x

ಮಖ್ನಾ ಆನೆ ಸೆರೆಗೆ ಕುಮ್ಕಿ ಆನೆಗಳ ಆಗಮನ

ಕೇರಳದ ಕಣ್ಣೂರಿನಲ್ಲಿ ಪುಂಡಾನೆಯಾಗಿ ಸಂಚರಿಸುತ್ತಿರುವ ಮಖ್ನಾ ಆನೆ ಸೆರೆಗೆ ‘ವಿಕ್ರಮ್’ ಮತ್ತು ‘ಭರತ್’ ಕುಂಕಿ ಆನೆಗಳೊಂದಿಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ.


Click the Play button to hear this message in audio format

ಕೇರಳದ ಕಣ್ಣೂರಿನಲ್ಲಿ ಪುಂಡಾನೆಯಾಗಿ ಸಂಚರಿಸುತ್ತಿರುವ ದಂತವಿಲ್ಲದ ಗಂಡಾನೆ ‘ಮಖ್ನಾ’ ಸೆರೆ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ. ‘ಆಪರೇಷನ್ ಕಣ್ಣೂರು ಮಖ್ನಾ’ ಕಾರ್ಯಾಚರಣೆಯ ಭಾಗವಾಗಿ ತರಬೇತಿ ಪಡೆದ ಕುಂಕಿ ಆನೆಗಳಾದ ವಿಕ್ರಮ್ ಮತ್ತು ಭರತ್ ಕಣ್ಣೂರಿಗೆ ಆಗಮಿಸಿವೆ. ಕಾಡಿನಲ್ಲಿ ಸಂಚರಿಸುತ್ತಿರುವ ಮಖ್ನಾ ಆನೆಯನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಸೆರೆಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಾರ್ಯಾಚರಣೆಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಅನುಭವಿ ಸಿಬ್ಬಂದಿ ಹಾಗೂ ಕುಂಕಿ ಆನೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಕಾರ್ಯಾಚರಣೆಯ ಸಿದ್ಧತೆ ಮತ್ತು ಕಣ್ಣೂರಿಗೆ ಆಗಮಿಸಿದ ವಿಕ್ರಮ್ ಹಾಗೂ ಭರತ್ ಆನೆಗಳ ದೃಶ್ಯಗಳನ್ನು ಅರಣ್ಯ ಇಲಾಖೆ ಬಿಡುಗಡೆ ಮಾಡಿದೆ. ‘ಆಪರೇಷನ್ ಕಣ್ಣೂರು ಮಖ್ನಾ’ ಕಾರ್ಯಾಚರಣೆಯ ಪ್ರಮುಖ ದೃಶ್ಯಗಳನ್ನು ಈ ವಿಡಿಯೊದಲ್ಲಿ ವೀಕ್ಷಿಸಿ.

Read More
Next Story