ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್‌- ಮೂರನೇ ಮಗುವಾದ್ರೆ ಒಂದು ವರ್ಷ ಮಾತೃತ್ವ ರಜೆ
x

ತಮಿಳುನಾಡು ಸರ್ಕಾರವು ಮಹಿಳಾ ಸರ್ಕಾರಿ ನೌಕರರಿಗೆ ಮಹತ್ವದ ಘೋಷಣೆ ಮಾಡಿದ್ದು, ಮೂರನೇ ಮಗುವಿನ ಜನನಕ್ಕೂ 365 ದಿನಗಳ ಮಾತೃತ್ವ ರಜೆ ನೀಡಲು ನಿರ್ಧರಿಸಿದೆ.

ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್‌- ಮೂರನೇ ಮಗುವಾದ್ರೆ ಒಂದು ವರ್ಷ ಮಾತೃತ್ವ ರಜೆ

ತಮಿಳುನಾಡು ಸರ್ಕಾರವು ಮಹಿಳಾ ಸರ್ಕಾರಿ ನೌಕರರಿಗೆ ಮೂರನೇ ಮಗುವಿನ ಹೆರಿಗೆಗೂ ಮಾತೃತ್ವ ರಜೆಯನ್ನು 12 ವಾರಗಳಿಂದ 365 ದಿನಗಳಿಗೆ ವಿಸ್ತರಿಸುವುದಾಗಿ ಘೋಷಿಸಿದೆ.


Click the Play button to hear this message in audio format

ತಮಿಳುನಾಡು ಸರ್ಕಾರವು ಮಹಿಳಾ ಸರ್ಕಾರಿ ನೌಕರರಿಗೆ ಮಹತ್ವದ ಘೋಷಣೆ ಮಾಡಿದ್ದು, ಮೂರನೇ ಮಗುವಿನ ಜನನಕ್ಕೂ 365 ದಿನಗಳ ಮಾತೃತ್ವ ರಜೆ ನೀಡಲು ನಿರ್ಧರಿಸಿದೆ. ಈ ಹಿಂದೆ ಮೂರನೇ ಮಗುವಿಗೆ 12 ವಾರಗಳ ರಜೆ ಮಾತ್ರ ಲಭ್ಯವಿತ್ತು. ಪ್ರಸ್ತುತ, ಒಂದರಿಂದ ಎರಡು ಮಕ್ಕಳನ್ನು ಹೊಂದಿರುವ ವಿವಾಹಿತ ಮಹಿಳಾ ಸರ್ಕಾರಿ ನೌಕರರಿಗೆ 365 ದಿನಗಳ ಮಾತೃತ್ವ ರಜೆ ನೀಡಲಾಗುತ್ತಿದೆ. ಆದರೆ ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಮಹಿಳಾ ನೌಕರರಿಗೆ ಗರಿಷ್ಠ 12 ವಾರಗಳ ಮಾತೃತ್ವ ರಜೆ ಮಾತ್ರ ಸಿಗುತ್ತಿತ್ತು.

ಮಂಗಳವಾರ ವಿಧಾನಸಭೆಯಲ್ಲಿ ತನ್ನ ಇಲಾಖೆಯ ಬೇಡಿಕೆಗಳ ಮೇಲಿನ ಚರ್ಚೆ ವೇಳೆ ಮಾನವ ಸಂಪನ್ಮೂಲ ನಿರ್ವಹಣಾ ಸಚಿವ ಡಿ. ಶರತ್‌ಕುಮಾರ್ ಈ ಘೋಷಣೆ ಮಾಡಿದರು. ಮಹಿಳಾ ಸಬಲೀಕರಣ ಮತ್ತು ಸಾಮಾಜಿಕ ಕಲ್ಯಾಣಕ್ಕೆ ಆದ್ಯತೆ ನೀಡುತ್ತಿರುವ ಸರ್ಕಾರವು ಮೂರನೇ ಮಗುವಿಗೆ ನೀಡಲಾಗುತ್ತಿರುವ 12 ವಾರಗಳ ಮಾತೃತ್ವ ರಜೆಯನ್ನು 365 ದಿನಗಳಿಗೆ ವಿಸ್ತರಿಸಲಿದೆ ಎಂದು ಅವರು ತಿಳಿಸಿದರು.

ಹಂತ ಹಂತವಾಗಿ ಹೆಚ್ಚಿಸಿದ ಮಾತೃತ್ವ ರಜೆ ಅವಧಿ

ತಮಿಳುನಾಡಿನಲ್ಲಿ ಮಾತೃತ್ವ ರಜೆಯ ಅವಧಿಯನ್ನು ಹಂತ ಹಂತವಾಗಿ ಹೆಚ್ಚಿಸಲಾಗಿದೆ. 2011ರಲ್ಲಿ 90 ದಿನಗಳಿಂದ ಆರು ತಿಂಗಳಿಗೆ, 2016ರಲ್ಲಿ ಒಂಬತ್ತು ತಿಂಗಳಿಗೆ ಮತ್ತು 2021ರ ಜುಲೈನಲ್ಲಿ ಒಂದು ವರ್ಷ ಅಥವಾ 365 ದಿನಗಳಿಗೆ ವಿಸ್ತರಿಸಲಾಗಿತ್ತು. ವಿಧಾನಸಭೆಯಲ್ಲಿ ಘೋಷಿಸಿರುವ ಹೊಸ ನಿರ್ಧಾರವನ್ನು ಜಾರಿಗೆ ತರಲು ಶೀಘ್ರದಲ್ಲೇ ವಿವರವಾದ ಸರ್ಕಾರಿ ಆದೇಶ ಹೊರಡಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Read More
Next Story