ಸರ್ಕಾರಿ ಆಸ್ಪತ್ರೆಯಲ್ಲಿ ಹುಟ್ಟಿದ ಮಗುವಿಗೆ 1 ಗ್ರಾಂ ಚಿನ್ನದ ಉಂಗುರ; ತಾಯ್ ಮಾಮನ್ ಯೋಜನೆಗೆ ತಮಿಳುನಾಡು ಸಿಎಂ ವಿಜಯ್ ಚಾಲನೆ
x

ಸರ್ಕಾರಿ ಆಸ್ಪತ್ರೆಯಲ್ಲಿ ಹುಟ್ಟಿದ ಮಗುವಿಗೆ 1 ಗ್ರಾಂ ಚಿನ್ನದ ಉಂಗುರ; ತಾಯ್ ಮಾಮನ್ ಯೋಜನೆಗೆ ತಮಿಳುನಾಡು ಸಿಎಂ ವಿಜಯ್ ಚಾಲನೆ

ಮೊದಲ ಹಂತದಲ್ಲಿ 1.28 ಲಕ್ಷ ಚಿನ್ನದ ಉಂಗುರಗಳನ್ನು ಸಿದ್ಧಪಡಿಸಲಾಗಿದೆ. ಪ್ರತಿಯೊಂದು ಉಂಗುರಕ್ಕೂ ವಿಶಿಷ್ಟ ಸರಣಿ ಸಂಖ್ಯೆ ಇರಲಿದ್ದು, ಪಾರದರ್ಶಕತೆ ಕಾಪಾಡಲು ಉಂಗುರಗಳನ್ನು ಭದ್ರ ಪ್ಯಾಕೇಜಿಂಗ್‌ನಲ್ಲಿ ವಿತರಿಸಲಾಗುತ್ತದೆ. ಯೋಜನೆಗಾಗಿ ರಾಜ್ಯ ಸರ್ಕಾರ ವಾರ್ಷಿಕ 755.83 ಕೋಟಿ ರೂಪಾಯಿ ಮೀಸಲಿಟ್ಟಿದೆ.

Click the Play button to hear this message in audio format

ತಮಿಳುನಾಡಿನಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ನವಜಾತ ಶಿಶುಗಳಿಗೆ ಒಂದು ಗ್ರಾಂ ಚಿನ್ನದ ಉಂಗುರ ನೀಡುವ ‘ತಾಯ್ ಮಾಮನ್ ತಂಗ ಮೋದಿರಂ’ ಯೋಜನೆಗೆ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಚಾಲನೆ ನೀಡಿದ್ದಾರೆ. ಮಧುರೈನ ರಾಜಾಜಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ವಿಜಯ್ ನವಜಾತ ಶಿಶುಗಳಿಗೆ ಉಂಗುರ ತೊಡಿಸಿ, ಪೋಷಕರಿಗೆ ಉಂಗುರಗಳನ್ನು ವಿತರಿಸಿದರು.

ತಮಿಳುನಾಡು ಸರ್ಕಾರದ ಈ ಯೋಜನೆಯಡಿ ಅರ್ಹ ಶಿಶುಗಳಿಗೆ 22 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಉಂಗುರ ನೀಡಲಾಗುತ್ತದೆ. ಸರ್ಕಾರಿ ಆಸ್ಪತ್ರೆ ಹಾಗೂ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜನಿಸಿದ ಶಿಶುಗಳು ಯೋಜನೆಯ ವ್ಯಾಪ್ತಿಗೆ ಬರುತ್ತಾರೆ. ಜೂನ್ 22, 2026ರ ಮಧ್ಯಾಹ್ನದಿಂದ ಜನಿಸಿದ ಅರ್ಹ ಶಿಶುಗಳಿಗೂ ಯೋಜನೆಯ ಲಾಭ ಅನ್ವಯವಾಗಲಿದೆ.

ಯೋಜನೆಯ ಲಾಭ ಪಡೆಯಲು ನವಜಾತ ಶಿಶುವಿನ ತಾಯಿ ತಮಿಳುನಾಡಿನ ಖಾಯಂ ನಿವಾಸಿಯಾಗಿರಬೇಕು. ಫಲಾನುಭವಿಗಳು ನೋಂದಣಿ ಮಾಡಿಕೊಂಡಿರಬೇಕು ಹಾಗೂ ಮಕ್ಕಳ ಆರೋಗ್ಯ ಕಾರ್ಡ್‌ನ ಗುರುತಿನ ಸಂಖ್ಯೆ ಹೊಂದಿರಬೇಕು. ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಂದರ್ಭದಲ್ಲಿ ಅರ್ಹ ಫಲಾನುಭವಿಗಳಿಗೆ ಉಂಗುರ ವಿತರಿಸಲಾಗುತ್ತದೆ.

ಮೊದಲ ಹಂತದಲ್ಲಿ 1.28 ಲಕ್ಷ ಚಿನ್ನದ ಉಂಗುರಗಳನ್ನು ಸಿದ್ಧಪಡಿಸಲಾಗಿದೆ. ಪ್ರತಿಯೊಂದು ಉಂಗುರಕ್ಕೂ ವಿಶಿಷ್ಟ ಸರಣಿ ಸಂಖ್ಯೆ ಇರಲಿದ್ದು, ಪಾರದರ್ಶಕತೆ ಕಾಪಾಡಲು ಉಂಗುರಗಳನ್ನು ಭದ್ರ ಪ್ಯಾಕೇಜಿಂಗ್‌ನಲ್ಲಿ ವಿತರಿಸಲಾಗುತ್ತದೆ. ಯೋಜನೆಗಾಗಿ ರಾಜ್ಯ ಸರ್ಕಾರ ವಾರ್ಷಿಕ 755.83 ಕೋಟಿ ರೂಪಾಯಿ ಮೀಸಲಿಟ್ಟಿದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆಗಳನ್ನು ಉತ್ತೇಜಿಸುವುದು ಹಾಗೂ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೇಲಿನ ವಿಶ್ವಾಸ ಹೆಚ್ಚಿಸುವುದು ಯೋಜನೆಯ ಪ್ರಮುಖ ಉದ್ದೇಶಗಳಾಗಿವೆ. ಈ ಯೋಜನೆಯನ್ನು ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಚುನಾವಣಾ ಭರವಸೆಗಳಲ್ಲಿ ಘೋಷಿಸಿತ್ತು.

Read More
Next Story