
ಸಾಂದರ್ಭಿಕ ಚಿತ್ರ
E Khatha | ಇ-ಖಾತಾ ಪಡೆಯುವುದು ಇನ್ನು ಸುಲಭ! ಮನೆಯಲ್ಲೇ ಕುಳಿತು ಡೌನ್‌ಲೋಡ್ ಮಾಡುವುದು ಹೇಗೆ?
ಜಿಬಿಎ ತಂದಿರುವ ಹೊಸ ವ್ಯವಸ್ಥೆ 24/7 ಲಭ್ಯವಿದ್ದು, ಯಾವುದೇ ಸಮಯದಲ್ಲಿ, ಎಲ್ಲಿಂದಲಾದರೂ ಇ-ಖಾತಾ ಡೌನ್‌ಲೋಡ್ ಮಾಡಬಹುದು. ನೇರ ಡಿಜಿಟಲ್ ಪ್ರಕ್ರಿಯೆಯಾಗಿರುವುದರಿಂದ ಯಾವುದೇ ಕಚೇರಿ ಭೇಟಿ ಅಥವಾ ಮಧ್ಯವರ್ತಿಗಳ ಅಗತ್ಯವಿಲ್ಲ.
ದಶಕಗಳಿಂದ ಆಸ್ತಿ ಮಾಲೀಕರಿಗೆ ತಲೆನೋವಾಗಿ ಪರಿಣಮಿಸಿದ್ದ 'ಇ-ಖಾತಾ' ಪಡೆಯುವ ಪ್ರಕ್ರಿಯೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಇದೀಗ ಶಾಶ್ವತ ಪರಿಹಾರ ನೀಡಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನ ನಾಗರಿಕರು ತಮ್ಮ ಆಸ್ತಿ ದಾಖಲೆಗಾಗಿ ಕಚೇರಿಗಳಿಗೆ ಅಲೆಯುವ ಅಥವಾ ಮಧ್ಯವರ್ತಿಗಳ ಮೊರೆ ಹೋಗುವ ಅಗತ್ಯವಿಲ್ಲ. ಕೇವಲ SAS (ಸ್ವಯಂ-ಮೌಲ್ಯಮಾಪನ ಯೋಜನೆ) ಆಸ್ತಿ ತೆರಿಗೆ ಐಡಿ ಬಳಸಿ ಮನೆಯಲ್ಲೇ ಕುಳಿತು ಇ-ಖಾತಾವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಡೌನ್‌ಲೋಡ್ ಮಾಡುವುದು ಹೇಗೆ?
ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಅತ್ಯಂತ ಸರಳವಾದ ಡಿಜಿಟಲ್ ವ್ಯವಸ್ಥೆಯನ್ನು ರೂಪಿಸಿದ್ದು, BBMPeAasthi.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ಮೊಬೈಲ್‌ಗೆ ಬರುವ OTP (ಒನ್ ಟೈಮ್ ಪಾಸ್‌ವರ್ಡ್) ಬಳಸಿ ಪೋರ್ಟಲ್‌ಗೆ ಲಾಗಿನ್ ಆಗಿ. ನಂತರ, ನಿಮ್ಮ ಆಸ್ತಿಗೆ ಸಂಬಂಧಿಸಿದ SAS ತೆರಿಗೆ ಐಡಿಯನ್ನು (Property Tax ID) ಸರಿಯಾಗಿ ನಮೂದಿಸಿ. ಮಾಹಿತಿ ಪರಿಶೀಲನೆಯ ನಂತರ, ನಿಮ್ಮ 'ಕರಡು ಇ-ಖಾತಾ'ವನ್ನು (Draft e-Khata) ನೇರವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದರ ಲಿಂಕ್ ಅನ್ನು ಎಸ್‌ಎಂಎಸ್ ಅಥವಾ ವಾಟ್ಸಪ್ ಮೂಲಕವೂ ಪಡೆಯಬಹುದಾಗಿದೆ.
ಇ-ಖಾತಾ ಪಡೆಯುವ ಪ್ರಕ್ರಿಯೆ
ಜಿಬಿಎ (GBA) ತಂದಿರುವ ಹೊಸ ವ್ಯವಸ್ಥೆ 24/7 ಲಭ್ಯವಿದ್ದು, ಯಾವುದೇ ಸಮಯದಲ್ಲಿ, ಎಲ್ಲಿಂದಲಾದರೂ ಇ-ಖಾತಾ ಡೌನ್‌ಲೋಡ್ ಮಾಡಬಹುದು. ಇದೊಂದು ನೇರ ಡಿಜಿಟಲ್ ಪ್ರಕ್ರಿಯೆಯಾಗಿರುವುದರಿಂದ ಯಾವುದೇ ಕಚೇರಿ ಭೇಟಿ ಅಥವಾ ಮಧ್ಯವರ್ತಿಗಳ ಅಗತ್ಯವಿಲ್ಲ. ಇದು ಡಿಜಿಟಲ್ ಸಹಿ ಹೊಂದಿರುವ ದಾಖಲೆಯಾಗಿದ್ದು, ಕಾನೂನುಬದ್ಧವಾಗಿ ಮಾನ್ಯತೆ ಪಡೆದಿದೆ.
ಇ-ಖಾತಾ ನವೀಕರಣ/ನೋಂದಣಿಗೆ ಅಗತ್ಯವಿರುವ ದಾಖಲೆಗಳೇನು?
ಒಂದು ವೇಳೆ ನೀವು ಹೊಸದಾಗಿ ಇ-ಖಾತಾ ನೋಂದಣಿ ಮಾಡಲು ಅಥವಾ ಕರಡು ಇ-ಖಾತಾವನ್ನು ನವೀಕರಣ (Update) ಮಾಡಿ ಅಂತಿಮ ಇ-ಖಾತಾ ಪಡೆಯಲು ಬಯಸಿದರೆ, ಈ ಕೆಳಗಿನ ದಾಖಲೆಗಳನ್ನು ಸಿದ್ಧವಿಟ್ಟುಕೊಳ್ಳಿ.
ಪ್ರಾಪರ್ಟಿ ಟ್ಯಾಕ್ಸ್ ಅಪ್ಲಿಕೇಶನ್ ನಂಬರ್
ಡೀಡ್ ರಿಜಿಸ್ಟ್ರೇಶನ್ ನಂಬರ್ (ನೋಂದಣಿ ಸಂಖ್ಯೆ)
ಇ-ಕೆವೈಸಿ ಆಗಿರುವ ಆಧಾರ್
ಬೆಸ್ಕಾಂ ಐಡಿ (BESCOM ID)
ಕಟ್ಟಡದ ಫೋಟೋ ಹಾಗೂ ನಕ್ಷೆ
ಪಾರ್ಕಿಂಗ್‌ಗೆ ಪ್ರತ್ಯೇಕ ಜಾಗ ಮೀಸಲಿಟ್ಟಿರುವ ಬಗ್ಗೆ ನಕ್ಷೆ
ಕಾವೇರಿ ಆನ್‌ಲೈನ್‌ನಿಂದ ಪಡೆದ ಇಸಿ (EC - Encumbrance Certificate) ದಾಖಲೆ.
ಇ-ಖಾತಾ ಪಡೆಯುವ ಪ್ರಕ್ರಿಯೆ
ಜಿಬಿಎ ತಂದಿರುವ ಹೊಸ ವ್ಯವಸ್ಥೆ 24/7 ಲಭ್ಯವಿದ್ದು, ಯಾವುದೇ ಸಮಯದಲ್ಲಿ, ಎಲ್ಲಿಂದಲಾದರೂ ಇ-ಖಾತಾ ಡೌನ್‌ಲೋಡ್ ಮಾಡಬಹುದು. ನೇರ ಡಿಜಿಟಲ್ ಪ್ರಕ್ರಿಯೆಯಾಗಿರುವುದರಿಂದ ಯಾವುದೇ ಕಚೇರಿ ಭೇಟಿ ಅಥವಾ ಮಧ್ಯವರ್ತಿಗಳ ಅಗತ್ಯವಿಲ್ಲ. ಡಿಜಿಟಲ್ ಸಹಿ ಹೊಂದಿರುವ ದಾಖಲೆ ಇದಾಗಿದ್ದು, ಕಾನೂನುಬದ್ಧವಾಗಿ ಮಾನ್ಯತೆ ಪಡೆದಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ ತಿಳಿಸಿದೆ.
ಇ-ಖಾತಾ ನೋಂದಣಿಗೆ ಅಗತ್ಯವಿರುವ ದಾಖಲೆಗಳೇನು ?
ಒಂದು ವೇಳೆ ನೀವು ಹೊಸದಾಗಿ ಇ-ಖಾತಾ ನೋಂದಣಿ ಅಥವಾ ನವೀಕರಣ (Update) ಮಾಡಲು ಬಯಸಿದರೆ, ಈ ಕೆಳಗಿನ ದಾಖಲೆಗಳನ್ನು ಸಿದ್ಧವಿಟ್ಟುಕೊಳ್ಳಿ.
* ಪ್ರಾಪರ್ಟಿ ಟ್ಯಾಕ್ಸ್ ಅಪ್ಲಿಕೇಶನ್ ನಂಬರ್
* ಡೀಡ್ ರಿಜಿಸ್ಟ್ರೇಶನ್ ನಂಬರ್
* ಇ-ಕೆವೈಸಿ ಆಗಿರುವ ಆಧಾರ್
* ಬೆಸ್ಕಾಂ ಐಡಿ
* ಕಟ್ಟಡದ ಫೋಟೋ ಹಾಗೂ ನಕ್ಷೆ
* ಪಾರ್ಕಿಂಗ್‌ಗೆ ಪ್ರತ್ಯೇಕ ಜಾಗ ಮೀಸಲಿಟ್ಟಿರುವ ಬಗ್ಗೆ ನಕ್ಷೆ
* ಕಾವೇರಿ ಆನ್‌ಲೈನ್‌ನಿಂದ ಪಡೆದ ಇಸಿ ದಾಖಲೆ ಸಲ್ಲಿಸಬೇಕು.
ಇ-ಖಾತಾಗೆ ಸಲ್ಲಿಸುವ ಅಪ್ಲಿಕೇಶನ್‌ನಲ್ಲಿ ಕಂದಾಯ ಅಧಿಕಾರಿಗಳು ನೀಡುವ ಅನುಮೋದನೆ ಹಂತ
ಕಂದಾಯ ಅಧಿಕಾರಿಗಳ ಅನುಮೋದನೆ ಹಂತ
ನೀವು ಆನ್‌ಲೈನ್‌ನಲ್ಲಿ ಸಲ್ಲಿಸಿದ ದಾಖಲೆಗಳನ್ನು ಮೊದಲು ಕೇಸ್ ವರ್ಕರ್ ಪರಿಶೀಲಿಸಲಿದ್ದಾರೆ. ನಂತರ, ಪ್ರಾಧಿಕಾರದ ಕಂದಾಯ ಅಧಿಕಾರಿಗಳು ಮತ್ತೊಮ್ಮೆ ಪರಿಶೀಲಿಸಿ, ಎಲ್ಲಾ ದಾಖಲೆಗಳು ಸರಿಯಾಗಿವೆ ಎಂದು ಖಚಿತಪಡಿಸಿಕೊಂಡು ಅನುಮೋದನೆ ನೀಡುತ್ತಾರೆ. ಈ ಪ್ರಕ್ರಿಯೆ ಮುಗಿದ ಕನಿಷ್ಠ 48 ಗಂಟೆಗಳು ಅಥವಾ ಗರಿಷ್ಠ 15 ದಿನಗಳ ಒಳಗೆ ಅಂತಿಮ ಇ-ಖಾತಾ ನಿಮ್ಮ ಕೈ ಸೇರಲಿದೆ. ಇ-ಖಾತಾ ಬಗ್ಗೆ ಯಾವುದೇ ಪ್ರಶ್ನೆಗಳು ಅಥವಾ ಸಹಾಯಕ್ಕಾಗಿ ಬಿಬಿಎಂಪಿಯ ಸಹಾಯವಾಣಿ 080-22660000 ಅನ್ನು ಸಂಪರ್ಕಿಸಬಹುದು ಅಥವಾ ಹತ್ತಿರದ 'ಬೆಂಗಳೂರು ಒನ್' ಕಚೇರಿಗೆ ಭೇಟಿ ನೀಡಬಹುದು.
ಇ-ಖಾತಾದಿಂದಾಗುವ ಪ್ರಯೋಜನಗಳೇನು?
ಸಂಪೂರ್ಣ ಡಿಜಿಟಲ್: ಆಸ್ತಿಯ ನಿಖರವಾದ ವಿವರಗಳು (ಅಳತೆ, ಗಡಿ, ಮಾಲೀಕತ್ವ) ಆನ್‌ಲೈನ್‌ನಲ್ಲಿಯೇ ಲಭ್ಯವಿರುತ್ತವೆ. ಇ-ಖಾತಾದಲ್ಲಿ ಆಸ್ತಿ ಮಾಲೀಕರ ಫೋಟೋ, ಹೆಸರು, ನಿಖರವಾದ ವಿಳಾಸ, ಬೆಸ್ಕಾಂ ಮೀಟರ್ ಸಂಖ್ಯೆ ಮತ್ತು ಆಸ್ತಿ ತೆರಿಗೆಯ ವಿವರಗಳು ಒಟ್ಟಾಗಿ ಒಂದೇ ಕಡೆ ದೊರೆಯುತ್ತವೆ. ಕಚೇರಿಗಳಿಗೆ ಪದೇ ಪದೇ ಅಲೆದಾಡುವ ಅಥವಾ ಮಧ್ಯವರ್ತಿಗಳ ಮೇಲೆ ಅವಲಂಬಿತವಾಗುವ ಅಗತ್ಯವಿಲ್ಲ. ಇದು ಭ್ರಷ್ಟಾಚಾರವನ್ನು ತಡೆಯಲು ಸಹಾಯ ಮಾಡುತ್ತದೆ. ಆಸ್ತಿಯನ್ನು ಮಾರಾಟ ಮಾಡುವಾಗ ಅಥವಾ ಖರೀದಿಸುವಾಗ ಇದು ಅತ್ಯಗತ್ಯ ದಾಖಲೆಯಾಗಿದೆ. ಆಸ್ತಿಯ ಮಾಲೀಕತ್ವವನ್ನು ಅಧಿಕೃತವಾಗಿ ದೃಢೀಕರಿಸುವುದರಿಂದ ಮಾರಾಟ ಮತ್ತು ನೋಂದಣಿ ಪ್ರಕ್ರಿಯೆ ಸುಲಭವಾಗುತ್ತದೆ.

