Paris Paralympics: ಅವನಿ ಲೆಖರಾ ಅವರಿಗೆ ಚಿನ್ನ
x
ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ನಲ್ಲಿ ಮಹಿಳೆಯರ 10 ಮೀಟರ್ ಏರ್ ರೈಫಲ್ (ಎಸ್‌ಎಚ್1) ಈವೆಂಟ್‌ನಲ್ಲಿ ಪದಕ ಗಳಿಸಿದ ಐರಿನಾ ಶೆಟ್ನಿಕ್‌, ಅವನಿ ಲೆಖರಾ ಮತ್ತು ಮೋನಾ ಅಗರ್ವಾಲ್‌

Paris Paralympics: ಅವನಿ ಲೆಖರಾ ಅವರಿಗೆ ಚಿನ್ನ


ಪ್ಯಾರಿಸ್: ಮಹಿಳೆಯರ 10 ಮೀಟರ್ ಏರ್ ರೈಫಲ್ (ಎಸ್‌ಎಚ್ 1) ಸ್ಪರ್ಧೆಯಲ್ಲಿ ಅವನಿ ಲೆಖರಾ ಅವರು ಚಿನ್ನ ಹಾಗೂ ಮೋನಾ ಅಗರ್ವಾಲ್ ಕಂಚಿನ ಪದಕ ಗಳಿಸಿದರು.

ಟೋಕಿಯೊ ಪ್ಯಾರಾಲಿಂಪಿಕ್ಸ್ ಚಿನ್ನದ ವಿಜೇತೆ ಅವನಿ( 22), ಜಪಾನಿನ ರಾಜಧಾನಿಯಲ್ಲಿ ತಮ್ಮದೇ 249.6 ದಾಖಲೆ ಅಳಿಸಿ 249.7 ಅಂಕ ಗಳಿಸಿದರು. ಆದರೆ, 2022 ರಲ್ಲಿ ಶೂಟಿಂಗ್ ಕ್ರೀಡೆ ಆರಂಭಿಸಿದ ಮೋನಾ ಕಂಚು( 228.7) ಗಳಿಸಿದರು.ಐರಿನಾ ಶೆಟ್ನಿಕ್(627.5) ಎರಡನೇ ಸ್ಥಾನ ಪಡೆದರು.

11 ವರ್ಷ ಇದ್ದಾಗ ಕಾರ್ ಅಪಘಾತದಲ್ಲಿ ಸೊಂಟದ ಕೆಳಗೆ ಪಾರ್ಶ್ವವಾಯುವಿಗೆ ಒಳಗಾಗಿ, ಗಾಲಿ ಕುರ್ಚಿಯಲ್ಲಿ ಬಂಧಿಸಲ್ಪಟ್ಟ ಅವನಿ, 2021 ರಲ್ಲಿ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಶೂಟಿಂಗ್‌ನಲ್ಲಿ ಚಿನ್ನದ ಪದಕ ಗೆದ್ದ ದೇಶದ ಮೊದಲ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಶೂಟಿಂಗ್‌ನಲ್ಲಿನ ಎಸ್‌ಎಚ್‌1 ವರ್ಗವು ತೋಳು, ಕೆಳಗಿನ ಕೆಳ ತೊಡೆ, ಕಾಲುಗಳಲ್ಲಿ ಚಲನೆ ಇಲ್ಲದ ಅಥವಾ ಅಂಗಗಳಿಲ್ಲದ ಕ್ರೀಡಾಪಟುಗಳನ್ನು ಒಳಗೊಂಡಿರುತ್ತದೆ.


Read More
Next Story