ರಕ್ಷಣಾ ಪಡೆಗಳಿಗೆ ಬಲ: 1.10 ಲಕ್ಷ ಕೋಟಿ ರೂ. ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ಅಸ್ತು
x

ರಕ್ಷಣಾ ಪಡೆಗಳಿಗೆ ಬಲ: 1.10 ಲಕ್ಷ ಕೋಟಿ ರೂ. ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ಅಸ್ತು

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಕ್ಷಣಾ ಖರೀದಿ ಮಂಡಳಿ ಸಭೆಯು ಸುಮಾರು 1.10 ಲಕ್ಷ ಕೋಟಿ ರೂಪಾಯಿ ಮೌಲ್ಯದ ರಕ್ಷಣಾ ಉಪಕರಣಗಳ ಖರೀದಿಗೆ ಅಗತ್ಯತೆಯ ಅನುಮೋದನೆ ನೀಡಿದೆ.


Click the Play button to hear this message in audio format

ಭಾರತೀಯ ರಕ್ಷಣಾ ಪಡೆಗಳ ಸಾಮರ್ಥ್ಯವನ್ನು ಜಾಗತಿಕ ಮಟ್ಟಕ್ಕೆ ಏರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಕ್ಷಣಾ ಖರೀದಿ ಮಂಡಳಿ ಸಭೆಯು ಸುಮಾರು 1.10 ಲಕ್ಷ ಕೋಟಿ ರೂಪಾಯಿ ಮೌಲ್ಯದ ರಕ್ಷಣಾ ಉಪಕರಣಗಳ ಖರೀದಿಗೆ ಅಗತ್ಯತೆಯ ಅನುಮೋದನೆ ನೀಡಿದೆ. ಈ ನಿರ್ಧಾರವು ಆತ್ಮನಿರ್ಭರ ಭಾರತದತ್ತ ಭಾರತೀಯ ರಕ್ಷಣಾ ವಲಯದ ಬದ್ಧತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಈ ಬೃಹತ್ ಖರೀದಿ ಪ್ರಕ್ರಿಯೆಯ ವಿಶೇಷತೆಯೆಂದರೆ, ಮಂಜೂರಾದ ಒಟ್ಟು ಮೊತ್ತದ ಶೇ. 98ರಷ್ಟು ಉಪಕರಣಗಳು ಭಾರತೀಯ ಕೈಗಾರಿಕೆಗಳಿಂದಲೇ ಖರೀದಿಯಾಗಲಿವೆ. ಇದು ವಿದೇಶಿ ಅವಲಂಬನೆಯನ್ನು ತಗ್ಗಿಸಿ, ದೇಶೀಯ ಉತ್ಪಾದನೆಗೆ ಭಾರಿ ಉತ್ತೇಜನ ನೀಡಲಿದೆ.

ಸೇನೆಯ ಕಾರ್ಯಾಚರಣೆಯ ಸಾಮರ್ಥ್ಯವನ್ನು ಹೆಚ್ಚಿಸಲು ವಿವಿಧ ಅತ್ಯಾಧುನಿಕ ತಂತ್ರಜ್ಞಾನಗಳಿಗೆ ಒಪ್ಪಿಗೆ ನೀಡಲಾಗಿದೆ. ರಾಸಾಯನಿಕ, ಜೈವಿಕ, ವಿಕಿರಣ ಮತ್ತು ಪರಮಾಣು (ಸಿಬಿಆರ್‌ಎನ್‌) ದಾಳಿಗಳಾದಾಗ ಆ ಪ್ರದೇಶಗಳನ್ನು ಪತ್ತೆ ಹಚ್ಚಿ, ಗುರುತಿಸಿ, ಮೇಲ್ವಿಚಾರಣೆ ನಡೆಸಲು ಸಮರ್ಥವಾಗಿವೆ. ದುರ್ಗಮ ಪ್ರದೇಶಗಳಲ್ಲಿ ಸೇನೆಯ ಲಾಗಿಸ್ಟಿಕ್ ಬೆಂಬಲ ಮತ್ತು ಚಲನಶೀಲತೆಯನ್ನು ಹೈ ಮೊಬಿಲಿಟಿ ವಾಹನಗಳು ವಾಹನಗಳು ಹೆಚ್ಚಿಸುತ್ತವೆ. ಮೆಕ್ಯಾನಿಕಲ್ ಮೈನ್ ಲೇಯರ್ಸ್ ಯುದ್ಧಭೂಮಿಯಲ್ಲಿ ಅತ್ಯಂತ ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಬಲೆಗಳನ್ನು ಹಾಕಲು ಇದು ಸೇನೆಗೆ ನೆರವಾಗುತ್ತದೆ. ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ ಸೇನೆ ಮತ್ತು ವಾಯುಪಡೆಯ ವಿವಿಧ ಕಾರ್ಯಾಚರಣೆಗಳಿಗಾಗಿ ಈ ಹೆಲಿಕಾಪ್ಟರ್‌ಗಳನ್ನು ಬಳಸಲಾಗುತ್ತದೆ. ಟ್ರಾವ್ಲ್ ಟ್ಯಾಂಕ್‌ಗಳು ಮತ್ತು ಸರ್ವತ್ರ ಬ್ರಿಡ್ಜ್ ಸಿಸ್ಟಮ್ ಯುದ್ಧದ ಸಂದರ್ಭದಲ್ಲಿ ನದಿ ಅಥವಾ ಕಂದಕಗಳಂತಹ ಅಡೆತಡೆಗಳನ್ನು ದಾಟಲು ಈ ಸೇತುವೆಗಳು ಮತ್ತು ಟ್ರಾವ್ಲ್ ಟ್ಯಾಂಕ್‌ಗಳು ಸಹಕಾರಿಯಾಗಲಿವೆ.

ಭಾರತೀಯ ನೌಕಾಪಡೆಗೆ ನೌಕಾಯಾನ ಬಲ

ನೌಕಾಪಡೆಯ ಆಧುನೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಅರುಧ್ರ ರಾಡಾರ್‌ಗಳು ನೌಕಾಪಡೆಯ ವಿವಿಧ ವೈಮಾನಿಕ ನೆಲೆಗಳಲ್ಲಿನ ಹಳೆಯ ಏರ್ ರೂಟ್ ಸರ್ವೈಲೆನ್ಸ್ ರಾಡಾರ್‌ಗಳನ್ನು ಬದಲಿಸಿ, ಇವುಗಳನ್ನು ಅಳವಡಿಸಲಾಗುತ್ತದೆ. ಮರೈನ್ ಗ್ಯಾಸ್ ಟರ್ಬೈನ್‌ಗಳು ಯುದ್ಧನೌಕೆಗಳ ಚಾಲನಾ ಶಕ್ತಿಯಾದ ಈ ಟರ್ಬೈನ್‌ಗಳನ್ನು ಭಾರತದಲ್ಲೇ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಾಗುವುದು. ಇದು ವಿದೇಶಿ ಪೂರೈಕೆದಾರರ ಮೇಲಿನ ಅವಲಂಬನೆಯನ್ನು ಸಂಪೂರ್ಣವಾಗಿ ತೊಡೆದುಹಾಕಲಿದೆ. ವಾಯುಪಡೆಯ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸಲು ತಾಂತ್ರಿಕ ಉನ್ನತೀಕರಣಕ್ಕೆ ಒಪ್ಪಿಗೆ ಸಿಕ್ಕಿದೆ. ಗ್ರಾಂಡ್-ಬೇಸ್ಡ್ ಮಲ್ಟಿ-ಪರ್ಪಸ್ ಜಾಮರ್ ಶತ್ರು ದೇಶಗಳ ರಾಡಾರ್‌ಗಳನ್ನು ಸಮರ್ಥವಾಗಿ ಜಾಮ್ ಮಾಡಿ, ವೈಮಾನಿಕ ದಾಳಿಯನ್ನು ತಡೆಯಲು ಸಹಾಯ ಮಾಡುತ್ತದೆ. ರಕ್ಷಣಾ ಪಡೆಗಳ ಭದ್ರತೆಯನ್ನು ಹೆಚ್ಚಿಸಲು ಕಾಗದದ ಗುರುತಿನ ಚೀಟಿಗಳ ಬದಲಾಗಿ, ಸ್ಮಾರ್ಟ್ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ ಆಧಾರಿತ ಸ್ಮಾರ್ಟ್ ಕಾರ್ಡ್‌ಗಳನ್ನು ಪರಿಚಯಿಸಲಾಗುತ್ತಿದೆ.

ರಕ್ಷಣಾ ಉದ್ಯಮಕ್ಕೆ ಹೂಡಿಕೆ

ಈ ಖರೀದಿ ಪ್ರಸ್ತಾವನೆಗಳು ಕೇವಲ ಶಸ್ತ್ರಾಸ್ತ್ರಗಳ ಬಲವರ್ಧನೆಯಲ್ಲ, ಬದಲಾಗಿ ಭಾರತೀಯ ರಕ್ಷಣಾ ಉದ್ಯಮಕ್ಕೆ ಒಂದು ದೊಡ್ಡ ಹೂಡಿಕೆಯಾಗಿದೆ. ಈ ಮೂಲಕ ಉದ್ಯೋಗ ಸೃಷ್ಟಿ ಮತ್ತು ತಂತ್ರಜ್ಞಾನ ವರ್ಗಾವಣೆಯು ದೇಶದಾದ್ಯಂತ ನಡೆಯಲಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನೇತೃತ್ವದಲ್ಲಿ ನಡೆದ ಈ ಸಭೆಯು, ಭವಿಷ್ಯದ ಯುದ್ಧ ತಂತ್ರಗಳಿಗೆ ಭಾರತವು ಈಗಿನಿಂದಲೇ ಸಜ್ಜಾಗುತ್ತಿದೆ ಎಂಬ ಸ್ಪಷ್ಟ ಸಂದೇಶವನ್ನು ನೀಡಿದೆ. ವಿಶೇಷವಾಗಿ ಗಡಿ ಭಾಗಗಳಲ್ಲಿನ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು, ಅತ್ಯಾಧುನಿಕ ತಂತ್ರಜ್ಞಾನಗಳಿಗೆ ಮಣೆ ಹಾಕಲಾಗಿದೆ.

ಒಟ್ಟಾರೆ, 1.10 ಲಕ್ಷ ಕೋಟಿ ರೂ.ಗಳ ಈ ಬೃಹತ್ ಖರೀದಿ ಯೋಜನೆಗಳು ಭಾರತದ ರಕ್ಷಣಾ ವಲಯದಲ್ಲಿ ಹೊಸ ಮೈಲಿಗಲ್ಲಾಗಿದೆ. ದೇಶೀಯ ಕೈಗಾರಿಕೆಗಳಿಗೆ ಆದ್ಯತೆ ನೀಡಿರುವುದು, ವಿದೇಶಿ ಹೂಡಿಕೆದಾರರ ಬದಲು ಭಾರತೀಯ ಪ್ರತಿಭೆಗಳನ್ನು ನಂಬಿರುವ ಸರ್ಕಾರದ ದೂರದೃಷ್ಟಿಯನ್ನು ಎತ್ತಿ ತೋರಿಸುತ್ತದೆ. ಭಾರತದ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳು ಇನ್ನು ಮುಂದೆ ಹೆಚ್ಚು ತಾಂತ್ರಿಕವಾಗಿ ಸಮರ್ಥವಾಗಿ ಶತ್ರುಗಳನ್ನು ಎದುರಿಸಲು ಸಜ್ಜಾಗಲಿವೆ.

Read More
Next Story