x

ವಿಶಾಖಪಟ್ಟಣಂ | ಸೈಕ್ಲೋನ್ ಅಕ್ವಾನ್ ಎಫೆಕ್ಟ್‌.. ಬೀಚ್‌ ರಸ್ತೆಗೆ ಕೊರೆತದ ಭೀತಿ

ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಸಮುದ್ರದ ಅಬ್ಬರ ಆತಂಕ ಮೂಡಿಸಿದೆ. ಸೈಕ್ಲೋನ್ ಅಕ್ವಾನ್ ಬಳಿಕ ಉಂಟಾಗಿರುವ ಪ್ರಕ್ಷುಬ್ಧ ಸಮುದ್ರದ ಪರಿಸ್ಥಿತಿಯಿಂದ ನಗರದ ಬೀಚ್ ರಸ್ತೆಯಲ್ಲಿ ತೀವ್ರ ಕಡಲ್ಕೊರೆತ ಸಂಭವಿಸುತ್ತಿದೆ.


ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಸಮುದ್ರದ ಅಬ್ಬರ ಆತಂಕ ಮೂಡಿಸಿದೆ. ಸೈಕ್ಲೋನ್ ಅಕ್ವಾನ್ ಬಳಿಕ ಉಂಟಾಗಿರುವ ಪ್ರಕ್ಷುಬ್ಧ ಸಮುದ್ರದ ಪರಿಸ್ಥಿತಿಯಿಂದ ನಗರದ ಬೀಚ್ ರಸ್ತೆಯಲ್ಲಿ ತೀವ್ರ ಕಡಲ್ಕೊರೆತ ಸಂಭವಿಸುತ್ತಿದೆ. ಐಎನ್‌ಎಸ್ ಕುರ್ಸುರಾ ಜಲಾಂತರ್ಗಾಮಿ ಮ್ಯೂಸಿಯಂ ಸಮೀಪ ಹಾಗೂ ಪೊಲೀಸ್ ಕ್ಯಾಂಟೀನ್ ಎದುರಿನ ಪ್ರದೇಶದಲ್ಲಿ ಸಮುದ್ರದ ಅಲೆಗಳ ಅಬ್ಬರಕ್ಕೆ ಕರಾವಳಿ ಭಾಗ ಕೊಚ್ಚಿಹೋಗುವ ಭೀತಿ ಎದುರಾಗಿದೆ. ಅಲೆಗಳ ರಭಸದಿಂದ ಬೀಚ್ ರಸ್ತೆಯ ಅಂಚಿನ ಮಣ್ಣು ಮತ್ತು ಕರಾವಳಿ ಪ್ರದೇಶಕ್ಕೆ ಹಾನಿಯಾಗುತ್ತಿದೆ. ಸಮುದ್ರದ ಅಲೆಗಳು ರಸ್ತೆಯತ್ತ ಅಪ್ಪಳಿಸುತ್ತಿರುವ ದೃಶ್ಯಗಳು ಆತಂಕ ಹೆಚ್ಚಿಸಿವೆ. ಕರಾವಳಿ ಸವೆತ ಮತ್ತಷ್ಟು ತೀವ್ರಗೊಂಡರೆ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಅಪಾಯ ಎದುರಾಗುವ ಸಾಧ್ಯತೆಯಿದೆ. ಸ್ಥಳೀಯರು ಮತ್ತು ಪ್ರವಾಸಿಗರು ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ.

Read More
Next Story