Tamil nadu | ಜನರ ಸಮ್ಮುಖದಲ್ಲೇ ಜನ ಕಲ್ಯಾಣ ಯೋಜನೆಗೆ ಸಿಎಂ ಜೋಸೆಫ್‌ ವಿಜಯ್‌ ಸಹಿ
x
ವಿಜಯ್‌ ಅವರು ಉಚಿತ ವಿದ್ಯುತ್‌ ಯೋಜನೆಗೆ ಸಹಿ ಹಾಕಿದರು

Tamil nadu | ಜನರ ಸಮ್ಮುಖದಲ್ಲೇ ಜನ ಕಲ್ಯಾಣ ಯೋಜನೆಗೆ ಸಿಎಂ ಜೋಸೆಫ್‌ ವಿಜಯ್‌ ಸಹಿ

ವಿಜಯ್ ಅವರು ಚುನಾವಣಾ ಪ್ರಣಾಳಿಕೆಯಲ್ಲಿ ಸಾಕಷ್ಟು ಜನ ಕಲ್ಯಾಣ ಯೋಜನೆಗಳನ್ನು ಪ್ರಕಟಿಸಿದ್ದರು. ವಿಜಯ್ ಅವರು ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಒಂದು ಗ್ಯಾರಂಟಿ ಯೋಜನೆಗೆ ಸಹಿ ಹಾಕಿರುವುದು ರಾಜಕೀಯ ಪಕ್ಷಗಳ ಹುಬ್ಬೇರಿಸಿದೆ.


ತಮಿಳುನಾಡಿನ 24ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಿ. ಜೋಸೆಫ್ ವಿಜಯ್ ಅವರು ಅಧಿಕಾರ ವಹಿಸಿಕೊಂಡ ಮರುಕ್ಷಣವೇ ಸಾರ್ವಜನಿಕರ ಸಮ್ಮುಖದಲ್ಲೇ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಯೋಜನೆಗೆ ಸಹಿ ಹಾಕಿದ್ದಾರೆ. ಆ ಮೂಲಕ ತಮ್ಮ ಆಡಳಿತದ ಆರಂಭಿಕ ದಿನವೇ ಜನಪರ ಕಲ್ಯಾಣ ಯೋಜನೆಗಳಿಗೆ ಆದ್ಯತೆ ನೀಡುವ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ವಿಜಯ್ ಅವರು ಚುನಾವಣಾ ಪ್ರಣಾಳಿಕೆಯಲ್ಲಿ ಸಾಕಷ್ಟು ಜನ ಕಲ್ಯಾಣ ಯೋಜನೆಗಳನ್ನು ಪ್ರಕಟಿಸಿದ್ದರು. ಟಿವಿಕೆ ಪಕ್ಷದ ಈ ಕಲ್ಯಾಣ ಯೋಜನೆಗಳ ಜಾರಿ ಅಸಾಧ್ಯ, ಇದರಿಂದ ರಾಜ್ಯದ ಬೊಕ್ಕಸ ಬರಿದಾಗಲಿದೆ ಎಂದು ವಿಪಕ್ಷಗಳು ಟೀಕಾಪ್ರಹಾರ ನಡೆಸಿದ್ದವು. ಆದಾಗ್ಯೂ, ವಿಜಯ್ ಅವರು ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಒಂದು ಗ್ಯಾರಂಟಿ ಯೋಜನೆಗೆ ಸಹಿ ಹಾಕಿರುವುದು ರಾಜಕೀಯ ಪಕ್ಷಗಳ ಹುಬ್ಬೇರಿಸಿದೆ.

ವಿಜಯ್ ನೀಡಿದ್ದ ಆಶ್ವಾಸನೆಗಳೇನು?

ಪ್ರತಿ ಕುಟುಂಬದಲ್ಲಿ 60 ವರ್ಷದೊಳಗಿನ ಮನೆ ಯಜಮಾನಿಗೆ ಮಾಸಿಕ 2,500 ಆರ್ಥಿಕ ನೆರವು, ಪ್ರತಿ ಕುಟುಂಬಕ್ಕೆ ವಾರ್ಷಿಕ 6 ಉಚಿತ ಎಲ್‌ಪಿಜಿ ಸಿಲಿಂಡರ್ ವಿತರಣೆ, ಮದುವೆಯಾಗುವ ಯುವತಿಯರಿಗೆ ಅಣ್ಣನ್‌ ಸೀರೆ ಯೋಜನೆಯಡಿ 8 ಗ್ರಾಂ ಬಂಗಾರ ಮತ್ತು ರೇಷ್ಮೆ ಸೀರೆ ನೀಡುವ ಆಶ್ವಾಸನೆ ನೀಡಿದ್ದರು.

ಇದಲ್ಲದೇ ನವಜಾತ ಶಿಶುಗಳಿಗೆ ಬಂಗಾರದ ಉಂಗುರ ಮತ್ತು 'ಬೇಬಿ ವೆಲ್ಕಮ್ ಕಿಟ್', ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳ ಕುಟುಂಬಗಳಿಗೆ ವಾರ್ಷಿಕ 15 ಸಾವಿರ ರೂ. ನೆರವು, 20 ಲಕ್ಷದವರೆಗೆ ಉನ್ನತ ಶಿಕ್ಷಣ ಸಾಲ, ಕಾಮರಾಜರ್ ಹೆಸರಿನಲ್ಲಿ 100 ವಿಶೇಷ ವಸತಿ ಶಾಲೆಗಳ ಸ್ಥಾಪನೆ, AI ವಿಶ್ವವಿದ್ಯಾಲಯ, AI ಸಿಟಿ ಮತ್ತು AI ಸಚಿವಾಲಯ ಸ್ಥಾಪನೆ ಕುರಿತು ಪ್ರಣಾಳಿಕೆಯಲ್ಲಿ ಘೋಷಿಸಿದ್ದಾರೆ.

ಪ್ರತಿ ಕುಟುಂಬಕ್ಕೆ 25 ಲಕ್ಷದ ವೆಚ್ಚದ ಕುಟುಂಬ ಆರೋಗ್ಯ ವಿಮೆ ಯೋಜನೆ, ವಾರ್ಷಿಕವಾಗಿ ಉಚಿತ ಆರೋಗ್ಯ ತಪಾಸಣೆ ಮತ್ತು ಆಸ್ಪತ್ರೆಗಳ ಆಧುನೀಕರಣ, ವೃದ್ಧರು ಮತ್ತು ವಿಶೇಷ ಚೇತನರಿಗೆ ತಿಂಗಳಿಗೆ 3 ಸಾವಿರ ರೂ. ಪಿಂಚಣಿ ನೀಡುವ ಆಶ್ವಾಸನೆ ನೀಡಿದ್ದರು.

5 ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ರೈತರ ಸಂಪೂರ್ಣ ಬೆಳೆ ಸಾಲಮನ್ನಾ, 5 ಎಕರೆಗಿಂತ ಹೆಚ್ಚು ಭೂಮಿ ಹೊಂದಿದವರಿಗೆ ಶೇ 50 ರಷ್ಟು ಸಾಲ ಮನ್ನಾ, ಭತ್ತಕ್ಕೆ 3,500 ಮತ್ತು ಕಬ್ಬಿಗೆ 4,500 ಕನಿಷ್ಠ ಬೆಂಬಲ ಬೆಲೆ, ಮನೆಬಾಗಿಲಿಗೆ ಪಡಿತರ ವಿತರಣೆ ಮತ್ತು ಸೇವಾ ಹಕ್ಕು ಕಾಯ್ದೆಯಡಿ ಪ್ರಮಾಣಪತ್ರಗಳ ಸಮಯೋಚಿತ ವಿತರಣೆ, ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಮರುಸ್ಥಾಪನೆ ಮಾಡುವುದಾಗಿ ವಿಜಯ್‌ ನೇತೃತ್ವದ ಟಿವಿಕೆ ಪಕ್ಷ ಘೋಷಿಸಿತ್ತು.

Read More
Next Story