Paris Olympics| ಪದಕ: ಅಮೆರಿಕಕ್ಕೆ ಅಗ್ರಸ್ಥಾನ, ಭಾರತ 71 ನೇ ಸ್ಥಾನದಲ್ಲಿ
x

Paris Olympics| ಪದಕ: ಅಮೆರಿಕಕ್ಕೆ ಅಗ್ರಸ್ಥಾನ, ಭಾರತ 71 ನೇ ಸ್ಥಾನದಲ್ಲಿ


ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಭಾರತ ಒಂದು ಬೆಳ್ಳಿ ಮತ್ತು ಐದು ಕಂಚಿನ ಪದಕಗಳೊಂದಿಗೆ 71 ನೇ ಸ್ಥಾನ ಗಳಿಸಿತು. 40 ಚಿನ್ನ, 44 ಬೆಳ್ಳಿ ಮತ್ತು 62 ಕಂಚು ಸೇರಿದಂತೆ 126 ಪದಕಗಳೊಂದಿಗೆ ಅಮೆರಿಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಚೀನಾ (91 ಪದಕ) ಮತ್ತು ಜಪಾನ್ (45 ಪದಕ) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳಲ್ಲಿವೆ.

ಟೋಕಿಯೊ ಒಲಿಂಪಿಕ್ಸ್‌ ಮೊದಲ ಮೂರು ಸ್ಥಾನಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಟೋಕಿಯೊದಲ್ಲಿ, US 113 ಪದಕಗಳನ್ನು (39 ಚಿನ್ನ, 41 ಬೆಳ್ಳಿ, 33 ಕಂಚು) ಗೆದ್ದು ಪದಕಗಳ ಪಟ್ಟಿಯಲ್ಲಿ ನಂ. 1 ಸ್ಥಾನಕ್ಕೇರಿತು.

ಟೋಕಿಯೊದಲ್ಲಿ ಚೀನಾ 89 ಪದಕಗಳೊಂದಿಗೆ ಎರಡನೇ ಸ್ಥಾನ ಹಾಗೂ ಜಪಾನ್ 58 ಪದಕಗಳೊಂದಿಗೆ ನಂತರದ ಸ್ಥಾನದಲ್ಲಿದೆ. ಭಾರತ ಟೋಕಿಯೊದಲ್ಲಿ ಏಳು ಪದಕ (1 ಚಿನ್ನ, 2 ಬೆಳ್ಳಿ, 4 ಕಂಚು) ಮತ್ತು ಅಂಕಪಟ್ಟಿಯಲ್ಲಿ 48 ನೇ ಸ್ಥಾನ ಗಳಿಸಿತು. ಆದರೆ, ಈ ಬಾರಿ ಪ್ಯಾರಿಸ್‌ನಲ್ಲಿ ಚಿನ್ನ ಗೆಲ್ಲಲು ಸಾಧ್ಯವಾಗಲಿಲ್ಲ ಮತ್ತು ಹಿಂದಿನ ಒಲಿಂಪಿಕ್ಸ್‌ಗೆ ಹೋಲಿಸಿದರೆ 23 ಸ್ಥಾನ ಕುಸಿದಿದೆ.

ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಭಾರತೀಯ ಪದಕ ವಿಜೇತರು:

1. ನೀರಜ್ ಚೋಪ್ರಾ: ಬೆಳ್ಳಿ; ಪುರುಷರ ಜಾವೆಲಿನ್ ಎಸೆತ (ಅಥ್ಲೆಟಿಕ್ಸ್)

2. ಪುರುಷರ ಹಾಕಿ ತಂಡ: ಕಂಚು

3. ಮನು ಭಾಕರ್: ಕಂಚು; ಮಹಿಳೆಯರ 10 ಮೀ ಏರ್ ಪಿಸ್ತೂಲ್ (ಶೂಟಿಂಗ್)

4. ಸ್ವಪ್ನಿಲ್ ಕುಸಲೆ: ಕಂಚು; ಪುರುಷರ 50 ಮೀ ರೈಫಲ್ (ಶೂಟಿಂಗ್)

5. ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್: ಕಂಚು; 10 ಮೀ ಏರ್ ಪಿಸ್ತೂಲ್ ಮಿಶ್ರ ತಂಡ (ಶೂಟಿಂಗ್)

6. ಅಮನ್ ಸೆಹ್ರಾವತ್: ಕಂಚು; ಪುರುಷರ ಫ್ರೀಸ್ಟೈಲ್ 57 ಕೆಜಿ (ಕುಸ್ತಿ)

Read More
Next Story