ಭಾರತದ ಸಹಾಯ ಕೋರಿದ ಪಿಒಕೆ ನಾಯಕ, LoC ಗಡಿ ತೆರೆಯಲು ಮನವಿ!
x

ಭಾರತದ ಸಹಾಯ ಕೋರಿದ ಪಿಒಕೆ ನಾಯಕ, LoC ಗಡಿ ತೆರೆಯಲು ಮನವಿ!

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (PoK) ತೀವ್ರ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಆಹಾರ, ಔಷಧಿ ಕೊರತೆ ಹಿನ್ನೆಲೆ ಭಾರತದ ಸಹಾಯ ಹಾಗೂ LoC ಗಡಿ ತೆರೆಯುವಂತೆ JAAC ನಾಯಕ ಅಮನ್ ಖಾನ್ ಮನವಿ ಮಾಡಿದೆ.


Click the Play button to hear this message in audio format

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ದಿನದಿಂದ ದಿನಕ್ಕೆ ಹಿಂಸಾಚಾರ ಮತ್ತು ಉದ್ವಿಗ್ನತೆ ಹೆಚ್ಚಾಗುತ್ತಿದ್ದು, ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಈ ನಡುವೆ ಜಂಟಿ ಅವಾಮಿ ಆಕ್ಷನ್ ಕಮಿಟಿ (JAAC) ನಾಯಕ ಸರ್ದಾರ್ ಅಮನ್ ಖಾನ್, ಇಡೀ ಪಿಒಕೆ ಪ್ರದೇಶದಲ್ಲಿ ಉಂಟಾಗಿರುವ ತೀವ್ರ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ಭಾರತ ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಪ್ರತಿಭಟನೆಯನ್ನು ಹತ್ತಿಕ್ಕಲು ಇಸ್ಲಾಮಾಬಾದ್ ಸರ್ಕಾರವು ಈ ಪ್ರದೇಶದಲ್ಲಿ ಆರ್ಥಿಕ ದಿಗ್ಬಂಧನ ವಿಧಿಸಿದೆ ಎಂದು ಅವರು ಆರೋಪಿಸಿದ್ದಾರೆ.

ಪರಿಸ್ಥಿತಿ ಮತ್ತಷ್ಟು ಹದಗೆಟ್ಟರೆ ನಾಗರಿಕರು ಭಾರತಕ್ಕೆ ವಲಸೆ ಹೋಗಲು ಮುಕ್ತ ಅವಕಾಶ ಇರಬೇಕು ಎಂದು ವಾದಿಸಿರುವ ಜೆಎಎಸಿ ನಾಯಕ, ಗಡಿ ನಿಯಂತ್ರಣ ರೇಖೆಯ (LoC) ಗಡಿಯನ್ನು ತೆರೆಯಲು ಮತ್ತು ಮಾನವೀಯ ನೆರವು ಕಳುಹಿಸಲು ನವದೆಹಲಿಗೆ ಕರೆ ನೀಡಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ವಿಡಿಯೋವೊಂದರಲ್ಲಿ ಮಾತನಾಡಿರುವ ಖಾನ್, "ನಮಗೆ ಭಾರತದ ಸಹಾಯದ ಅಗತ್ಯವಿದೆ. ಇಲ್ಲಿ ಪಡಿತರ ಕೊರತೆಯಿದೆ... ನಮಗೆ ನಿಮ್ಮ ಸಹಾಯ ಬೇಕು" ಎಂದು ಹೇಳಿದ್ದಾರೆ. ಪ್ರತಿಭಟನಾಕಾರರ ವಿರುದ್ಧ ಭದ್ರತಾ ಪಡೆಗಳು ಕಾರ್ಯಾಚರಣೆಯನ್ನು ತೀವ್ರಗೊಳಿಸುತ್ತಿದ್ದಂತೆ ಪಿಒಕೆ ನಿವಾಸಿಗಳು ಆಹಾರ ಮತ್ತು ಔಷಧಿಗಳ ಕೊರತೆಯನ್ನು ಎದುರಿಸುತ್ತಿದ್ದಾರೆ ಮತ್ತು ಇದು ಗಂಭೀರ ಮಾನವೀಯ ಬಿಕ್ಕಟ್ಟಿಗೆ ಕಾರಣವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಪಿಒಕೆಯಲ್ಲಿ ಹೆಚ್ಚಿದ ಉದ್ವಿಗ್ನತೆ

ಕಳೆದ ತಿಂಗಳಿನಿಂದ ಪಾಕಿಸ್ತಾನ ಆಡಳಿತದ ವಿರುದ್ಧ ಪಿಒಕೆಯಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಗಳು ನಡೆಯುತ್ತಿವೆ. ಕಳೆದ ವಾರ ಈದ್ಗಾ ಮೈದಾನದಲ್ಲಿ ನಡೆದ ಬೃಹತ್ ಪ್ರತಿಭಟನಾ ರ‍್ಯಾಲಿಯಲ್ಲಿ ಜನರು "ಪಿಒಕೆ ಪಾಕಿಸ್ತಾನದ ಭಾಗವಲ್ಲ" ಮತ್ತು "ನಮಗೆ ಸ್ವಾತಂತ್ರ್ಯ ಬೇಕು" ಎಂಬ ಘೋಷಣೆಗಳನ್ನು ಕೂಗಿದ್ದರು. ಸ್ಥಳೀಯ ಸುಧಾರಣೆಗಳಿಗಾಗಿ ಆರಂಭವಾದ ಈ ಪ್ರತಿಭಟನೆಯು ಈಗ ಪಾಕಿಸ್ತಾನದ ರಾಜಕೀಯ ನಿಯಂತ್ರಣದಿಂದ ಮುಕ್ತಿ ಪಡೆಯುವ ಮುಕ್ತ ಕರೆಯಾಗಿ ಬದಲಾಗಿದೆ. ಜೂನ್ 30 ರಂದು ನಡೆದ ಖಾನ್ ಅವರ ರ‍್ಯಾಲಿಯ ವಿಡಿಯೋ ಇದಾಗಿದೆ ಎಂದು ಹೇಳಲಾಗುತ್ತಿದೆ.

ನಿಷ್ಪ್ರಯೋಜಕ ಪ್ರಾದೇಶಿಕ ಆಡಳಿತ

ಪ್ರಸ್ತುತ ಪಿಒಕೆಯಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು ಸ್ಥಳೀಯ ಜನಸಂಖ್ಯೆ ಮತ್ತು ಇಸ್ಲಾಮಾಬಾದ್‌ಗೆ ಸಂಪೂರ್ಣವಾಗಿ ಅಧೀನವಾಗಿರುವ ಅಧಿಕಾರವಿಲ್ಲದ ಪ್ರಾದೇಶಿಕ ಆಡಳಿತದ ನಡುವಿನ ತೀವ್ರ ಭಿನ್ನಾಭಿಪ್ರಾಯವನ್ನು ಎತ್ತಿ ತೋರಿಸುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜೆಎಎಸಿ ಸಂಘಟನೆಯನ್ನು ನಿಷೇಧಿಸುವ ಮತ್ತು ಆಕ್ರಮಿತ ಪ್ರದೇಶದಲ್ಲಿ ಮಾರಕ ಬಲವನ್ನು ಬಳಸುವ ಪಾಕಿಸ್ತಾನಿ ಅಧಿಕಾರಿಗಳ ನಿರ್ಧಾರವು, ಪ್ರಾದೇಶಿಕ ಅಸಮಾಧಾನವನ್ನು ಹತ್ತಿಕ್ಕಲು ಸೇನಾ ಚಾಲಿತ ತಂತ್ರವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದ್ದಾರೆ.

ಜಂಟಿ ಅವಾಮಿ ಆಕ್ಷನ್ ಕಮಿಟಿ (JAAC) ನಿಷೇಧ

ಜೂನ್ 5 ರಂದು ಪಾಕಿಸ್ತಾನ ಸರ್ಕಾರವು ತಳಮಟ್ಟದ ಸಂಘಟನೆಯಾದ ಜೆಎಎಸಿಯನ್ನ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ ನಿಷೇಧಿಸಿದ ನಂತರ ಪಿಒಕೆಯಲ್ಲಿ ಅಶಾಂತಿ ತೀವ್ರಗೊಂಡಿದೆ.

Read More
Next Story