Paris Olympics 2024| ಬೆಳ್ಳಿ ಪದಕಕ್ಕೆ ವಿನೇಶ್ ಮನವಿ: ಒಲಿಂಪಿಕ್ಸ್ ಅಂತ್ಯಕ್ಕೆ ಮುನ್ನ ನಿರ್ಧಾರ-ಸಿಎಎಸ್
ಅನರ್ಹತೆಯನ್ನು ಪ್ರಶ್ನಿಸಿ ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ಸಲ್ಲಿಸಿರುವ ಮನವಿಯನ್ನು ಸಿಎಎಸ್( ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್) ಅಂಗೀಕರಿಸಿದೆ. ಕ್ರೀಡಾಕೂಟದ ಅಂತ್ಯದ ಮೊದಲು ನಿರ್ಧಾರ ಪ್ರಕಟಿಸಲಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
100 ಗ್ರಾಂ ಅಧಿಕ ತೂಕದ ಕಾರಣ 50 ಕೆಜಿ ಫೈನಲ್‌ನಿಂದ ಅನರ್ಹಗೊಂಡ ವಿನೇಶ್ ಅವರಿಂದ ಬೆಳ್ಳಿ ಪದಕಕ್ಕಾಗಿ ಮನವಿಯನ್ನು ಆ.7ರಂದು ಸ್ವೀಕರಿಸಲಾಗಿದೆ ಎಂದು ಸಿಎಎಸ್ ಶುಕ್ರವಾರ ಹೇಳಿದೆ.
ವಿನೇಶ್ ಅವರು ʻತುರ್ತು ಮಧ್ಯಂತರ ಕ್ರಮʼಕ್ಕೆ ವಿನಂತಿಸಿಲ್ಲ. ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ (ಯುಡಬ್ಲ್ಯುಡಬ್ಲ್ಯು) ಗೆ ಅರ್ಜಿ ಸಲ್ಲಿಸಿದ್ದಾರೆ. ಮಹಿಳಾ ಫ್ರೀಸ್ಟೈಲ್ 50 ಕೆಜಿ ಸ್ಪರ್ಧೆಯ ಚಿನ್ನದ ಪದಕದ ಪಂದ್ಯದ ಮೊದಲು ಎರಡನೇ ತೂಕ, ಅದೇ ದಿನ ಆಗಬೇಕಿತ್ತು. ಒಂದು ಗಂಟೆ ಯೊಳಗೆ ಅರ್ಹತೆ ಕುರಿತು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ, ಪ್ರಕ್ರಿಯೆ ಚಾಲ್ತಿಯಲ್ಲಿದೆ ಮತ್ತು ಅರ್ಜಿದಾರರು ಹಂಚಿಕೊಂಡ ಬೆಳ್ಳಿ ಪದಕವನ್ನು ನೀಡಬೇಕೆಂದು ವಿನಂತಿಸಿದ್ದಾರೆ ಎಂದು ಸಿಎಎಸ್ ಹೇಳಿದೆ.
ಆಸ್ಟ್ರೇಲಿಯದ ಡಾ. ಅನ್ನಾಬೆಲ್ ಬೆನೆಟ್ ಏಕೈಕ ಮಧ್ಯಸ್ಥಿಕೆದಾರ ಆಗಿರಲಿದ್ದು, ಅವರು ವಿಚಾರಣೆ ನಡೆಸುತ್ತಾರೆ. ಒಲಿಂಪಿಕ್ ಕ್ರೀಡಾಕೂಟದ ಅಂತ್ಯದ ಮೊದಲು ನಿರ್ಧಾರ ಪ್ರಕಟಿಸಲಾಗುತ್ತದೆ ಎಂದು ಸಿಎಎಸ್ ತಿಳಿಸಿದೆ.
ಅನರ್ಹತೆ ಬಳಿಕ ವಿನೇಶ್ ಕುಸ್ತಿಯಿಂದ ನಿವೃತ್ತಿ ಘೋಷಿಸಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ 2024 ಭಾನುವಾರ (ಆಗಸ್ಟ್ 11) ಮುಕ್ತಾಯಗೊಳ್ಳುತ್ತದೆ.