ಮೊಸಳೆಗಳ ನಡುವೆ 12 ಗಂಟೆ ಬದುಕುಳಿದ ಅಜ್ಜಿ
ಬ್ರಾಹ್ಮಣಿ ನದಿಯಲ್ಲಿ ಪ್ರವಾಹದ ರಭಸಕ್ಕೆ ಕೊಚ್ಚಿಹೋದ ಕೆ.ಸಿ. ದಲೈ 12 ಗಂಟೆಗಳ ಕಾಲ ನೀರಿನಲ್ಲಿ ತೇಲಿ 30 ಕಿ.ಮೀ ದೂರ ಸಾಗಿದ ಬಳಿಕ ಪವಾಡಸದೃಶವಾಗಿ ಬದುಕುಳಿದಿದ್ದಾರೆ.
ಪ್ರವಾಹದ ರಭಸಕ್ಕೆ ನದಿಯಲ್ಲಿ ಕೊಚ್ಚಿಕೊಂಡು ಹೋದ ವೃದ್ಧೆಯೊಬ್ಬರು ಬರೋಬ್ಬರಿ 12 ಗಂಟೆಗಳ ಬಳಿಕ ಪವಾಡಸದೃಶ ರೀತಿಯಲ್ಲಿ ಬದುಕುಳಿದಿದ್ದಾರೆ. ಶನಿವಾರ ರಾತ್ರಿ ಸುಮಾರು 10 ಗಂಟೆಗೆ ಬ್ರಾಹ್ಮಣಿ ನದಿಯ ದಡಕ್ಕೆ ತೆರಳಿದ್ದ ಕೆ.ಸಿ. ದಲೈ ಅವರು ಕಾಲು ಜಾರಿ ಉಕ್ಕಿ ಹರಿಯುತ್ತಿದ್ದ ನದಿಗೆ ಬಿದ್ದಿದ್ದರು. ಕತ್ತಲಿನಲ್ಲಿ ಸಹಾಯಕ್ಕಾಗಿ ಕೂಗಿದರೂ ಯಾರಿಗೂ ಅವರ ಧ್ವನಿ ಕೇಳಿಸಿರಲಿಲ್ಲ. ಬಳಿಕ ಪ್ರವಾಹದ ನೀರಿನ ರಭಸಕ್ಕೆ ಅವರು ಕೊಚ್ಚಿಕೊಂಡು ಹೋಗಿದ್ದಾರೆ. ಆದರೆ ಬದುಕುವ ಛಲ ಬಿಡದ ದಲೈ, ಸುಮಾರು 12 ಗಂಟೆಗಳ ಕಾಲ ನೀರಿನಲ್ಲಿ ತೇಲುತ್ತಾ ಬರೋಬ್ಬರಿ 30 ಕಿಲೋಮೀಟರ್ ದೂರ ಸಾಗಿದ್ದಾರೆ. ಇದರ ನಡುವೆ ಮತ್ತೊಂದು ಆತಂಕಕಾರಿ ಸಂಗತಿಯೂ ಇತ್ತು. ಅವರು ತೇಲುತ್ತಿದ್ದ ನದಿಯ ಪ್ರದೇಶದಲ್ಲಿ ಮೊಸಳೆಗಳಿದ್ದವು. ಮೊಸಳೆಗಳಿರುವ ನೀರಿನಲ್ಲಿ ಹಲವು ಗಂಟೆಗಳ ಕಾಲ ಹೋರಾಡಿ ಕೊನೆಗೂ ಬದುಕುಳಿದ ವೃದ್ಧೆಯ ಈ ಘಟನೆ ಇದೀಗ ಎಲ್ಲರ ಗಮನ ಸೆಳೆದಿದೆ. 12 ಗಂಟೆಗಳ ಕಾಲ ಅವರು ಹೇಗೆ ಬದುಕುಳಿದರು? 30 ಕಿಲೋಮೀಟರ್ ದೂರದ ಬಳಿಕ ಅವರನ್ನು ರಕ್ಷಿಸಿದ್ದು ಹೇಗೆ? ಸಂಪೂರ್ಣ ಘಟನೆಯ ವಿವರ ಈ ವಿಡಿಯೊದಲ್ಲಿದೆ.

