
ಭಕ್ತರ ಅನುಕೂಲಕ್ಕಾಗಿ ದಿನಾಂಕವಾರು ಕೋಟಾ ಬಿಡುಗಡೆ ಮಾಡಲಾಗುತ್ತಿದ್ದು, ಆನ್‌ಲೈನ್ ಮೂಲಕ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಲು ಸೂಚಿಸಲಾಗಿದೆ.
ಟಿಟಿಡಿ ಅಲರ್ಟ್: ಆಗಸ್ಟ್ ತಿಂಗಳ ಶ್ರೀವಾರಿ ಆರ್ಜಿತ ಸೇವೆ, ದರ್ಶನ ಮತ್ತು ವಸತಿ ಕೋಟಾ ಬಿಡುಗಡೆ ದಿನಾಂಕ ಪ್ರಕಟ
ಶ್ರೀವಾರಿ ಸುಪ್ರಭಾತ, ತೋಮಾಲ, ಅರ್ಚನೆ ಮತ್ತು ಅಷ್ಟದಳ ಪಾದಪದ್ಮಾರಾಧನೆ ಸೇವೆಗಳ ಟಿಕೆಟ್‌ಗಳಿಗಾಗಿ ಮೇ 18ರಂದು ಬೆಳಿಗ್ಗೆ 10 ಗಂಟೆಯಿಂದ ಲಕ್ಕಿ ಡಿಪ್ (ಎಲೆಕ್ಟ್ರಾನಿಕ್ ಡಿಪ್) ನೋಂದಣಿ ಆರಂಭವಾಗಲಿದೆ.
ತಿರುಪತಿ ತಿರುಮಲ ದೇವಸ್ಥಾನಂ 2026ನೇ ಸಾಲಿನ ಆಗಸ್ಟ್ ತಿಂಗಳ ವಿವಿಧ ಆರ್ಜಿತ ಸೇವೆಗಳು, ವಿಶೇಷ ಪ್ರವೇಶ ದರ್ಶನ ಹಾಗೂ ವಸತಿ ಗೃಹಗಳ ಆನ್‌ಲೈನ್ ಕೋಟಾ ಬಿಡುಗಡೆಯ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಭಕ್ತರ ಅನುಕೂಲಕ್ಕಾಗಿ ದಿನಾಂಕವಾರು ಕೋಟಾ ಬಿಡುಗಡೆ ಮಾಡಲಾಗುತ್ತಿದ್ದು, ಆನ್‌ಲೈನ್ ಮೂಲಕ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಲು ಸೂಚಿಸಲಾಗಿದೆ.
ಶ್ರೀವಾರಿ ಸುಪ್ರಭಾತ, ತೋಮಾಲ, ಅರ್ಚನೆ ಮತ್ತು ಅಷ್ಟದಳ ಪಾದಪದ್ಮಾರಾಧನೆ ಸೇವೆಗಳ ಟಿಕೆಟ್‌ಗಳಿಗಾಗಿ ಮೇ 18ರಂದು ಬೆಳಿಗ್ಗೆ 10 ಗಂಟೆಯಿಂದ ಲಕ್ಕಿ ಡಿಪ್ (ಎಲೆಕ್ಟ್ರಾನಿಕ್ ಡಿಪ್) ನೋಂದಣಿ ಆರಂಭವಾಗಲಿದೆ. ಮೇ 20ರ ಬೆಳಿಗ್ಗೆ 10 ಗಂಟೆಯವರೆಗೆ ಭಕ್ತರು ಹೆಸರು ನೋಂದಾಯಿಸಿಕೊಳ್ಳಬಹುದು. ಡಿಪ್‌ನಲ್ಲಿ ಟಿಕೆಟ್ ಲಭಿಸಿದ ಭಕ್ತರು ಮೇ 20ರಿಂದ ಮೇ 22ರ ಮಧ್ಯಾಹ್ನ 12 ಗಂಟೆಯೊಳಗೆ ನಿಗದಿತ ಹಣ ಪಾವತಿಸಿ ಟಿಕೆಟ್ ಖಚಿತಪಡಿಸಿಕೊಳ್ಳಬೇಕು.
ಇತರೆ ಸೇವೆಗಳು ಮತ್ತು ದರ್ಶನ ಟಿಕೆಟ್ ವಿವರ:
* ಮೇ 21 (ಬೆಳಿಗ್ಗೆ 10 ಗಂಟೆಗೆ): ಕಲ್ಯಾಣೋತ್ಸವ, ಊಂಜಲ್ ಸೇವೆ, ಆರ್ಜಿತ ಬ್ರಹ್ಮೋತ್ಸವ ಮತ್ತು ಸಹಸ್ರ ದೀಪಾಲಂಕಾರ ಸೇವಾ ಟಿಕೆಟ್‌ಗಳ ಬಿಡುಗಡೆ. ಇದರ ಜೊತೆಗೆ ಆಗಸ್ಟ್ 23ರಿಂದ 25ರವರೆಗೆ ನಡೆಯಲಿರುವ ವಾರ್ಷಿಕ 'ಪವಿತ್ರೋತ್ಸವ'ದ ಟಿಕೆಟ್‌ಗಳು ಕೂಡ ಬಿಡುಗಡೆಯಾಗಲಿವೆ.
* ಮೇ 21 (ಮಧ್ಯಾಹ್ನ 3 ಗಂಟೆಗೆ): ವರ್ಚುವಲ್ ಸೇವೆಗಳು ಮತ್ತು ಆ ಸೇವೆಗಳಿಗೆ ಸಂಬಂಧಿಸಿದ ದರ್ಶನದ ಸ್ಲಾಟ್‌ಗಳ ಬಿಡುಗಡೆ.
* ಮೇ 23 (ಬೆಳಿಗ್ಗೆ 10 & 11 ಗಂಟೆಗೆ): ಬೆಳಿಗ್ಗೆ 10 ಗಂಟೆಗೆ ಅಂಗಪ್ರದಕ್ಷಿಣೆ ಟೋಕನ್‌ಗಳು ಮತ್ತು 11 ಗಂಟೆಗೆ ಶ್ರೀವಾಣಿ ಟ್ರಸ್ಟ್ ಬ್ರೇಕ್ ದರ್ಶನ ಟಿಕೆಟ್‌ಗಳು ಲಭ್ಯ.
* ಮೇ 23 (ಮಧ್ಯಾಹ್ನ 3 ಗಂಟೆಗೆ): ಹಿರಿಯ ನಾಗರಿಕರು, ವಿಕಲಚೇತನರು ಹಾಗೂ ದೀರ್ಘಕಾಲಿಕ ಕಾಯಿಲೆಗಳಿಂದ ಬಳಲುತ್ತಿರುವವರಿಗಾಗಿ ಉಚಿತ ವಿಶೇಷ ದರ್ಶನದ ಕೋಟಾ ಬಿಡುಗಡೆ.
300 ರೂಪಾಯಿ ವಿಶೇಷ ದರ್ಶನ ಮತ್ತು ವಸತಿ:
ಭಕ್ತರು ಅತಿ ಹೆಚ್ಚು ನಿರೀಕ್ಷಿಸುವ ₹300ರ ವಿಶೇಷ ಪ್ರವೇಶ ದರ್ಶನದ ಟಿಕೆಟ್‌ಗಳ ಕೋಟಾವನ್ನು ಮೇ 24 ಅಥವಾ 25ರಂದು ಬೆಳಿಗ್ಗೆ 10 ಗಂಟೆಗೆ ಬಿಡುಗಡೆ ಮಾಡಲು ಟಿಟಿಡಿ ನಿರ್ಧರಿಸಿದೆ. ಅದೇ ರೀತಿ, ತಿರುಮಲ ಮತ್ತು ತಿರುಪತಿಯಲ್ಲಿ ವಸತಿ ಗೃಹಗಳ ಆನ್‌ಲೈನ್ ಬುಕಿಂಗ್ ಮೇ 25ರ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದೆ.
ಭಕ್ತರು ಟಿಟಿಡಿಯ ಅಧಿಕೃತ ವೆಬ್‌ಸೈಟ್ ಮೂಲಕ ಮಾತ್ರವೇ ಟಿಕೆಟ್‌ಗಳನ್ನು ಬುಕ್ ಮಾಡಿಕೊಳ್ಳುವಂತೆ ಆಡಳಿತ ಮಂಡಳಿ ಮನವಿ ಮಾಡಿದೆ

