ಅಮೆರಿಕಾದ ಅಧ್ಯಕ್ಷ ಚುನಾವಣೆ ಗೆಲ್ಲುವ ಟ್ರಂಪ್‌ ಗುಂಪಿನ ನಿರೀಕ್ಷೆಗೆ ತಣ್ಣೀರೆರಚಿದ ಶೂಟರ್‌ ಕ್ರೂಕ್ಸ್‌ನ ʻರಿಪಬ್ಲಿಕನ್‌ʼ ಸಂಬಂಧ
x

ಅಮೆರಿಕಾದ ಅಧ್ಯಕ್ಷ ಚುನಾವಣೆ ಗೆಲ್ಲುವ ಟ್ರಂಪ್‌ ಗುಂಪಿನ ನಿರೀಕ್ಷೆಗೆ ತಣ್ಣೀರೆರಚಿದ ಶೂಟರ್‌ ಕ್ರೂಕ್ಸ್‌ನ ʻರಿಪಬ್ಲಿಕನ್‌ʼ ಸಂಬಂಧ

ಟ್ರಂಪ್‌ ಹತ್ಯೆಗೆ ಪ್ರಯತ್ನಿಸಿದ ಕ್ರೂಕ್ಸ್‌, ಯಾವುದೇ ಟಿಪ್ಪಣಿ ಅಥವಾ ಸಂದೇಶಗಳನ್ನು ಬಿಡದೆ ಇರುವುದರಿಂದ ಆತ ಅವರನ್ನು ಗುರಿಯಾಗಿಸಿಕೊಂಡಿದ್ದೇಕೆ ಎಂಬುದಕ್ಕೆ ಕಾರಣ ಯಾರಿಗೂ ತಿಳಿಯುವುದಿಲ್ಲ.


ಅಮೆರಿಕಾದ ಮಾಜಿ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಅವರನ್ನು ಹತ್ಯೆ ಮಾಡಲು ಯತ್ನಿಸಿದ ವ್ಯಕ್ತಿ ತಾನೇಕೆ ಟ್ರಂಪ್‌ ಅವರನ್ನು ಹತ್ಯೆಗೈಯ್ಯಲು ಯತ್ನಿಸಿದೆ. ಆ ನಿರ್ಧಾರದ ಹಿಂದಿನ ಉದ್ದೇಶವೇನು? ಎಂದು ಒಂದು ಟಿಪ್ಪಣಿಯನ್ನೋ, ಅಥವಾ ಯಾವುದಾದರೂ ರೀತಿಯ ವಿವರಣೆಯನ್ನೋ ಬಿಟ್ಟು ಹೋಗಿರದಿದ್ದರೆ, ಬಹುಶಃ ಟ್ರಂಪ್‌ ಅವರನ್ನು ಹತ್ಯೆ ಮಾಡುವ ಪ್ರಯತ್ನವೇಕೆ ನಡೆಯಿತು? ಎಂಬುದು ಹೊರ ಜಗತ್ತಿಗೆ ಒಂದು ನಿಗೂಢವಾಗಿಯೇ ಉಳಿಯುತ್ತಿತ್ತೆನ್ನಿಸುತ್ತದೆ.

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆಯ ವಿಫಲ ಪ್ರಯತ್ನದ ನಂತರ ಎದುರಾಗಿರುವ ಬೃಹದ್‌ ಪ್ರಶ್ನೆಯೆಂದರೆ, ಈ ಹತ್ಯೆಯ ಯತ್ನವು ನವೆಂಬರ್ ತಿಂಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಮತದಾರ ರಿಪಬ್ಲಿಕನ್ನರಿಗೆ ಒಲಿಯುತ್ತಾನೆಯೇ? ಇಲ್ಲವೇ? ಎಂಬುದು.

ಈಗಾಗಲೇ ನಾನಾ ಕಾರಣಗಳಿಂದ ದುರ್ಬಲರಾಗಿರುವ ಮತ್ತು ನೇರವಾದ ನಿಲುವುಗಳನ್ನು ವ್ಯಕ್ತ ಪಡಿಸಲು ತಡವರಿಸುತ್ತಿರುವ ಅಧ್ಯಕ್ಷ ಜೋ ಬಿಡೆನ್ ಅವರು ಅಮೆರಿಕಾದ ಜನರ ವಿಶ್ವಾಸಗಳಿಸಲು ವಿಫಲವಾಗಿರುವಂತೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಡೆಮೋಕ್ರಾಟ್ ಗಳು ಈಗಾಗಲೇ ಚುನಾವಣೆಯಲ್ಲಿ ಅಮೆರಿಕಾದ ಜನತೆಯ ವಿಶ್ವಾಸಗಳಿಸುವಲ್ಲಿ, ಮುಂದೆ ಹೆಜ್ಜೆ ಇಡಲಾಗದೇ, ಹೆಜ್ಚೆಗಳನ್ನು ಹಿಂದೆ ಹಿಂದೆ ಇಡುತ್ತಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಅಷ್ಟೇ ಅಲ್ಲ. ಈಗ ಟ್ರಂಪ್‌ ಮೇಲೆ ನಡೆದಿರುವ ಹತ್ಯೆಯ ಪ್ರಯತ್ನದಿಂದ , ಡೆಮೊಕ್ರಾಟ್ಸ್‌ ಅಧಿಕಾರಕ್ಕೆ ಬರುವ ಪ್ರಯತ್ನಕ್ಕೆ ಮತ್ತಷ್ಟು ಹಿನ್ನಡೆಯಾಗಿದೆ.

ಗುಂಡಿನ ದಾಳಿ ನಡೆದ ತಕ್ಷಣ ಟ್ರಂಪ್ ಹತ್ಯೆಗೆ ಯತ್ನಿಸಿದವರು ಯಾರು ಎಂಬುದು ಸ್ಪಷ್ಟವಾಗಿರಲಿಲ್ಲ. ಸ್ಪಷ್ಟವಾಗಿ ಹೇಳದಿದ್ದರೂ, ಟ್ರಂಪ್ ಅವರನ್ನು ನಿವಾರಿಸಲು ವಿಭಿನ್ನ ಸಂಭವನೀಯ ಕಾರಣಗಳಿವೆ. ಬಿಡೆನ್‌ಗೆ ಹೋಲಿಸಿದರೆ ‌ಟ್ರಂಪ್‌, ಯಹೂದಿಗಳ ಬೆಂಬಲಿಗರಾಗಿರುವುದರಿಂದ ಹತ್ಯೆ ಯತ್ನವು ಗಾಜಾದ ಮೇಲೆ ಇಸ್ರೇಲ್‌ ನಡೆಸುತ್ತಿರುವ ಆಕ್ರಮಣಕ್ಕೆ ಸಂಬಂಧಿಸಿರಬಹುದು, ಟ್ರಂಪ್‌ ಮರು ಆಯ್ಕೆಯು ಇಸ್ರೇಲ್‌ ಆಕ್ರಮಣವನ್ನುಉತ್ತೇಜಿಸಬಹುದು ಎಂಬುದು ಒಂದು ಊಹೆ

ಉದ್ದೇಶ ಅಸ್ಪಷ್ಟ

ಎದುರಾಗಿರುವ ಮತ್ತೊಂದು ಪ್ರಶ್ನೆಯೆಂದರೆ ದೀರ್ಘ ಕಾಲದಿಂದ ನಡೆಯುತ್ತಿರುವ ಉಕ್ರೇನ್-ರಷ್ಯಾ ಯುದ್ಧಕ್ಕೂ ಹತ್ಯೆ ಪ್ರಯತ್ನಕ್ಕೂ ಏನಾದರೂ ಸಂಬಂಧವಿದೆಯೇ? ನ್ಯಾಟೋ (NATO) ವಿರುದ್ಧದ ದ್ವೇಷಕ್ಕೆ ಹೆಸರುವಾಸಿಯಾಗಿರುವ ಟ್ರಂಪ್, ಈ ಸಂಘರ್ಷವನ್ನು ಕೊನೆಗೊಳಿಸುವುದಾಗಿ ಈ ಹಿಂದೆ ಹೇಳಿದ್ದರು. ಅವರು ಈ ಕೆಲಸ ಮಾಡದಂತೆ ತಡೆಯಲು ಕೊಲೆ ಯತ್ನ ನಡೆದಿದೆಯೇ? ಅಥವಾ, ಟ್ರಂಪ್‌ರ ಮುಸ್ಲಿಂ ವಿರೋಧಿ ನಿಲುವು ಎಲ್ಲರಿಗೂ ತಿಳಿದಿರುವುದರಿಂದ, ಇದು ಇಸ್ಲಾಮ್‌ ನ ಮೂಲಭೂತವಾದಿಗಳ ಕೃತ್ಯವೇ? ಟ್ರಂಪ್‌ ತಮ್ಮ ಮೊದಲ ಅವಧಿಯಲ್ಲಿ ಹಲವು ಅರಬ್-ಮುಸ್ಲಿಂ ರಾಷ್ಟ್ರಗಳ ಪ್ರಜೆಗಳು ಅಮೆರಿಕಾ ಪ್ರವೇಶಿಸುವುದನ್ನು ನಿಷೇಧಿಸುವ ಪ್ರಸ್ತಾಪ ಮಾಡಿದ್ದನ್ನು ನೆನಪಿಸಿಕೊಳ್ಳಬಹುದು. ಮೆಕ್ಸಿಕೋ ಮೂಲಕ ಅಮೆರಿಕ ಪ್ರವೇಶಿಸುವ ಅಕ್ರಮ ವಲಸಿಗರನ್ನು ತಡೆಯುವ ಅವರ ಕಠೋರ ದೃಷ್ಟಿಕೋನದಿಂದಾಗಿ ಬಹುಶಃ ಹಿಸ್ಪಾನಿಕ್ ಒಬ್ಬರು ಹತ್ಯೆ ಪ್ರಯತ್ನ ನಡೆಸಿರಬಹುದೇ? ಅಮೆರಿಕ- ಮೆಕ್ಸಿಕೋ ಗಡಿಯಲ್ಲಿ ಗೋಡೆ ನಿರ್ಮಾಣ ಪ್ರಸ್ತಾವ ಮತ್ತು ಅಮೆರಿಕವನ್ನು ಅಕ್ರಮ ವಾಗಿ ಪ್ರವೇಶಿಸಿದ ಕುಟುಂಬಗಳಿಂದ ಅವರ ಮಕ್ಕಳನ್ನು ಬೇರ್ಪಡಿಸುವ ಪ್ರಯತ್ನಗಳಿಗೂ, ಈ ಹತ್ಯೆಯ ಪ್ರಯತ್ನಕ್ಕೂ ಸಂಬಂಧವಿದೆಯೇ? ಹೀಗೆ ಹತ್ತು ಹಲವಾರು ಪ್ರಶ್ನೆಗಳು ಎದುರಾಗಿವೆ.

ಈ ಹಿಂದೆ 2020 ರ ಚುನಾವಣೆಯಲ್ಲಿ ಬಿಡೆನ್‌ ಎದುರು ಸೋಲನ್ನಪ್ಪಿದ ಬಳಿಕ ಟ್ರಂಪ್ ನೀಡಿದ ವಿವಾದಾತ್ಮಕ ಪ್ರತಿಕ್ರಿಯೆಯನ್ನು ಕಂಡಿರುವವರು, ಟ್ರಂಪ್ ಮತ್ತೆ ಅಧಿಕಾರಕ್ಕೆ ಬರುವುದನ್ನು ಬಯಸದ ಡೆಮೋಕ್ರಾಟ್‌ಗಳಲ್ಲಿ ಯಾರಾದರೂ ಒಬ್ಬರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆಯೇ? ಟ್ರಂಪ್‌ ಬೆಂಬಲಿಗರು ʻಕ್ಯಾಪಿ ಟಲ್ ಹಿಲ್ʼ ಮೇಲೆ ನಡೆಸಿದ ದಾಳಿಯಂಥ ನಿರಂಕುಶ ಪ್ರಭುತ್ವದ ಮಾದರಿಯನ್ನು ವಿರೋಧಿಸುವ ಮನಸ್ಸುಗಳಲ್ಲಿ ಒಂದು ಈ ಕೃತ್ಯವನ್ನು ಎಸಗಿರಬಹುದೇ? ಹೀಗೆ ಮತ್ತೊಂದಿಷ್ಟು ಪ್ರಶ್ನೆಗಳು.

ಶೂಟರ್ ಗುರುತು

ಇಷ್ಟು ಅನುಮಾನಗಳ ಹಿನ್ನೆಲೆಯಲ್ಲಿ ಹತ್ಯೆ ಪ್ರಯತ್ನನಡೆಸಿದವರು ಈ ಪೈಕಿ ಯಾರೇ ಆಗಿದ್ದರೂ, ಶೂಟರ್‌ನ ರಿಪಬ್ಲಿಕನ್‌ ಪಕ್ಷದ ಪರವಾಗಿನ ಒಲವುಗಳು ತಿಳಿಯುವವರೆಗೂ, ಚುನಾವಣೆಯಲ್ಲಿ ಈಗಾಗಲೇ ಟ್ರಂಪ್ ಗೆದ್ದೇ ಬಿಟ್ಟಿದ್ದಾರೆ ಎಂಬ ಭಾವನೆಯಿತ್ತು. ಆದರೆ, ಶೂಟರ್ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಅವರು ‌ಶ್ವೇತ ವರ್ಣೀಯ ಅಮೆರಿಕನ್ ಮತ್ತು ಪೆನ್ಸಿಲ್ವೇನಿಯಾದಲ್ಲಿ ನೋಂದಾಯಿತ ರಿಪಬ್ಲಿಕನ್ ಮತದಾರ ಎಂದು ಗೊತ್ತಾಗಿರುವುದು. ಈ anti climax ಹತ್ಯೆಯ ವಿಫಲ ಪ್ರಯತ್ನ ಪ್ರಚೋದಿಸಿದ ಗದ್ದಲಕ್ಕಿಂತ ಹೆಚ್ಚು ಸುದ್ದಿಯಾಗಿ ಚರ್ಚೆಯಾಗುತ್ತಿದೆ. ರಿಪಬ್ಲಿಕನ್ ಮತದಾರನೊಬ್ಬ ಪಕ್ಷದ ಆಯ್ಕೆಯ ಅಭ್ಯರ್ಥಿಯಾದ ಟ್ರಂಪ್ ಅವರನ್ನು ಏಕೆ ಗುರಿಯಾಗಿಸಿಕೊಳ್ಳುತ್ತಾನೆ? ಎಂಬುದು ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ. ಇತ್ತೀಚಿನ ವಾರಗಳಲ್ಲಿ ರಿಪಬ್ಲಿಕನ್ನರು ಟ್ರಂಪ್ ಅವರನ್ನು ಎರಡನೇ ಅವಧಿಗೆ ಬೆಂಬಲಿಸಲು ಒಗ್ಗೂಡಿರುವುದರಿಂದ, ಈಗ ಇದೊಂದು ಗೊಂದಲದ ಪ್ರಶ್ನೆಯಾಗಿದೆ. ಮಾಜಿ ಅಧ್ಯಕ್ಷರ ಉಮೇದುವಾರಿಕೆಗೆ ಪಕ್ಷದೊಳಗೇ ಇರುವ ಭಿನ್ನಾಭಿಪ್ರಾಯದಿಂದಾಗಿ , ಹಿನ್ನೆಲೆಗೆ ತಳ್ಳಲ್ಪಟ್ಟಿರುವ ರಿಪಬ್ಲಿಕ್‌ ಪಕ್ಷದಲ್ಲೇ ದೋಷ ಗಳಿವೆಯೇ? ಕಾರಣ ಏನೇ ಇರಲಿ, ಕ್ರೂಕ್ಸ್‌ನನ್ನು ಗುಂಡಿಕ್ಕಿ ಕೊಂದಿರುವುದರಿಂದ ಅದೆಲ್ಲವೂ ಬರಿ ಊಹೆ ಆಗಿರಲಿದೆ.

ದ್ವೇಷ ರಾಜಕೀಯದ ಫಲಶೃತಿ

ಈ ರೀತಿ ಹತ್ಯೆಗೆ ಯತ್ನಿಸಿದ ವ್ಯಕ್ತಿ ತನ್ನ ಉದ್ದೇಶವನ್ನು ಗೊತ್ತುಮಾಡುಲ ಟಿಪ್ಪಣಿ ಅಥವಾ ಯಾವುದಾದರೂ ಮಾದರಿ ವಿವರಣೆಯನ್ನೋ ಬಿಡದೆ ಗುಂಡಿಗೆ ಬಲಿಯಾಗದಿದ್ದರೆ , ಆತನ ಉದ್ಧೇಶವೇನು ಎಂಬುದು ಯಾರಿಗೂ ಖಚಿತವಾಗಿ ತಿಳಿಯಲು ಸಾಧ್ಯವಾಗುತ್ತಲೇ ಇರಲಿಲ್ಲ. ಆದರೆ, ರಿಪಬ್ಲಿಕನ್ ಮತದಾರನಾಗಿರುವ ಈ ಹತ್ಯೆಗೆ ಯತ್ನಿಸಿದ ಕ್ರೂ‌ಕ್ಸ್‌, ಡೆಮೋಕ್ರಾಟ್‌ಗಳು ಮತ್ತು ಬಿಡೆನ್‌ರನ್ನು ಗುರಿಯಾಗಿಸಿಕೊಂಡ ರಿಪಬ್ಲಿಕ್‌ ಪಕ್ಷದ ಕಟುವಾದ ಟೀಕೆಗಳನ್ನು ಛಿದ್ರಗೊಳಿಸಿದ್ದಾನೆ . ಟ್ರಂಪ್‌ರ ಸಂಭವನೀಯ ಜೊತೆಗಾರ, ಸೆನೆಟರ್ ಜೆ.ಡಿ. ವಾನ್ಸ್ ಶೂಟಿಂಗ್‌ ನಡೆದ ಕೆಲವು ನಿಮಿಷಗಳ ನಂತರ, ʻಇದು ದ್ವೇಷ ಮತ್ತು ವಿಭಜಕ ರಾಜಕೀಯದ ಫಲಿತಾಂಶʼ ಎಂದು ಹೇಳುವ ಮೂಲಕ ಎಲ್ಲಕ್ಕೂ ಒಂದು ರೀತಿಯ ನಾಂದಿ ಹಾಡಿದ್ದಾರೆ. ಪ್ರತಿಪಕ್ಷಗಳು ಟ್ರಂಪ್ ಅವರನ್ನು ಸರ್ವಾ ಧಿಕಾರಿ ಫ್ಯಾಸಿಸ್ಟ್ ಎಂದು ಕರೆದಿದ್ದನ್ನು ಉಲ್ಲೇಖಿಸಿ; ಇಂಥ ಹೇಳಿಕೆ ಕೆಲವು ಮತದಾರರನ್ನು ಕೆರಳಿಸಬಹುದು. ಅವರಲ್ಲಿ ಒಬ್ಬರು ಟ್ರಂಪ್‌ ಅವರನ್ನು ತೊಡೆದುಹಾಕಲು ನಿರ್ಧರಿಸಿರಬಹುದು- ಎಂಬುದು ಅವರ ಮಾತಿನ ಅರ್ಥವಾಗಿತ್ತು.

ಬಾಹ್ಯ ಕೈವಾಡ ಇಲ್ಲ

ಹತ್ಯೆ ಪ್ರಯತ್ನವನ್ನು ಅಧಿಕಾರ ಹಿಡಿಯಲು ಬಳಸಿಕೊಳ್ಳಬೇಕೆಂದುಕೊಂಡಿದ್ದ ರಿಪಬ್ಲಿಕನ್ನರಿಗೆ, ಕ್ರೂಕ್ಸ್ ಅವರ ಪೂರ್ವಾಪರಗಳು ಪ್ರತಿಕೂಲವಾಗಿವೆ. ಇದರಿಂದ ಟ್ರಂಪ್‌ ಬಗೆಗಿನ ಸಹಾನುಭೂತಿ ಮತದಾರರಲ್ಲಿ ದುರ್ಬಲಗೊಳ್ಳುತ್ತದೆ. ಡೆಮಾಕ್ರಾಟ್‌ಗಳು ಶೂಟಿಂಗ್‌ ನಿಂದ ನೈತಿಕವಾಗಿ ಹೊರೆ ಹೊರಬೇಕಾಗಿ ಬಂದಿದೆ ಎಂಬುದು ರಿಪಬ್ಲಿಕನ್ನರಿಗೆ ಗೊತ್ತಾಗಿದೆ.

ವಾಸ್ತವವೆಂದರೆ, ಹತ್ಯೆ ಪ್ರಯತ್ನದಲ್ಲಿ ಹೊರಗಿನವರ ಕೈವಾಡ ಅಥವಾ ಇಸ್ಲಾಮಿಸ್ಟರು ಸೇರಿದಂತೆ ಪ್ರತಿಸ್ಪರ್ಧಿ ರಾಜಕೀಯ-ಧಾರ್ಮಿಕ ಹಿನ್ನೆಲೆಯವರು ಯಾರೂ ಇಲ್ಲ ಎಂಬುದು ಈಗ ಸ್ಪಷ್ಟವಾಗಿದೆ. ಕ್ರೂಕ್ಸ್‌ನ ವಿಫಲ ಯತ್ನದ ಮೇಲೆ ಈಗ ಎಲ್ಲ ಗಮನ ಕೇಂದ್ರೀಕೃತವಾಗಿದೆ. ಪಿತೂರಿ ಸಿದ್ಧಾಂತಗಳನ್ನು ಹುಟ್ಟುಹಾಕುವಲ್ಲಿ ಹೆಸರುವಾಸಿಯಾಗಿರುವ ಅಮೆರಿಕ, ಈಗ ಟ್ರಂಪ್ ಎದುರಿಸಿದ ಹತ್ಯೆ ಯತ್ನಕ್ಕೆ ಸಂಬಂಧಿಸಿದ ಪ್ರಶ್ನೆಗಳಲ್ಲಿ ಮುಳುಗಿಹೋಗಿದೆ. ಹೇಗಾದರೂ ಮಾಡಿ ಉನ್ನತ ಹುದ್ದೆಗೆ ಏರಲು ಪ್ರಯತ್ನಿಸುತ್ತಿರುವ ಮಾಜಿ ಅಧ್ಯಕ್ಷರ ಬಗ್ಗೆ ಸಹಾನುಭೂತಿ ಮೂಡಿಸಲು ಈ ಶೂಟಿಂಗ್ ಯತ್ನ ನಡೆಯಿತೇ? ಎಂಬುದೂ ಕೂಡ ಮತ್ತೊಂದು ಪ್ರಶ್ನೆಯಾಗಿದೆ.

ಕಳೆದ ಚುನಾವಣೆಯಲ್ಲಿ ಬಿಡೆನ್ ಅವರಿಂದ ಸೋಲುಂಡ ಬಳಿಕ ಟ್ರಂಪ್‌, ಅನೇಕ ರೀತಿಯ ತನಿಖೆಗೆ ಒಳಪಟ್ಟಿದ್ದಾರೆ; ಅವರನ್ನು ವಿವಿಧ ನ್ಯಾಯಾಲಯಗಳಿಗೆ ಕರೆದೊಯ್ಯಲಾಗಿದೆ, ವಿವಿಧ ದೋಷಾರೋಪ ಮಾಡಲಾಗಿದೆ ಮತ್ತು ಟೀಕಿಸಲಾಗಿದೆ; ಹೆಚ್ಚಿನ ಪ್ರಕರಣಗಳ ತನಿಖೆ ಪ್ರಗತಿಯಲ್ಲಿದೆ. ಒಂದುವೇಳೆ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರು ಗೆದ್ದರೆ, ಅಮೆರಿಕದ ಸಂವಿಧಾನದ ಅಡಿಯಲ್ಲಿ ಹೆಚ್ಚಿನ ಆರೋಪಗಳ ತೀವ್ರತೆಯನ್ನು ಕಡಿಮೆಗೊಳಿಸುವ ಅಧಿಕಾರವನ್ನು ಅವರು ಹೊಂದಿದ್ದಾರೆ ಮತ್ತು ಕಾನೂನು ಪ್ರಕ್ರಿಯೆಯಿಂದ ಶುದ್ಧರಾಗಿ ಹೊರಹೊಮ್ಮುವ ಸಾಧ್ಯತೆಯಿದೆ ಎಂಬ ನಂಬಿಕೆಯೂ ಸಾರ್ವಜನಿಕರಲ್ಲಿ ಇರುವಂತಿದೆ.

ಪಿತೂರಿ ಸಿದ್ಧಾಂತಗಳು

ಆದರೆ, ಈ ಪಿತೂರಿ ಸಿದ್ಧಾಂತಗಳು ಒಂದು ನ್ಯೂನತೆಯನ್ನು ಹೊಂದಿವೆ. ಟ್ರಂಪ್ ಈಗಾಗಲೇ ಚುನಾವಣಾ ಗೆಲುವಿನ ನಾಗಾಲೋಟದಲ್ಲಿದ್ದರು ಮತ್ತು ಬಿಡೆನ್‌ ಅವರ ಚುನಾವಣೆ ಪ್ರಚಾರವನ್ನು ನಿಭಾಯಿಸುತ್ತಿರುವ ರೀತಿಯಿಂದಾಗಿ ಡೆಮಾಕ್ರಟರು ಆತಂಕಗೊಂಡಿದ್ದರು. ಬಿಡೆನ್ ಸ್ಪರ್ಧೆಯಿಂದ ಹಿಂದೆ ಸರಿದು ಪರ್ಯಾಯ ಅಭ್ಯರ್ಥಿಗೆ ದಾರಿ ಮಾಡಿಕೊಟ್ಟರೆ ಪರಿಸ್ಥಿತಿ ಬದಲಾಗಬಹುದು; ಬಿಡೆನ್ ಗೆಲುವಿನ ಬಗ್ಗೆ ಹೆಚ್ಚು ಭರವಸೆ ಇಲ್ಲ ಎಂಬ ವಾತಾವರಣವೂ ಸೃಷ್ಟಿಯಾಗಿತ್ತು. ಇಂಥ ಸನ್ನಿವೇಶ ಇರುವಾಗ ಯಾರಾದರೂ, ವಿಶೇಷವಾಗಿ ರಿಪಬ್ಲಿಕನ್ ಮತದಾರನೊಬ್ಬ ಟ್ರಂಪ್‌ ಹೆಚ್ಚು ಸಹಾನುಭೂತಿ ಮತ್ತು ಬೆಂಬಲ ಪಡೆಯಲಿ ಎಂದು ಅವರನ್ನು ಶೂಟ್ ಮಾಡುವ ಅಪಾಯಕ್ಕೆ ಏಕೆ ಮುಂದಾಗುತ್ತಾರೆ? ಈ ದೃಷ್ಟಿಕೋನದಿಂದ ಶೂಟಿಂಗ್‌ ಪ್ರಯತ್ನಕ್ಕೆ ಅರ್ಥವಿಲ್ಲ ಎನ್ನುವುದು ಸಾರ್ವಜನಿಕರ ಭಾವನೆ.

ಅಮೆರಿಕದಲ್ಲಿ ಈ ಹಿಂದೆ ನಡೆದಿರುವ, ತಮ್ಮದೇ ಆದ ರೀತಿಯಲ್ಲಿ ವರ್ತಿಸುವ ವ್ಯಕ್ತಿಗಳಿಂದ ನಡೆದಿರುವ ಅನೇಕ ಉನ್ನತ ವ್ಯಕ್ತಿಗಳ ಹತ್ಯೆಗಳು ಈವರೆಗೆ ಪತ್ತೆಯಾಗಿಲ್ಲ ಅಥವಾ ಕಾರಣಗಳು ಬಹಿರಂಗಗೊಂಡಿಲ್ಲ. ಉದಾಹರಣೆಗೆ, ಜಾನ್ ಎಫ್ ಕೆನಡಿ ಅವರ ಹತ್ಯೆ ಇನ್ನೂ ನಿಗೂಢವಾಗಿಯೇ ಉಳಿದಿದೆ. ಟ್ರಂಪ್‌ರ ಹತ್ಯೆಯ ಯತ್ನವೂ ಅಂತಹದ್ದೇ ಮತ್ತೊಂದು ಎಂದು ತೋರುತ್ತದೆ.

ಶೂಟಿಂಗ್ ಟ್ರಂಪ್‌ಗೆ ಸಹಾಯ ಮಾಡುತ್ತದೋ ಇಲ್ಲವೋ, ಶನಿವಾರದ ಘಟನೆಯು ಬೇರೊಂದು ಪ್ರಮುಖ ಬೆಳವಣಿಗೆ ಆಗುವವರೆಗೆ, ಪ್ರಚಾರದಲ್ಲಿ ಪ್ರಾಬಲ್ಯ ಸಾಧಿಸುತ್ತದೆ. ಅಂತಹ ಒಂದು ಸಾಧ್ಯತೆಯೆಂದರೆ, ಬಿಡೆನ್ ಅವರನ್ನು ಉಮೇದುವಾರಿಕೆಯನ್ನು ಬದಲಿಸುವುದು. ಅಲ್ಲಿಯವರೆಗೆ, ಪೆನ್ಸಿಲ್ವೇನಿಯಾ ಶೂಟಿಂಗ್ ಚುನಾವಣೆ ಪ್ರಚಾರ ಸಾರ್ವಜನಿಕರ ಮನಸ್ಸನ್ನು ಆಕ್ರಮಿಸಿಕೊಂಡು ಚರ್ಚೆಗೆ ಗ್ರಾಸ ಒದಗಿಸುತ್ತಲೇ ಇರುತ್ತದೆ.

Read More
Next Story