IPL 2026: ಚಾಟ್‌ಜಿಪಿಟಿ ಬಳಸಿ ನಕಲಿ ಟಿಕೆಟ್ ಸೃಷ್ಟಿ, ನಾಲ್ವರ ಬಂಧನ; ಬೆಳಗಾವಿ, ಮುಂಬೈನಲ್ಲಿ ಬೆಟ್ಟಿಂಗ್
x

ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಐಪಿಎಲ್ ಪಂದ್ಯಗಳ ಮೇಲೆ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಶಾಸ್ತ್ರಿ ನಗರದ ನಿವಾಸಿ ಸಾಹೀಲ್ ಪಾಟೀಲ್ (23) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ

IPL 2026: ಚಾಟ್‌ಜಿಪಿಟಿ ಬಳಸಿ ನಕಲಿ ಟಿಕೆಟ್ ಸೃಷ್ಟಿ, ನಾಲ್ವರ ಬಂಧನ; ಬೆಳಗಾವಿ, ಮುಂಬೈನಲ್ಲಿ ಬೆಟ್ಟಿಂಗ್

ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಐಪಿಎಲ್ ಪಂದ್ಯಗಳ ಮೇಲೆ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಶಾಸ್ತ್ರಿ ನಗರದ ನಿವಾಸಿ ಸಾಹೀಲ್ ಪಾಟೀಲ್ (23) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.


Click the Play button to hear this message in audio format

ಐಪಿಎಲ್ 2026 ಟೂರ್ನಿಯ ಪಂದ್ಯಗಳ ರೋಚಕತೆ ಹೆಚ್ಚಾಗುತ್ತಿರುವಂತೆಯೇ, ನಕಲಿ ಟಿಕೆಟ್ ಮಾರಾಟ ಹಾಗೂ ಬೆಟ್ಟಿಂಗ್ ಜಾಲಗಳು ಕೂಡ ವ್ಯಾಪಕವಾಗಿ ಕಾರ್ಯನಿರ್ವಹಿಸುತ್ತಿವೆ. ಲಖನೌದಲ್ಲಿ ಕೃತಕ ಬುದ್ಧಿಮತ್ತೆ ) ಬಳಸಿ ನಕಲಿ ಟಿಕೆಟ್ ಮುದ್ರಿಸಿ ಮಾರಾಟ ಮಾಡುತ್ತಿದ್ದ ಗ್ಯಾಂಗ್‌ ಅನ್ನು ಬಂಧಿಸಲಾಗಿದ್ದು, ಇತ್ತ ಬೆಳಗಾವಿ ಮತ್ತು ಮುಂಬೈನಲ್ಲಿ ಬೆಟ್ಟಿಂಗ್ ದಂಧೆಕೋರರನ್ನು ಪೊಲೀಸರು ಸೆರೆಹಿಡಿದಿದ್ದಾರೆ.

ಗುರುವಾರ ಲಖನೌನ ಏಕಾನಾ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಲಖನೌ ಸೂಪರ್ ಜೈಂಟ್ಸ್ (LSG) ನಡುವಿನ ಪಂದ್ಯದ ವೇಳೆ ಕ್ರೀಡಾಂಗಣದ ಹೊರಗೆ ನಕಲಿ ಟಿಕೆಟ್ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಛತ್ತೀಸ್‌ಗಢದ ದುರ್ಗ್ ಜಿಲ್ಲೆಯ ನಿವಾಸಿಗಳಾದ ಶ್ರೀಕಾಂತ್ ಬೋರ್ಕರ್, ನೂತನ್ ಕುಮಾರ್ ಸಾಹು, ರಾಜೇಂದ್ರ ಚೌಧರಿ ಮತ್ತು ವಿಶ್ವಜಿತ್ ಸಾಹು ಎಂದು ಗುರುತಿಸಲಾಗಿದೆ.

ಸೈಬರ್ ಸೆಲ್ ಲಖನೌ ಮತ್ತು ಸುಶಾಂತ್ ಗಾಲ್ಫ್ ಸಿಟಿ ಪೊಲೀಸ್ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಈ ವಂಚನೆಯ ಜಾಲ ಬಯಲಾಗಿದೆ. ಆರೋಪಿಗಳು ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ನಿಂದ ಅಸಲಿ ಟಿಕೆಟ್‌ಗಳ ಚಿತ್ರಗಳನ್ನು ಪಡೆದು, ಕೊರಲ್‌ಡ್ರಾ ಸಾಫ್ಟ್‌ವೇರ್ ಬಳಸಿ ಮರುಸೃಷ್ಟಿಸುತ್ತಿದ್ದರು. ಟಿಕೆಟ್‌ನ ನಿಖರ ಅಳತೆ, ಕಾಗದದ ಗುಣಮಟ್ಟ ಮತ್ತು ಪ್ರಿಂಟಿಂಗ್ ವಿನ್ಯಾಸವನ್ನು ಅರಿಯಲು ಇವರು ಚಾಟ್‌ಜಿಪಿಟಿ ಸಹಾಯ ಪಡೆದಿದ್ದರು ಹಾಗೂ ಅಸಲಿ ಟಿಕೆಟ್‌ನಂತೆಯೇ ಕಾಣಲು 170-GSM ಕಾಗದವನ್ನು ಬಳಸಿ ಮುದ್ರಿಸುತ್ತಿದ್ದರು.

ಬೆಳಗಾವಿಯಲ್ಲಿ ಐಪಿಎಲ್ ಬೆಟ್ಟಿಂಗ್ ದಂಧೆ; ಬುಕ್ಕಿ ಸೆರೆ

ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಐಪಿಎಲ್ ಪಂದ್ಯಗಳ ಮೇಲೆ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಶಾಸ್ತ್ರಿ ನಗರದ ನಿವಾಸಿ ಸಾಹೀಲ್ ಪಾಟೀಲ್ (23) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯದ ವೇಳೆ ಮೊಬೈಲ್ ಮೂಲಕ ಪ್ರತಿ ಕ್ಷಣದ ಆಟದ ಮೇಲೆ ಬೆಟ್ಟಿಂಗ್ ಪಡೆಯುತ್ತಿದ್ದಾಗ ಈ ಕಾರ್ಯಾಚರಣೆ ನಡೆದಿದೆ. ಆರೋಪಿಯಿಂದ ಒಂದು ಮೊಬೈಲ್ ಫೋನ್ ಹಾಗೂ 12,900 ರೂ. ನಗದನ್ನು ಜಪ್ತಿ ಮಾಡಲಾಗಿದ್ದು, ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ.

ಮುಂಬೈನಲ್ಲಿ 8 ಕೋಟಿ ರೂ.ಗೂ ಅಧಿಕ ಡಿಜಿಟಲ್ ವಹಿವಾಟು ಪತ್ತೆ

ಮುಂಬೈನಲ್ಲಿ ಆನ್‌ಲೈನ್ ಮೂಲಕ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ತಮ್ಮ ವಸತಿ ಆವರಣದಿಂದಲೇ ಪಂದ್ಯದ ವಿಕೆಟ್‌ಗಳು, ರನ್‌ಗಳು ಮತ್ತು ಓವರ್‌ಗಳ ಮೇಲೆ ಬೆಟ್ಟಿಂಗ್ ಕಟ್ಟಿಸಿಕೊಳ್ಳುತ್ತಿದ್ದರು. ಅವರಿಂದ ವಶಪಡಿಸಿಕೊಳ್ಳಲಾದ ನಾಲ್ಕು ಮೊಬೈಲ್ ಫೋನ್‌ಗಳನ್ನು ಪರಿಶೀಲಿಸಿದಾಗ, ಬರೋಬ್ಬರಿ 8.05 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಡಿಜಿಟಲ್ ವಹಿವಾಟು ನಡೆಸಿರುವುದು ಬೆಳಕಿಗೆ ಬಂದಿದೆ ಹಾಗೂ 5,000 ರೂ. ನಗದನ್ನು ಜಪ್ತಿ ಮಾಡಲಾಗಿದೆ.

Read More
Next Story