧಾಮದಲ್ಲಿ ಸದ್ಯ ದೇಶಿಯ ವಲಸೆ ಪಕ್ಷಿಗಳಿವೆ. ಇಲ್ಲಿಗೆ ವಿದೇಶಗಳಿಂದ ಯಾವುದೇ ಪಕ್ಷಿಗಳು ಬರುವುದಿಲ್ಲ. ಬದಲಿಗೆ ಹಿಮಾಲಯದ ಭಾಗದಿಂದ ಮಾತ್ರ ಪಕ್ಷಿಗಳು ಬರಲಿವೆ. ಏಪ್ರಿಲ್‌ ಹೊತ್ತಿಗೆ ಗಾಳಿಯ ದಿಕ್ಕು ಬದಲಾಗಲಿದೆ. ಹಗಲು ಜಾಸ್ತಿಯಾಗಿ, ರಾತ್ರಿ ಕಡಿಮೆಯಾಗಲಿದೆ. ಆಗ ಪ್ರಯಾಣ ಬೆಳೆಸಲಿವೆ.

ಸೈಬೀರಿಯಾ, ರಷ್ಯಾ, ಆಫ್ರಿಕಾ ಹಾಗೂ ಯುರೇಷಿಯಾದಿಂದ ಬರುವ ಪಕ್ಷಿಗಳು ಇರಾನ್‌, ಇಸ್ರೇಲ್‌, ಸೌದಿ ಅರೆಬಿಯಾ ಮಾರ್ಗವಾಗಿ ಹೋಗಲಿವೆ. ಪ್ರಸ್ತುತ, ಮಧ್ಯಪ್ರಾಚ್ಯದ ರಾಷ್ಟ್ರಗಳಲ್ಲಿ ಯುದ್ಧದ ಸಂಘರ್ಷದಿಂದ ಶಾಖ ಉತ್ಪತ್ತಿ ಆಗಿರುವುದರಿಂದ ಮಾರ್ಗ ಬದಲಾಗುವ ಸಾಧ್ಯತೆಗಳಿವೆ. ಮೂರ್ನಾಲ್ಕು ತಿಂಗಳಲ್ಲಿ ಸಂಶೋಧನೆ ಆಗಬಹುದು. ಹಾಗಾಗಿ ನಿಖರವಾಗಿ ವಲಸೆ ಹಕ್ಕಿಗಳಿಗೆ ಎದುರಾಗಿರುವ ಸಮಸ್ಯೆ ಬಯಲಾಗಲಿದೆ” ಎಂದು ಪಕ್ಷಿ ತಜ್ಞ ಜೆ.ಎನ್‌. ಪ್ರಸಾದ್‌ ʼದ ಫೆಡರಲ್ ಕರ್ನಾಟಕʼಕ್ಕೆ ಹೇಳಿದರು.

ಆಮೂರ್‌ ಫಾಲ್ಕನ್ ಎಂಬ ಪಕ್ಷಿಯು ನಾಗಾಲ್ಯಾಂಡ್‌ ಮೂಲಕ ಅರಬ್ಬಿ ಸಮುದ್ರ ದಾಟಿ ಆಫ್ರಿಕಾದಲ್ಲಿ ಸಂತಾನಕ್ಕೆ ಹೋಗಲಿವೆ. ಅದೇ ರೀತಿ ಬೇರೆ ದೇಶಗಳಿಂದ ಬರುವ ಪಕ್ಷಿಗಳಿಗೆ ಇರಾನ್ ಕೂಡ ಒಂದು ಮಾರ್ಗವಾಗಿದೆ.

ಪ್ರಸ್ತುತ, ಬೆಂಗಳೂರಿನ ಕೆರೆಗಳಲ್ಲಿ ನೀರು ರಿಸೈಕಲ್‌ ಆಗುತ್ತಿಲ್ಲ. ಕೆರೆಗಳನ್ನು ಆಳ ಮಾಡಲಾಗುತ್ತಿದೆ. ಇದರಿಂದ ನೀರು ಸರಾಗವಾಗಿ ಮುಂದಕ್ಕೆ ಹರಿಯುತ್ತಿಲ್ಲ. ಈ ಹಿಂದೆ ಬೇಸಿಗೆಯಲ್ಲಿ ಕೆರೆಗಳು ಒಣಗುತ್ತಿದ್ದವು. ಮಳೆಗಾಲದಲ್ಲಿ ತುಂಬಿ ಕ್ಷೀನ್‌ ಆಗುತ್ತಿದ್ದವು. ಆದರೆ, ಇತ್ತೀಚೆಗೆ ಕೊಳಚೆ ನೀರು ಬಿಡುತ್ತಿರುವುದರಿಂದ ಪಾಚಿ ಹೆಚ್ಚಾಗಿದೆ. ಇದು ಪಕ್ಷಿಗಳಿಗೆ ಇಷ್ಟವಾಗದು ಎಂದು ಜೆ.ಎನ್‌. ಪ್ರಸಾದ್ ತಿಳಿಸಿದರು.

ಒಂದು ಪವರ್‌ ಪ್ಲಾಂಟ್‌ ಹಾಗೂ ರಿಫೈನರಿ ಘಟಕಕ್ಕೆ ಬೆಂಕಿ ಬಿದ್ದರೆ ಅದರ ಪರಿಣಾಮ ತಗ್ಗಿಸಲು ವರ್ಷಗಳೇ ಬೇಕಾಗಬಹುದು. ಇದರಿಂದ ಪರಿಸರ ಹಾಳಾಗಲಿದೆ, ಸಹ ಜೀವಿಗಳಿಗೂ ತೊಂದರೆಯಾಗಲಿದೆ. ಇನ್ನು ಯಾವುದೇ ವಲಸೆ ಪಕ್ಷಿಗಳು ಸಮುದ್ರದ ಮೇಲೆ ಹೋಗುವುದಿಲ್ಲ, ಬದಲಾಗಿ ದಡ ನೋಡಿಕೊಂಡೇ ಪ್ರಯಾಣಿಸಲಿವೆ.

ವಲಸೆ ಪಕ್ಷಿಗಳ ಸಮೀಕ್ಷೆ ಹೇಗೆ?

ದೂರದ ದೇಶಗಳಿಂದ ವಲಸೆ ಬರುವ ಪಕ್ಷಿಗಳ ಸಮೀಕ್ಷೆಗೆ ಹಲವು ವಿಧಾನಗಳನ್ನು ಅನುಸರಿಸಲಾಗುತ್ತದೆ. ಪಕ್ಷಿಗಳ ಕಾಲಿಗೆ ಚಿಕ್ಕ ಉಂಗುರ ತೊಡಿಸುವ ವಿಧಾನ ಮತ್ತು ಸ್ಯಾಟಲೈಟ್ ಟ್ರ್ಯಾಕಿಂಗ್ ಹೆಚ್ಚು ಬಳಸಲಾಗುತ್ತದೆ.

ಒಂದು ಸಣ್ಣ ಹಕ್ಕಿ ಸಾವಿರಾರು ಮೈಲು ಹಾರಿ ಹೇಗೆ ಬರಲಿದೆ ಎಂದರೆ ಅದು ಕೇವಲ ಆಹಾರಕ್ಕಲ್ಲ. ಜೌಗು ಪ್ರದೇಶ, ಕೆರೆಗಳನ್ನು ನಾವು ಸಂರಕ್ಷಿಸಿದರೆ ಮಾತ್ರ ಆಕಾಶದ ಅತಿಥಿಗಳ ವಾರ್ಷಿಕ ಭೇಟಿ ಮುಂದುವರಿಯಲು ಸಾಧ್ಯ ಎಂಬುದು ಪಕ್ಷಿತಜ್ಞರ ಅಭಿಪ್ರಾಯ.

ಪಕ್ಷಿಗಳು ತಮ್ಮ ಪ್ರಯಾಣದ ಹಾದಿಯಲ್ಲಿ ವಿರಮಿಸುವ ಸ್ಥಳ, ಚಳಿಗಾಲದ ಸ್ಥಳಗಳು, ಆಹಾರ ದೊರೆಯುವ ಪ್ರಮುಖ ಸ್ಥಳಗಳಲ್ಲಿ ವಲಸೆ ಹಕ್ಕಿಗಳನ್ನು ಪತ್ತೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಪ್ರತಿ ಚಳಿಗಾಲದಲ್ಲಿ ಸುಮಾರು 5 ಲಕ್ಷ ಸ್ಯಾಂಡ್‌ಹಿಲ್ ಕ್ರೇನ್‌ಗಳು ಮತ್ತು ಅಳಿವಿನಂಚಿನಲ್ಲಿರುವ ವೂಪಿಂಗ್ ಕ್ರೇನ್‌ಗಳು ಕೆನಡಾ, ಅಲಾಸ್ಕಾ ಮತ್ತು ಸೈಬೀರಿಯನ್ ಆರ್ಕ್ಟಿಕ್‌ನಲ್ಲಿ ಸಂತಾನೋತ್ಪತ್ತಿ ಮತ್ತು ಗೂಡು ಕಟ್ಟುವ ಸ್ಥಳಗಳಿಗೆ ವಲಸೆ ಹೋಗಲಿವೆ. ನೆಬ್ರಸ್ಕಾದ ಸೆಂಟ್ರಲ್ ಪ್ಲಾಟ್ ನದಿ ಕಣಿವೆಯು ಆವಾಸಸ್ಥಾನವಾಗಿ ಬಳಕೆಯಾಗುತ್ತಿದೆ.

ಆರ್ಕ್ಟಿಕ್, ಯುರೋಪ್ ಮತ್ತು ಉತ್ತರ ಏಷ್ಯಾದಾದ್ಯಂತ ತಾಪಮಾನ ಕಡಿಮೆಯಾಗುತ್ತಿದ್ದಂತೆ ಭಾರತವು ಪಕ್ಷಿಗಳಿಗೆ ಉಷ್ಣತೆ ಮತ್ತು ಸಮೃದ್ಧಿಯ ಆಶ್ರಯ ತಾಣವಾಗಿ ಬದಲಾಗಲಿದೆ. ಚಳಿಗಾಲದ ವಲಸೆ ಹಕ್ಕಿಗಳು ಆಹಾರ ಅರಸಿ ಸಮೃದ್ಧ ಜೌಗು ಪ್ರದೇಶಗಳು ಮತ್ತು ಬೆಚ್ಚಗಿನ ಆಕಾಶ ಹುಡುಕುತ್ತಾ ಬರಲಿವೆ. ಕ್ರೇನ್‌ಗಳು, ಬಾತುಕೋಳಿಗಳು, ವೇಡರ್‌ಗಳು ಮತ್ತು ಹಾಡುಹಕ್ಕಿಗಳಂತಹ ಪ್ರಬೇಧಗಳು ವ್ಯಾಪಕವಾಗಿ ಬರುತ್ತವೆ. ಅವುಗಳ ಪ್ರಯಾಣ ಪ್ರತಿ ವರ್ಷ ಭಾರತದ ಭೂದೃಶ್ಯಗಳನ್ನು ಮರುರೂಪಿಸುತ್ತವೆ, ಜೌಗು ಪ್ರದೇಶಗಳು ಮತ್ತು ಸರೋವರಗಳನ್ನು ರೋಮಾಂಚಕವಾಗಿ, ಕಾಲೋಚಿತ ಅಭಯಾರಣ್ಯಗಳಾಗಲಿವೆ.

ವಿಜ್ಞಾನಿಗಳು ವಲಸೆಯನ್ನು ಅಧ್ಯಯನ ಮಾಡಲು ಹಲವಾರು ತಂತ್ರಗಳನ್ನು ಬಳಸುತ್ತಾರೆ, ಅವುಗಳಲ್ಲಿ ಬ್ಯಾಂಡಿಂಗ್, ಉಪಗ್ರಹ ಟ್ರ್ಯಾಕಿಂಗ್ ಮತ್ತು ಜಿಯೋಲೊಕೇಟರ್‌ಗಳು ಎಂದು ಕರೆಯಲ್ಪಡುವ ಹಗುರವಾದ ಸಾಧನಗಳನ್ನು ಒಳಗೊಂಡಿರುವ ತುಲನಾತ್ಮಕವಾಗಿ ಹೊಸ ವಿಧಾನ ಸೇರಿವೆ. ಪ್ರಮುಖ ನಿಲುಗಡೆ ಮತ್ತು ಚಳಿಗಾಲದ ಸ್ಥಳಗಳನ್ನು ಪತ್ತೆಹಚ್ಚುವುದು ಗುರಿಗಳಲ್ಲಿ ಒಂದಾಗಿದೆ. ಗುರುತಿಸಿದ ನಂತರ, ಈ ಪ್ರಮುಖ ಸ್ಥಳಗಳನ್ನು ರಕ್ಷಿಸಲು ಮತ್ತು ಉಳಿಸಲು ಕ್ರಮಗಳನ್ನು ತೆಗೆದುಕೊಳ್ಳಬಹುದು.

ಪ್ರತಿ ವಸಂತ ಕಾಲದಲ್ಲಿ ಸರಿಸುಮಾರು 500,000 ಸ್ಯಾಂಡ್‌ಹಿಲ್ ಕ್ರೇನ್‌ಗಳು ಮತ್ತು ಕೆಲವು ಅಳಿವಿನಂಚಿನಲ್ಲಿರುವ ವೂಪಿಂಗ್ ಕ್ರೇನ್‌ಗಳು ಕೆನಡಾ, ಅಲಾಸ್ಕಾ ಮತ್ತು ಸೈಬೀರಿಯನ್ ಆರ್ಕ್ಟಿಕ್‌ನಲ್ಲಿ ಸಂತಾನೋತ್ಪತ್ತಿ ಮತ್ತು ಗೂಡುಕಟ್ಟುವ ಸ್ಥಳಗಳಿಗೆ ಉತ್ತರಕ್ಕೆ ವಲಸೆ ಹೋಗುವ ಸಮಯದಲ್ಲಿ ನೆಬ್ರಸ್ಕಾದ ಸೆಂಟ್ರಲ್ ಪ್ಲಾಟ್ ನದಿ ಕಣಿವೆಯನ್ನು ಒಂದು ವೇದಿಕೆಯ ಆವಾಸ ಸ್ಥಾನವಾಗಿ ಬಳಸುತ್ತವೆ.

ಲಕ್ಷಾಂತರ ಪಕ್ಷಿಗಳು ವಲಸೆ

ಪ್ರತಿ ವರ್ಷ ಲಕ್ಷಾಂತರ ವಲಸೆ ಹಕ್ಕಿಗಳು ಬೆಚ್ಚಗಿನ ವಾತಾವರಣ, ಆಹಾರ ಮತ್ತು ಸುರಕ್ಷಿತ ಸಂತಾನೋತ್ಪತ್ತಿ ಸ್ಥಳಗಳನ್ನು ಹುಡುಕುತ್ತಾ ಭಾರತಕ್ಕೆ ಬರಲಿವೆ. ಸೈಬೀರಿಯನ್ ಕ್ರೇನ್ಗಳಿಂದ ಗೋಲ್ಡನ್ ಓರಿಯೊಲ್ಸ್ಗಳು ಕೂಡ ಮರುಭೂಮಿ, ಸಾಗರಗಳು ಮತ್ತು ಹಿಮಾಲಯ ದಾಟಿ ಬರಲಿವೆ.

Read More
Next Story