Actress Trisha in the presence of Thimmappa: Special prayers for Vijays victory on the pretext of his birthday?
x

ನಟಿ ತ್ರಿಶಾ

ತಿರುಪತಿಯಲ್ಲಿ ನಟಿ ತ್ರಿಶಾ: ಹುಟ್ಟುಹಬ್ಬದ ನೆಪದಲ್ಲಿ ವಿಜಯ್ ಗೆಲುವಿಗಾಗಿ ವಿಶೇಷ ಪ್ರಾರ್ಥನೆ?

ನಟ ವಿಜಯ್ ರಾಜಕೀಯ ಯಶಸ್ಸಿಗಾಗಿ ತ್ರಿಶಾ ತಿರುಪತಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ನೆಟ್ಟಿಗರು ಹಲವು ರೀತಿ ವ್ಯಾಖ್ಯಾನಿಸುತ್ತಿದ್ದಾರೆ.


Click the Play button to hear this message in audio format

ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಕೃಷ್ಣನ್ ತಮ್ಮ 43ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವಿಶೇಷ ದಿನದ ಅಂಗವಾಗಿ ಅವರು ಭಾನುವಾರ ರಾತ್ರಿಯೇ ತಿರುಪತಿಗೆ ತೆರಳಿ, ಸೋಮವಾರ ಮುಂಜಾನೆ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ತಮ್ಮ ಆಧ್ಯಾತ್ಮಿಕ ಪಯಣದ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದು, ಹಲವಾರು ಊಹಾಪೋಹಗಳಿಗೂ ಕಾರಣವಾಗಿದೆ.

ತ್ರಿಶಾ ಅವರ ಈ ಭೇಟಿ ಕೇವಲ ಹುಟ್ಟುಹಬ್ಬದ ಆಚರಣೆಯಷ್ಟೇ ಅಲ್ಲ, ತಮಿಳುನಾಡು ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ರಾಜಕೀಯ ಆಯಾಮವನ್ನೂ ಪಡೆದುಕೊಂಡಿದೆ. ಇಂದು ತಮಿಳುನಾಡು ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ತ್ರಿಶಾ ಅವರ ಆಪ್ತ ಗೆಳೆಯ ಹಾಗೂ ಸಹನಟ ದಳಪತಿ ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷದ ಭವಿಷ್ಯ ನಿರ್ಧಾರವಾಗಲಿದೆ.

ತಿರುಪತಿ ದೇವಾಲಯಕ್ಕೆ ಭೇಟಿ ನೀಡಿದ ನಟಿ ತ್ರಿಶಾ

ಸಾಮಾಜಿಕ ಜಾಲತಾಣದಲ್ಲಿ ಚರ್ಚೆ

ನಟ ವಿಜಯ್ ರಾಜಕೀಯ ಯಶಸ್ಸಿಗಾಗಿ ತ್ರಿಶಾ ತಿರುಪತಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ನೆಟ್ಟಿಗರು ಹಲವು ರೀತಿ ವ್ಯಾಖ್ಯಾನಿಸುತ್ತಿದ್ದಾರೆ. ಕಳೆದ ಏ. 23ರಂದು ಮತದಾನ ಮಾಡಿದ ಬಳಿಕ ತ್ರಿಶಾ ಹಂಚಿಕೊಂಡಿದ್ದ ಪೋಸ್ಟ್ ಕೂಡ ವಿಜಯ್ ಅವರಿಗೆ ನೀಡಿದ ಪರೋಕ್ಷ ಬೆಂಬಲ ಎಂದು ಅಭಿಮಾನಿಗಳು ಸಂಭ್ರಮ ಹಂಚಿಕೊಂಡಿದ್ದರು.

ಸ್ನೇಹ, ರಾಜಕೀಯ ಬೆಂಬಲದ ಸಂಕೇತ ?

ರಾಜ್ಯದಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ನಡುವೆ ತೀವ್ರ ಪೈಪೋಟಿ ಇದ್ದರೂ, ಕೆಲವು ಎಕ್ಸಿಟ್ ಪೋಲ್‌ಗಳು ವಿಜಯ್ ಅವರ ಟಿವಿಕೆ ಪಕ್ಷಕ್ಕೆ ಉತ್ತಮ ಆರಂಭ ಸಿಗಲಿದೆ ಎಂದು ಭವಿಷ್ಯ ನುಡಿದಿವೆ. ಈ ನಡುವೆ ತ್ರಿಶಾ ಅವರ ತಿರುಪತಿ ಭೇಟಿಯು, ಅವರ ಮತ್ತು ವಿಜಯ್ ನಡುವಿನ ದೀರ್ಘಕಾಲದ ಸ್ನೇಹ ಹಾಗೂ ರಾಜಕೀಯ ಬೆಂಬಲದ ಸಂಕೇತವಾಗಿ ಕಂಡುಬರುತ್ತಿದೆ ಎಂಬ ಚರ್ಚೆಗಳು ನಡೆಯುತ್ತಿವೆ.

Read More
Next Story