
ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ವಿಜಯ್‌ಗೆ ಗವರ್ನರ್ ಗ್ರೀನ್ ಸಿಗ್ನಲ್; ನಾಳೆ ಬೆಳಿಗ್ಗೆ 11ಕ್ಕೆ ಪ್ರಮಾಣವಚನ
ಚುನಾವಣೆಯಲ್ಲಿ ಟಿವಿಕೆ 234ರಲ್ಲಿ 108 ಸ್ಥಾನಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು. ಬಹುಮತಕ್ಕೆ ಅಗತ್ಯ ಸಂಖ್ಯೆಯನ್ನು ತಲುಪಲು ಕಾಂಗ್ರೆಸ್ ಸೇರಿದಂತೆ ಕೆಲವು ಪಕ್ಷಗಳ ಬೆಂಬಲ ವಿಜಯ್ ಅವರಿಗೆ ದೊರೆತಿದೆ ಎಂದು ವರದಿಗಳು ತಿಳಿಸಿವೆ.
ತಮಿಳುನಾಡಿನಲ್ಲಿ ಹೊಸ ಸರ್ಕಾರ ರಚನೆಗೆ ಸಂಬಂಧಿಸಿದ ರಾಜಕೀಯ ಅನಿಶ್ಚಿತತೆಗೆ ಇಂದು ಅಂತ್ಯ ಕಂಡಿದ್ದು, ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್ ಅವರಿಗೆ ಗವರ್ನರ್ ರಾಜೇಂದ್ರ ಅರ್‌ಲೆಕರ್ ಸರ್ಕಾರ ರಚಿಸಲು ಅಧಿಕೃತ ಅನುಮತಿ ನೀಡಿದ್ದಾರೆ. ನಾಳೆ ಬೆಳಿಗ್ಗೆ 11 ಗಂಟೆಗೆ ವಿಜಯ್ ಮುಖ್ಯಮಂತ್ರಿ ಹುದ್ದೆಯ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಸರ್ಕಾರ ರಚನೆ ವಿಚಾರವಾಗಿ ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆ ನಡೆದಿತ್ತು. ವಿಜಯ್ ನೇತೃತ್ವದ ಟಿವಿಕೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಬಹುಮತದ ಪ್ರಶ್ನೆ ಎತ್ತಿ ಗವರ್ನರ್ ಬೆಂಬಲದ ದಾಖಲೆಗಳನ್ನು ಕೇಳಿದ್ದರಿಂದ ಪ್ರಮಾಣವಚನ ಪ್ರಕ್ರಿಯೆ ಮುಂದೂಡಲ್ಪಟ್ಟಿತ್ತು.
ಟಿವಿಕೆ ಮುಖ್ಯಸ್ಥ ವಿಜಯ್‌ಗೆ ರಾಜ್ಯಪಾಲ ರಾಜೇಂದ್ರ ಅರ್‌ಲೆಕರ್ ಸರ್ಕಾರ ರಚಿಸಲು ಅಧಿಕೃತ ಅನುಮತಿ ನೀಡಿದರು.
ಈ ನಡುವೆ, ವಿಧಾನಸಭೆಯಲ್ಲಿ ಫ್ಲೋರ್ ಟೆಸ್ಟ್ ಮೂಲಕವೇ ಬಹುಮತ ಸಾಬೀತಾಗಬೇಕು ಎಂಬ ರಾಜಕೀಯ ಮತ್ತು ಕಾನೂನು ವಲಯದ ಅಭಿಪ್ರಾಯಗಳು ಹೆಚ್ಚಾಗಿ ವ್ಯಕ್ತವಾಗಿದ್ದವು. ಗವರ್ನರ್ ಅವರ ನಿಲುವಿನ ವಿರುದ್ಧ ಹಲವು ನಾಯಕರು ಸಾರ್ವಜನಿಕವಾಗಿ ಅಸಮಾಧಾನವೂ ವ್ಯಕ್ತಪಡಿಸಿದ್ದರು.
ಚುನಾವಣೆಯಲ್ಲಿ ಟಿವಿಕೆ 234ರಲ್ಲಿ 108 ಸ್ಥಾನಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು. ಬಹುಮತಕ್ಕೆ ಅಗತ್ಯ ಸಂಖ್ಯೆಯನ್ನು ತಲುಪಲು ಕಾಂಗ್ರೆಸ್ ಸೇರಿದಂತೆ ಕೆಲವು ಪಕ್ಷಗಳ ಬೆಂಬಲ ವಿಜಯ್ ಅವರಿಗೆ ದೊರೆತಿದೆ ಎಂದು ವರದಿಗಳು ತಿಳಿಸಿವೆ.
ಇಂದಿನ ಬೆಳವಣಿಗೆಯೊಂದಿಗೆ ರಾಜಕೀಯ ಗೊಂದಲಕ್ಕೆ ತೆರೆಬಿದ್ದಿದ್ದು, ನಾಳೆಯ ಪ್ರಮಾಣವಚನ ಸಮಾರಂಭದ ಕಡೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ.

