Lottery King Martins Family Creates History: Three Members Win from Three Different Parties
x

ಸ್ಯಾಂಟಿಯಾಗೊ ಮಾರ್ಟಿನ್ ಅವರ ಪತ್ನಿ ಲೀಮಾ ರೋಸ್, ಪುತ್ರ ಜೋಸ್ ಚಾರ್ಲ್ಸ್ ಮಾರ್ಟಿನ್ ಹಾಗೂ ಅಳಿಯ ಆದವ್ ಅರ್ಜುನ

ಒಂದೇ ಕುಟುಂಬ, ಮೂರು ಪಕ್ಷ, ಮೂವರು ಶಾಸಕರು! ತಮಿಳುನಾಡು ಚುನಾವಣೆಯಲ್ಲಿ 'ಲಾಟರಿ ಕಿಂಗ್' ಮಾರ್ಟಿನ್ ಕುಟುಂಬದ ದಾಖಲೆ

ಮಾ ರೋಸ್ ಮಾರ್ಟಿನ್ (ಪತ್ನಿ) ಸ್ಯಾಂಟಿಯಾಗೊ ಮಾರ್ಟಿನ್ ಅವರ ಪತ್ನಿ ಲೀಮಾ ರೋಸ್ ಅವರು ತಮಿಳುನಾಡಿನ ಲಾಲ್ಗುಡಿ ಕ್ಷೇತ್ರದಿಂದ ಎಐಎಡಿಎಂಕೆ (AIADMK) ಅಭ್ಯರ್ಥಿಯಾಗಿ ಸ್ಪರ್ಧಿಸಿ ಸುಮಾರು 2,739 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.


Click the Play button to hear this message in audio format

ತಮಿಳುನಾಡು ಮತ್ತು ಪುದುಚೇರಿಯ ಚುನಾವಣಾ ಕಣದಲ್ಲಿ ಈ ಬಾರಿ ಮಾರ್ಟಿನ್ ಕುಟುಂಬದ ಸದಸ್ಯರು ವಿವಿಧ ಸಿದ್ಧಾಂತಗಳ ಪಕ್ಷಗಳನ್ನು ಪ್ರತಿನಿಧಿಸಿದ್ದರು. ಆಶ್ಚರ್ಯವೆಂದರೆ, ಇವರೆಲ್ಲರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಭರ್ಜರಿ ಜಯ ದಾಖಲಿಸಿದ್ದಾರೆ. ಈ ಮೂಲಕ ಒಂದೇ ಕುಟುಂಬದ ಸದಸ್ಯರು ಏಕಕಾಲದಲ್ಲಿ ಎರಡು ರಾಜ್ಯಗಳ ವಿಧಾನಸಭೆಗಳನ್ನು ಪ್ರವೇಶಿಸುತ್ತಿರುವುದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಮಾ ರೋಸ್ ಮಾರ್ಟಿನ್ (ಪತ್ನಿ) ಸ್ಯಾಂಟಿಯಾಗೊ ಮಾರ್ಟಿನ್ ಅವರ ಪತ್ನಿ ಲೀಮಾ ರೋಸ್ ಅವರು ತಮಿಳುನಾಡಿನ ಲಾಲ್ಗುಡಿ ಕ್ಷೇತ್ರದಿಂದ ಎಐಎಡಿಎಂಕೆ (AIADMK) ಅಭ್ಯರ್ಥಿಯಾಗಿ ಸ್ಪರ್ಧಿಸಿ ಸುಮಾರು 2,739 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಇವರು ಈ ಬಾರಿಯ ಚುನಾವಣೆಯ ಅತ್ಯಂತ ಶ್ರೀಮಂತ ಅಭ್ಯರ್ಥಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.

ಆದವ್ ಅರ್ಜುನ (ಅಳಿಯ) ಮಾರ್ಟಿನ್ ಅವರ ಅಳಿಯ ಆದವ್ ಅರ್ಜುನ ಅವರು ನಟ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದು, ಚೆನ್ನೈನ ವಿಲ್ಲಿವಾಕ್ಕಂ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಅವರು 17,302 ಮತಗಳ ಬೃಹತ್ ಅಂತರದಿಂದ ಡಿಎಂಕೆ ಅಭ್ಯರ್ಥಿಯನ್ನು ಸೋಲಿಸಿ ವಿಧಾನಸಭೆ ಪ್ರವೇಶಿಸಿದ್ದಾರೆ.

ಜೋಸ್ ಚಾರ್ಲ್ಸ್ ಮಾರ್ಟಿನ್ (ಮಗ) ಸ್ಯಾಂಟಿಯಾಗೊ ಅವರ ಪುತ್ರ ಜೋಸ್ ಚಾರ್ಲ್ಸ್ ಮಾರ್ಟಿನ್ ಅವರು ಪುದುಚೇರಿಯ ಕಾಮರಾಜ್ ನಗರ ಕ್ಷೇತ್ರದಿಂದ ತಮ್ಮದೇ ಆದ 'ಲಕ್ಷ್ಯ ಜನನಾಯಕ ಕಕ್ಷಿ' ಪಕ್ಷದಿಂದ ಸ್ಪರ್ಧಿಸಿ 10,205 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇವರು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಬೆಂಬಲದೊಂದಿಗೆ ಕಣಕ್ಕಿಳಿದಿದ್ದರು.

ರಾಜಕೀಯ ಬೆಂಬಲ

ಒಂದೆಡೆ ಇಡಿ (ED) ತನಿಖೆ ಮತ್ತು ಚುನಾವಣಾ ಬಾಂಡ್ ವಿವಾದಗಳ ನಡುವೆಯೂ ಮಾರ್ಟಿನ್ ಕುಟುಂಬವು ರಾಜಕೀಯವಾಗಿ ಇಷ್ಟು ದೊಡ್ಡ ಯಶಸ್ಸು ಕಂಡಿರುವುದು ವಿಶ್ಲೇಷಕರ ಗಮನ ಸೆಳೆದಿದೆ. ವಿವಿಧ ಪಕ್ಷಗಳ ಮೂಲಕ ರಾಜಕೀಯ ಪ್ರಭಾವವನ್ನು ಹರಡಿರುವ ಈ ತಂತ್ರವು ಮಾರ್ಟಿನ್ ಕುಟುಂಬಕ್ಕೆ ದೊಡ್ಡ ಮಟ್ಟದ ರಕ್ಷಣೆ ಮತ್ತು ಅಧಿಕಾರವನ್ನು ತಂದುಕೊಟ್ಟಿದೆ.

Read More
Next Story