ಸಿನ್ನರ್‌ಗೆ ಒಲಿದ ವಿಂಬಲ್ಡನ್ ಮುಕುಟ
ಅಸ್ವಸ್ಥರಾಗಿದ್ದ ಜ್ವೆರೆವ್ ಅವರ ಬಳಿಗೆ ಓಡಿದ ಸಿನ್ನರ್, ಅವರನ್ನು ಮೇಲೆತ್ತಲು ಸಹಾಯ ಮಾಡಿದರು. ಜ್ವೆರೆವ್ ಪಂದ್ಯ ಮುಂದುವರಿಸಿದರಾದರೂ, ಗಾಯದ ಸಮಸ್ಯೆಯಿಂದಾಗಿ ಅವರ ಲಯ ತಪ್ಪಿತು.
ಮೊದಲ ಎರಡು ಸೆಟ್‌ಗಳಲ್ಲಿ ಉಭಯ ಆಟಗಾರರು ಸಮಬಲದ ಹೋರಾಟ ಪ್ರದರ್ಶಿಸಿದರು. ತೀವ್ರ ಪೈಪೋಟಿಯಿಂದ ಕೂಡಿದ್ದ ಮೊದಲ ಸೆಟ್ ಅನ್ನು ಜ್ವೆರೆವ್ ಟೈಬ್ರೇಕರ್‌ನಲ್ಲಿ ಗೆದ್ದುಕೊಂಡರೆ, ಎರಡನೇ ಸೆಟ್‌ನಲ್ಲಿ ಅದ್ಭುತ ಪುನರಾಗಮನ ಮಾಡಿದ ಸಿನ್ನರ್ ಟೈಬ್ರೇಕರ್‌ನಲ್ಲಿ ಜ್ವೆರೆವ್ ಅವರ ಸರ್ವ್‌ಗಳನ್ನು ಯಶಸ್ವಿಯಾಗಿ ಮೆಟ್ಟಿ ನಿಂತು ಸೆಟ್ ಕೈವಶ ಮಾಡಿಕೊಂಡರು.
ಆದರೆ, ಪಂದ್ಯದ ಅಸಲಿ ತಿರುವು ಕಂಡುಬಂದಿದ್ದು ಮೂರನೇ ಸೆಟ್‌ನಲ್ಲಿ ಪಂದ್ಯ 2 ಗಂಟೆ 42 ನಿಮಿಷ ತಲುಪಿದ್ದಾಗ (3-3 ಸಮಬಲದಲ್ಲಿದ್ದಾಗ), ಸಿನ್ನರ್ ಅವರ ಡ್ರಾಪ್ ಶಾಟ್ ಅನ್ನು ಬೆನ್ನಟ್ಟುವ ಧಾವಂತದಲ್ಲಿ ಜ್ವೆರೆವ್ ಬೇಸ್‌ಲೈನ್ ಬಳಿ ಜಾರಿ ಬಿದ್ದರು. ಈ ವೇಳೆ ಅವರ ಬಲ ಮೊಣಕಾಲಿಗೆ ತೀವ್ರ ಪೆಟ್ಟಾಯಿತು. ಅಸ್ವಸ್ಥರಾಗಿದ್ದ ಜ್ವೆರೆವ್ ಅವರ ಬಳಿಗೆ ಓಡಿದ ಸಿನ್ನರ್, ಅವರನ್ನು ಮೇಲೆತ್ತಲು ಸಹಾಯ ಮಾಡಿದರು. ಜ್ವೆರೆವ್ ಪಂದ್ಯ ಮುಂದುವರಿಸಿದರಾದರೂ, ಗಾಯದ ಸಮಸ್ಯೆಯಿಂದಾಗಿ ಅವರ ಲಯ ತಪ್ಪಿತು. ಇದರ ಲಾಭ ಪಡೆದ ಸಿನ್ನರ್ ಸತತ ಸೆಟ್‌ಗಳನ್ನು ಗೆದ್ದು ಪಂದ್ಯವನ್ನು ತಮ್ಮ ವಶವಾಗಿಸಿಕೊಂಡರು.
Next Story

