x

FIFA | ಬೆಲ್ಜಿಯಂ ಕನಸು ಭಗ್ನಗೊಳಿಸಿ 16 ವರ್ಷಗಳ ನಂತರ ಸೆಮೀಸ್‌ಗೆ ಜಿಗಿದ ಸ್ಪೇನ್

ಜಿದ್ದಾಜಿದ್ದಿನಿಂದ ಕೂಡಿದ್ದ ಹೈ-ವೋಲ್ಟೇಜ್ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಸ್ಪೇನ್ ತಂಡವು ಬೆಲ್ಜಿಯಂ ವಿರುದ್ಧ 2-1 ಗೋಲುಗಳ ಅಂತರದಿಂದ ರೋಚಕ ಜಯ ಸಾಧಿಸಿ, ಪ್ರಸಕ್ತ ವಿಶ್ವಕಪ್‌ನ ಸೆಮಿಫೈನಲ್‌ಗೆ ಹೆಜ್ಜೆ ಇಟ್ಟಿದೆ.


Click the Play button to hear this message in audio format

ಜಿದ್ದಾಜಿದ್ದಿನಿಂದ ಕೂಡಿದ್ದ ಹೈ-ವೋಲ್ಟೇಜ್ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಸ್ಪೇನ್ ತಂಡವು ಬೆಲ್ಜಿಯಂ ವಿರುದ್ಧ 2-1 ಗೋಲುಗಳ ಅಂತರದಿಂದ ರೋಚಕ ಜಯ ಸಾಧಿಸಿ, ಪ್ರಸಕ್ತ ವಿಶ್ವಕಪ್‌ನ ಸೆಮಿಫೈನಲ್‌ಗೆ ಹೆಜ್ಜೆ ಇಟ್ಟಿದೆ. 2010ರ ವಿಶ್ವಕಪ್ ವಿಜೇತ ಸ್ಪೇನ್, ಆ ಬಳಿಕ ಇದೇ ಮೊದಲ ಬಾರಿಗೆ ಸೆಮಿಸ್ ತಲುಪಿದ ಸಾಧನೆ ಮಾಡಿದೆ. ಪಂದ್ಯದ 88ನೇ ನಿಮಿಷದಲ್ಲಿ ಬದಲಿ ಆಟಗಾರ ಮೈಕೆಲ್ ಮೆರಿನೊ ಬಾರಿಸಿದ ಆಕರ್ಷಕ ಗೋಲು ಸ್ಪೇನ್‌ಗೆ ಐತಿಹಾಸಿಕ ಗೆಲುವು ತಂದುಕೊಟ್ಟಿತು. ಈ ಸೋಲಿನೊಂದಿಗೆ ಬೆಲ್ಜಿಯಂನ ಸತತ 18 ಪಂದ್ಯಗಳ ಅಜೇಯ ಆಟಕ್ಕೆ ಬ್ರೇಕ್ ಬಿದ್ದಿದೆ. ಇದೀಗ ಮಂಗಳವಾರ (ಜು. 14) ಡಲ್ಲಾಸ್‌ನಲ್ಲಿ ನಡೆಯಲಿರುವ ದೈತ್ಯರ ಘರ್ಷಣೆಯ ಮಹತ್ವದ ಸೆಮಿಫೈನಲ್ ಪಂದ್ಯದಲ್ಲಿ ಸ್ಪೇನ್, ಪ್ರಶಸ್ತಿ ಫೇವರಿಟ್ ಫ್ರಾನ್ಸ್ ತಂಡವನ್ನು ಎದುರಿಸಲಿದೆ.

Read More
Next Story