x

ಫೋನ್ ಕಾಲ್ ಬಂದ್ರೆ ಹೆಸರು ಡಿಸ್ಪ್ಲೇ; SPAM ವೀರರಿಗೆ ಕಾದಿದೆ ಸಂಕಷ್ಟ

ನಿಮ್ಮ ಮೊಬೈಲ್‌ಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದರೂ, ಆ ಸಿಮ್ ಕಾರ್ಡ್ ಯಾರ ಹೆಸರಿನಲ್ಲಿ ನೋಂದಣಿಯಾಗಿದೆಯೋ (KYC) ಆ ಅಧಿಕೃತ ಹೆಸರು ನಿಮ್ಮ ಸ್ಕ್ರೀನ್ ಮೇಲೆ ನೇರವಾಗಿ ಪ್ರದರ್ಶನಗೊಳ್ಳಲಿದೆ.


Click the Play button to hear this message in audio format

ನವೆಂಬರ್ 1 ರಿಂದ ಫೋನ್ ಕಾಲ್‌ಗೆ ಹೊಸ ನಿಯಮ! ಪ್ರತಿದಿನ ಬರುವ ಕಿರಿಕಿರಿ ಉಂಟುಮಾಡುವ ಸ್ಪ್ಯಾಮ್ ಕರೆಗಳು ಮತ್ತು ಸೈಬರ್ ವಂಚನೆಯ ಫ್ರಾಡ್ ಕರೆಗಳಿಗೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಹಾಗೂ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಬೃಹತ್ ಹೆಜ್ಜೆ ಇಟ್ಟಿವೆ.

ನವೆಂಬರ್ 1 ರಿಂದ ದೇಶಾದ್ಯಂತ 'ಕಾಲಿಂಗ್ ನೇಮ್ ಪ್ರೆಸೆಂಟೇಷನ್' (CNAP) ಎಂಬ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ. ಈ ನೂತನ ನಿಯಮದ ಪ್ರಕಾರ, ನಿಮ್ಮ ಮೊಬೈಲ್‌ಗೆ ಯಾವುದೇ ಅಪರಿಚಿತ ಸಂಖ್ಯೆಯಿಂದ ಕರೆ ಬಂದರೂ, ಆ ಸಿಮ್ ಕಾರ್ಡ್ ಯಾರ ಹೆಸರಿನಲ್ಲಿ ನೋಂದಣಿಯಾಗಿದೆಯೋ (KYC) ಆ ಅಧಿಕೃತ ಹೆಸರು ನಿಮ್ಮ ಸ್ಕ್ರೀನ್ ಮೇಲೆ ನೇರವಾಗಿ ಪ್ರದರ್ಶನಗೊಳ್ಳಲಿದೆ.

ಇನ್ಮುಂದೆ ಥರ್ಡ್ ಪಾರ್ಟಿ ಆ್ಯಪ್‌ಗಳ ಸಹಾಯವಿಲ್ಲದೆ ಕರೆ ಮಾಡುವವರ ನೈಜ ಗುರುತನ್ನು ಸುಲಭವಾಗಿ ತಿಳಿಯಬಹುದು.

ಮುಖ್ಯಾಂಶಗಳು:

KYC ಆಧಾರಿತ ಹೆಸರು: ಸಿಮ್ ಖರೀದಿ ವೇಳೆ ನೀಡಲಾದ ಸತ್ಯಸಂಧವಾದ ಹೆಸರೇ ಸ್ಕ್ರೀನ್ ಮೇಲೆ ಮೂಡಲಿದೆ.

ವಂಚನೆಗೆ ತಡೆ: ನಕಲಿ ಹೆಸರು ಬಳಸಿ ಕರೆ ಮಾಡುವ ಬ್ಯಾಂಕ್ ವಂಚಕರು ಹಾಗೂ ಸ್ಪ್ಯಾಮರ್‌ಗಳನ್ನು ಆರಂಭದಲ್ಲೇ ಗುರುತಿಸಿ ನಿರ್ಲಕ್ಷಿಸಬಹುದು.

ಯಾವುದೇ ಆ್ಯಪ್ ಅಗತ್ಯವಿಲ್ಲ: Truecaller ನಂತಹ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡುವ ಅಥವಾ ಇಂಟರ್ನೆಟ್ ಆನ್ ಮಾಡುವ ಅಗತ್ಯವಿರುವುದಿಲ್ಲ.

ಕೇಂದ್ರ ಸರ್ಕಾರದ ಈ ಮಹತ್ವದ ನಿರ್ಧಾರದಿಂದ ಕೋಟ್ಯಂತರ ಮೊಬೈಲ್ ಬಳಕೆದಾರರು ನಿಟ್ಟುಸಿರು ಬಿಡುವಂತಾಗಿದ್ದು, ಸೈಬರ್ ಅಪರಾಧಗಳಿಗೆ ಬ್ರೇಕ್ ಬೀಳಲಿದೆ ಎಂದು ನಂಬಲಾಗಿದೆ.

Read More
Next Story