
ಇಲಾನ್ ಮಸ್ಕ್ ಅವರ 'ನ್ಯೂರೋಲಿಂಕ್' (Neuralink) ಬ್ರೈನ್ ಚಿಪ್‌ಗಳಲ್ಲಿ ಬಳಸಲಾಗುವ ಅತ್ಯಾಧುನಿಕ ಇಇಜಿ ಸೆನ್ಸರ್‌ಗಳನ್ನು ಇದರಲ್ಲಿ ಅಳವಡಿಸಲಾಗಿದೆ.
ನಮ್ಮ ಕನಸುಗಳನ್ನು ನಾವೇ ನಿಯಂತ್ರಿಸಬಹುದು: 'ಪ್ರೊಫೆಟಿಕ್ ಎಐ'ನಿಂದ ಕ್ರಾಂತಿಕಾರಿ ಸಾಧನಗಳ ಬಿಡುಗಡೆ
ಕಂಪನಿಯ ವೆಬ್‌ಸೈಟ್‌ನಲ್ಲಿರುವ ಮಾಹಿತಿಯಂತೆ, ಈ ಎರಡೂ ಸಾಧನಗಳು ವಿನ್ಯಾಸದಲ್ಲಿ ಒಂದೇ ರೀತಿ ಇವೆ. ಇವುಗಳನ್ನು ತಲೆಯ ಸುತ್ತಲೂ ಬ್ಯಾಂಡ್‌ನಂತೆ ಧರಿಸಬಹುದು ಮತ್ತು ಇದಕ್ಕೆ ಒಂದು ವೈರ್ ಅನ್ನು ಅಳವಡಿಸಲಾಗಿದೆ.
ನಾವು ಕಾಣುವ ಕನಸುಗಳನ್ನು ನಾವೇ ನಿಯಂತ್ರಿಸುವ ಅಥವಾ ನಮ್ಮ ಇಚ್ಛೆಯಂತೆ ಬದಲಾಯಿಸುವ ಅವಕಾಶವಿದ್ದರೆ ಹೇಗಿರುತ್ತದೆ? ಇಂತಹದೊಂದು ವೈಜ್ಞಾನಿಕ ಕಲ್ಪನೆಯನ್ನು ನನಸಾಗಿಸಲು ಅಮೆರಿಕ ಮೂಲದ ಎಐ (AI) ಸ್ಟಾರ್ಟ್‌ಅಪ್ ಕಂಪನಿ 'ಪ್ರೊಫೆಟಿಕ್' ಮುಂದಾಗಿದೆ. ಜನರಿಗೆ ತಮ್ಮ ಕನಸುಗಳನ್ನು ನಿಯಂತ್ರಿಸಲು ಸಹಾಯ ಮಾಡುವ 'ಡ್ಯುಯಲ್' ಮತ್ತು 'ಫೇಸ್' ಎಂಬ ಎರಡು ಹೊಸ ವಿಯರಬಲ್ (ಧರಿಸಬಹುದಾದ) ಸಾಧನಗಳನ್ನು ಕಂಪನಿ ಪರಿಚಯಿಸಿದೆ.
ಕಂಪನಿಯ ವೆಬ್‌ಸೈಟ್‌ನಲ್ಲಿರುವ ಮಾಹಿತಿಯಂತೆ, ಈ ಎರಡೂ ಸಾಧನಗಳು ವಿನ್ಯಾಸದಲ್ಲಿ ಒಂದೇ ರೀತಿ ಇವೆ. ಇವುಗಳನ್ನು ತಲೆಯ ಸುತ್ತಲೂ ಬ್ಯಾಂಡ್‌ನಂತೆ ಧರಿಸಬಹುದು ಮತ್ತು ಇದಕ್ಕೆ ಒಂದು ವೈರ್ ಅನ್ನು ಅಳವಡಿಸಲಾಗಿದೆ. ಇವುಗಳನ್ನು ಧರಿಸಿ ಮಲಗುವುದರಿಂದ, ಕನಸು ಕಾಣುವಾಗ "ನಾನು ಕನಸು ಕಾಣುತ್ತಿದ್ದೇನೆ" ಎಂಬ ಅರಿವು ನಮಗೇ ಮೂಡುತ್ತದೆ. ಆ ಮೂಲಕ ನಮ್ಮ ಕನಸಿನಲ್ಲಿ ನಡೆಯುವ ಘಟನೆಗಳನ್ನು ನಾವೇ ನಿಯಂತ್ರಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ.
ಇದು ಹೇಗೆ ಕಾರ್ಯನಿರ್ವಹಿಸುತ್ತದೆ?
ಈ ಸಾಧನಗಳ ಕಾರ್ಯನಿರ್ವಹಣೆಯ ಬಗ್ಗೆ 'ಎಕ್ಸ್' (X) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರೊಫೆಟಿಕ್, ಇದು ಅತ್ಯಾಧುನಿಕ ತಂತ್ರಜ್ಞಾನದ ಆಧಾರದ ಮೇಲೆ ಕೆಲಸ ಮಾಡುತ್ತದೆ ಎಂದು ವಿವರಿಸಿದೆ. ಈ ಬ್ಯಾಂಡ್‌ಗಳು ಹಣೆಯ ಮೂಲಕ ಮೆದುಳಿನ 'ಪ್ರೀಫ್ರಂಟಲ್ ಕಾರ್ಟೆಕ್ಸ್' (Prefrontal cortex) ಭಾಗಕ್ಕೆ ಸುರಕ್ಷಿತವಾದ ಅಲ್ಟ್ರಾಸಾನಿಕ್ ಶಕ್ತಿಯನ್ನು ರವಾನಿಸುತ್ತವೆ. ನಾವು ಕನಸು ಕಾಣುವಾಗ ನಮ್ಮ ಮೆದುಳಿನ 'ಫ್ರಂಟೋಪರೈಟಲ್ ನೆಟ್‌ವರ್ಕ್' ನಿಷ್ಕ್ರಿಯವಾಗಿರುತ್ತದೆ. ಇದರಿಂದಾಗಿ ಕನಸಿನ ಮೇಲಿನ ಹಿಡಿತ ತಪ್ಪುತ್ತದೆ. ಈ ಸಾಧನಗಳು ಆ ನೆಟ್‌ವರ್ಕ್ ಅನ್ನು ಸಕ್ರಿಯಗೊಳಿಸಿ, ಕನಸುಗಳ ಮೇಲೆ ನಮಗೆ ನಿಯಂತ್ರಣ ಸಿಗುವಂತೆ ಮಾಡುತ್ತವೆ.
ಇಲಾನ್ ಮಸ್ಕ್ ಅವರ 'ನ್ಯೂರೋಲಿಂಕ್' (Neuralink) ಬ್ರೈನ್ ಚಿಪ್‌ಗಳಲ್ಲಿ ಬಳಸಲಾಗುವ ಅತ್ಯಾಧುನಿಕ ಇಇಜಿ ಸೆನ್ಸರ್‌ಗಳನ್ನು ಇದರಲ್ಲಿ ಅಳವಡಿಸಲಾಗಿದೆ. ಇದು ಮೆದುಳಿನ ಚಟುವಟಿಕೆಗಳನ್ನು ನಿಖರವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ಈ ಸಾಧನವು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು tFUS ತಂತ್ರಜ್ಞಾನವನ್ನು ಬಳಸಿ ನಮ್ಮ ಗಾಢ ನಿದ್ರೆಯ ಸಮಯದಲ್ಲಿ ಕನಸುಗಳನ್ನು ನಿಯಂತ್ರಿಸಲು ನೆರವಾಗುತ್ತದೆ. ಆದರೆ, ಈ ಸಾಧನದ ಕಾರ್ಯಕ್ಷಮತೆ ಮತ್ತು ಅಡ್ಡಪರಿಣಾಮಗಳ ಬಗ್ಗೆ ಇನ್ನಷ್ಟೇ ವೈಜ್ಞಾನಿಕ ಪುರಾವೆಗಳು ಲಭ್ಯವಾಗಬೇಕಿದೆ.
ಬೆಲೆ ಎಷ್ಟು?
ಪ್ರೊಫೆಟಿಕ್ ಡ್ಯುಯಲ್ ಲೆ $449 (ಅಂದಾಜು 43,200ರೂಪಾಯಿ ) ಆಗಿದ್ದು, ಈ ವರ್ಷದ (2026) ಅಂತ್ಯದ ವೇಳೆಗೆ ಮಾರುಕಟ್ಟೆಗೆ ಲಭ್ಯವಾಗಲಿದೆ ಪ್ರೊಫೆಟಿಕ್ ಫೇಸ್ ಇನ್ನೂ ಅತ್ಯಾಧುನಿಕ ಆವೃತ್ತಿಯಾಗಿದ್ದು, ಇದರ ಬೆಲೆ $1,299 (ಅಂದಾಜು 1.22 ಲಕ್ಷ ರೂಪಾಯಿ) ಇರಲಿದೆ. 2027ರ ಮಧ್ಯಭಾಗದಲ್ಲಿ ಇದು ಗ್ರಾಹಕರಿಗೆ ಸಿಗಲಿದೆ.

