
ದೆಹಲಿ ಜಂತರ್ಮಂತರ್ನಲ್ಲಿ ನಡೆದ ಸಿಜೆಪಿ ಪ್ರತಿಭಟನೆಯ ವೇಳೆ ತಮ್ಮ ಫೋಟೋವನ್ನು ಕೃತಕ ಬುದ್ಧಿಮತ್ತೆ ಹಾಗೂ ಫೇಸ್ಸ್ವಾಪ್ ತಂತ್ರಜ್ಞಾನ ಬಳಸಿ ಮಾರ್ಫ್ ಮಾಡಲಾಗಿದೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.
ಸಿಜೆಪಿ ಪ್ರತಿಭಟನೆ ವೇಳೆ ಮಹಿಳೆಯ ಫೋಟೋ ದುರುಪಯೋಗ- ಎಫ್ಐಆರ್ ದಾಖಲು
ಈ ಚಿತ್ರವನ್ನು ಪ್ರತಿಭಟನಾ ಸ್ಥಳದಲ್ಲಿ ದೊಡ್ಡ ಬ್ಯಾನರ್ಗಳು ಮತ್ತು ಪೋಸ್ಟರ್ಗಳಲ್ಲಿ ಬಳಸಲಾಗಿತ್ತು. ಅಲ್ಲದೆ, ಆ ಚಿತ್ರಕ್ಕೆ ಸಂಬಂಧಿಸಿದ ಆಕ್ಷೇಪಾರ್ಹ ಘೋಷಣೆಗಳನ್ನು ಕೂಗಲಾಗಿದೆ ಹಾಗೂ ಚಿತ್ರವನ್ನು ಒಳಗೊಂಡ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ, ವಿಶೇಷವಾಗಿ ಇನ್ಸ್ಟಾಗ್ರಾಂನಲ್ಲಿ ಹರಿಬಿಡಲಾಗಿದೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ದೆಹಲಿ ಜಂತರ್ಮಂತರ್ನಲ್ಲಿ ನಡೆದ ಸಿಜೆಪಿ ಪ್ರತಿಭಟನೆಯ ವೇಳೆ ತಮ್ಮ ಫೋಟೋವನ್ನು ಕೃತಕ ಬುದ್ಧಿಮತ್ತೆ ಹಾಗೂ ಫೇಸ್ಸ್ವಾಪ್ ತಂತ್ರಜ್ಞಾನ ಬಳಸಿ ಮಾರ್ಫಿಂಗ್ ಮಾಡಲಾಗಿದೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಈ ಸಂಬಂಧ ದೆಹಲಿ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
AI ತಂತ್ರಜ್ಞಾನ ಬಳಸಿ ಫೋಟೋ ಬದಲಾವಣೆ ಆರೋಪ
ಮಹಿಳೆಯ ದೂರಿನ ಪ್ರಕಾರ, ಅವರ ವೈಯಕ್ತಿಕ ಫೋಟೋವನ್ನು ಅವರ ಅನುಮತಿಯಿಲ್ಲದೆ ಪಡೆದು, ಕೃತಕ ಬುದ್ಧಿಮತ್ತೆ ಮತ್ತು ಫೇಸ್ಸ್ವಾಪ್ ತಂತ್ರಜ್ಞಾನ ಬಳಸಿ ಬದಲಾಯಿಸಲಾಗಿದೆ. ಬದಲಾಯಿಸಲಾದ ಚಿತ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮುಖವನ್ನು ಮಹಿಳೆಯ ಫೋಟೋದೊಂದಿಗೆ ಜೋಡಿಸಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.
ಈ ಚಿತ್ರವನ್ನು ಪ್ರತಿಭಟನಾ ಸ್ಥಳದಲ್ಲಿ ದೊಡ್ಡ ಬ್ಯಾನರ್ಗಳು ಮತ್ತು ಪೋಸ್ಟರ್ಗಳಲ್ಲಿ ಬಳಸಲಾಗಿತ್ತು. ಅಲ್ಲದೆ, ಆ ಚಿತ್ರಕ್ಕೆ ಸಂಬಂಧಿಸಿದ ಆಕ್ಷೇಪಾರ್ಹ ಘೋಷಣೆಗಳನ್ನು ಕೂಗಲಾಗಿದೆ ಹಾಗೂ ಚಿತ್ರವನ್ನು ಒಳಗೊಂಡ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ, ವಿಶೇಷವಾಗಿ ಇನ್ಸ್ಟಾಗ್ರಾಂನಲ್ಲಿ ಹರಿಬಿಡಲಾಗಿದೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಸಿಜೆಪಿ ಮುಖಂಡರ ವಿರುದ್ಧ ನೇರವಾಗಿ ಎಫ್ಐಆರ್ನಲ್ಲಿ ಆರೋಪವಿಲ್ಲ
ಮಹಿಳೆ ನೀಡಿದ ದೂರಿನಲ್ಲಿ ಸಿಜೆಪಿ ಸಂಸ್ಥಾಪಕರಾದ ಅಭಿಜೀತ್ ದಿಪ್ಕೆ ಮತ್ತು ಸೌರವ್ ದಾಸ್ ಸೇರಿದಂತೆ ಕೆಲವರ ವಿರುದ್ಧ ಆರೋಪಗಳನ್ನು ಮಾಡಲಾಗಿದೆ. ಆದರೆ ಪೊಲೀಸರು ದಾಖಲಿಸಿರುವ ಎಫ್ಐಆರ್ನಲ್ಲಿ ದಿಪ್ಕೆ, ದಾಸ್ ಅಥವಾ ಆಶುತೋಷ್ ರಂಕಾ ಅವರನ್ನು ಆರೋಪಿಗಳಾಗಿ ಹೆಸರಿಸಲಾಗಿಲ್ಲ. ಪ್ರಕರಣವನ್ನು ಅಪರಿಚಿತ ವ್ಯಕ್ತಿಗಳ ವಿರುದ್ಧ ದಾಖಲಿಸಲಾಗಿದೆ. ಈ ಪ್ರಕರಣವನ್ನು ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆದರಿಕೆ, ಕಿರುಕುಳದ ಆರೋಪ
ತಮ್ಮ ಫೋಟೋವನ್ನು ದುರುಪಯೋಗಪಡಿಸಿಕೊಂಡಿರುವುದರಿಂದ ತಮ್ಮ ಘನತೆಗೆ ಧಕ್ಕೆಯುಂಟಾಗಿದೆ ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾರೆ. ಪ್ರತಿಭಟನೆಯ ಸಂದರ್ಭದಲ್ಲಿ ಕೆಲ ಯುವಕರು ತಮಗೆ ಬೆದರಿಕೆ ಹಾಕಿದ್ದು, ಕಿರುಕುಳ ನೀಡುವ ರೀತಿಯಲ್ಲಿ ವರ್ತಿಸಿದ್ದಾರೆ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ.
ಜಂತರ್ಮಂತರ್ನಲ್ಲಿ ನಡೆದಿದ್ದ ಸಿಜೆಪಿ ಪ್ರತಿಭಟನೆ
ಸಿಜೆಪಿ ನೇತೃತ್ವದ ಪ್ರತಿಭಟನೆ ಜೂನ್ 20ರಂದು ಆರಂಭಗೊಂಡು ಒಂದು ತಿಂಗಳಿಗೂ ಹೆಚ್ಚು ಕಾಲ ನಡೆದಿತ್ತು. ಸಂಸತ್ ಭವನದತ್ತ ನಡೆದ ಮೆರವಣಿಗೆಯ ಸಂದರ್ಭದಲ್ಲಿ ಪ್ರತಿಭಟನಾಕಾರರು ಭದ್ರತಾ ಸಿಬ್ಬಂದಿಯೊಂದಿಗೆ ಘರ್ಷಣೆ ನಡೆಸಿದ್ದರು. ಪರಿಸ್ಥಿತಿ ನಿಯಂತ್ರಿಸಲು ಭದ್ರತಾ ಪಡೆಗಳು ಲಾಠಿ ಮತ್ತು ಅಶ್ರುವಾಯು ಬಳಸಿದ್ದವು. ಜುಲೈ 25ರಂದು ಪ್ರತಿಭಟನೆ ಅಂತ್ಯಗೊಂಡಿತ್ತು.

