ಒಡಿಶಾದಲ್ಲಿ ಭೀಕರ ಮಳೆ- ಪುರಿಯಲ್ಲಿ ಸಮುದ್ರ ಸ್ನಾನಕ್ಕೆ ನಿರ್ಬಂಧ
x

ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಪುರಿಯನ್ನು ಎರಡು ದಿನ ರೆಡ್‌ ಝೋನ್‌ ಎಂದು ಘೋಷಿಸಲಾಗಿದೆ. ಸ

ಒಡಿಶಾದಲ್ಲಿ ಭೀಕರ ಮಳೆ- ಪುರಿಯಲ್ಲಿ ಸಮುದ್ರ ಸ್ನಾನಕ್ಕೆ ನಿರ್ಬಂಧ

ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಪುರಿಯನ್ನು ಎರಡು ದಿನ ರೆಡ್‌ ಝೋನ್‌ ಎಂದು ಘೋಷಿಸಲಾಗಿದೆ. ಸಮುದ್ರ ಸ್ನಾನ ನಿಷೇಧಿಸಿ 98 ಲೈಫ್‌ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ.


Click the Play button to hear this message in audio format

ಒಡಿಶಾದ ಪುರಿಯಲ್ಲಿ ಭಾರೀ ಮಳೆಯ ಮುನ್ಸೂಚನೆ ಹಾಗೂ ಸಮುದ್ರದ ಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಮುಂದಿನ ಎರಡು ದಿನಗಳ ಕಾಲ ಪುರಿಯನ್ನು ‘ರೆಡ್‌ ಝೋನ್‌’ ಎಂದು ಘೋಷಿಸಲಾಗಿದ್ದು, ಪ್ರವಾಸಿಗರು ಸಮುದ್ರಕ್ಕೆ ಇಳಿಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಪುರಿ ಕರಾವಳಿಯಲ್ಲಿ ಸಮುದ್ರ ಪ್ರಕ್ಷುಬ್ಧಗೊಂಡಿದೆ. ಮುಂದಿನ ದಿನ ಪರಿಸ್ಥಿತಿ ಮತ್ತಷ್ಟು ಹದಗೆಡಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಕಡಲತೀರದಲ್ಲಿ ಕೆಂಪು ಧ್ವಜಗಳನ್ನು ಹಾರಿಸಲಾಗಿದ್ದು, ಪ್ರವಾಸಿಗರಿಗೆ ಧ್ವನಿವರ್ಧಕಗಳ ಮೂಲಕ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗುತ್ತಿದೆ.

98 ಲೈಫ್‌ಗಾರ್ಡ್‌ಗಳ ನಿಯೋಜನೆ

ಪ್ರವಾಸಿಗರ ಸುರಕ್ಷತೆಗಾಗಿ ಒಡಿಶಾ ಅಗ್ನಿಶಾಮಕ ಸೇವೆಯ 98 ಲೈಫ್‌ಗಾರ್ಡ್‌ಗಳನ್ನು ವಿವಿಧ ಕಡಲತೀರ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ. ಎಟಿವಿ ವಾಹನಗಳು ಮತ್ತು ಮೆಗಾಫೋನ್‌ಗಳ ಮೂಲಕವೂ ಎಚ್ಚರಿಕೆ ನೀಡಲಾಗುತ್ತಿದೆ. ಯಾವುದೇ ರೀತಿಯ ಮುಳುಗುವಿಕೆ ಸಂಭವಿಸದಂತೆ ಆಡಳಿತ ವಿಶೇಷ ಗಮನ ಹರಿಸಿದೆ.

ಮೀನುಗಾರರಿಗೆ ಸಮುದ್ರಕ್ಕೆ ತೆರಳದಂತೆ ಸೂಚನೆ

ಸಮುದ್ರಕ್ಕೆ ತೆರಳಿದ್ದ ಮೀನುಗಾರರು ಈಗಾಗಲೇ ದಡಕ್ಕೆ ಮರಳಿದ್ದಾರೆ. ಮೀನುಗಾರಿಕಾ ಇಲಾಖೆ ದೋಣಿಗಳು, ಬಲೆಗಳು ಮತ್ತು ಇತರ ಯಂತ್ರೋಪಕರಣಗಳನ್ನು ಸುರಕ್ಷಿತ ಸ್ಥಳದಲ್ಲಿ ಇರಿಸುವಂತೆ ಸೂಚಿಸಿದೆ. ಒಡಿಶಾ ಕರಾವಳಿಯಲ್ಲಿ ಸಮುದ್ರದ ಪರಿಸ್ಥಿತಿ ರಫ್‌ನಿಂದ ವೆರಿ ರಫ್‌ ಆಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

Read More
Next Story