‘ಮೊದಲು ಎನ್‌ಆರ್‌ಸಿ, ಬಳಿಕ ಜನಗಣತಿ’: ಮಣಿಪುರದಲ್ಲಿ ನೂರಾರು ಮಹಿಳೆಯರಿಂದ ಪಂಜಿನ ಮೆರವಣಿಗೆ
x

ಮಣಿಪುರದ ಇಂಫಾಲ್‌ನಲ್ಲಿ ಮೀರಾ ಪೈಬಿ ಕಾರ್ಯಕರ್ತರು ಬೃಹತ್ ಪಂಜಿನ ಮೆರವಣಿಗೆ ನಡೆಸಿದರು.

‘ಮೊದಲು ಎನ್‌ಆರ್‌ಸಿ, ಬಳಿಕ ಜನಗಣತಿ’: ಮಣಿಪುರದಲ್ಲಿ ನೂರಾರು ಮಹಿಳೆಯರಿಂದ ಪಂಜಿನ ಮೆರವಣಿಗೆ

ಕ್ಯಾಂಪೇನ್ ಫಾರ್ ಜಸ್ಟೀಸ್ ಆ್ಯಂಡ್ ಫೇರ್ ಡಿಲಿಮಿಟೇಶನ್ (JFD) ಆಶ್ರಯದಲ್ಲಿ ನಾರ್ತ್ ಇಂಫಾಲ್ ಮೀರಾ ಆ್ಯಂಡ್ ಕ್ಲಬ್ಸ್ ಕೋಆರ್ಡಿನೇಟಿಂಗ್ ಕಮಿಟಿ ಈ ಮೆರವಣಿಗೆ ಆಯೋಜಿಸಿತ್ತು. ನೂರಾರು ಮಹಿಳೆಯರು ಕೈಯಲ್ಲಿ ಉರಿಯುವ ಪಂಜುಗಳನ್ನು ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡರು.


Click the Play button to hear this message in audio format

ಮಣಿಪುರದಲ್ಲಿ ರಾಷ್ಟ್ರೀಯ ನಾಗರಿಕರ ನೋಂದಣಿ (NRC) ನವೀಕರಣದ ಬೇಡಿಕೆ ಮತ್ತೆ ತೀವ್ರಗೊಂಡಿದೆ. ಜನಗಣತಿ ಪ್ರಕ್ರಿಯೆ ಆರಂಭಿಸುವ ಮುನ್ನ ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು ನವೀಕರಿಸಬೇಕು ಎಂದು ಒತ್ತಾಯಿಸಿ ಇಂಫಾಲ್‌ನಲ್ಲಿ ಮೀರಾ ಪೈಬಿ ಕಾರ್ಯಕರ್ತರು ಗುರುವಾರ ರಾತ್ರಿ ಬೃಹತ್ ಪಂಜಿನ ಮೆರವಣಿಗೆ ನಡೆಸಿದರು.

ಕ್ಯಾಂಪೇನ್ ಫಾರ್ ಜಸ್ಟೀಸ್ ಆ್ಯಂಡ್ ಫೇರ್ ಡಿಲಿಮಿಟೇಶನ್ (JFD) ಆಶ್ರಯದಲ್ಲಿ ನಾರ್ತ್ ಇಂಫಾಲ್ ಮೀರಾ ಆ್ಯಂಡ್ ಕ್ಲಬ್ಸ್ ಕೋಆರ್ಡಿನೇಟಿಂಗ್ ಕಮಿಟಿ ಈ ಮೆರವಣಿಗೆ ಆಯೋಜಿಸಿತ್ತು. ನೂರಾರು ಮಹಿಳೆಯರು ಕೈಯಲ್ಲಿ ಉರಿಯುವ ಪಂಜುಗಳನ್ನು ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡರು.

ಕೊಯಿರೆಂಗೆ ಗ್ರಾಮದಿಂದ ಆರಂಭವಾದ ಮೆರವಣಿಗೆ ರಾಷ್ಟ್ರೀಯ ಹೆದ್ದಾರಿ-2ರ (NH-2) ಮಾರ್ಗವಾಗಿ ಸಾಗಿತು. ಬಳಿಕ ಲುವಾಂಗ್‌ಸಂಗ್‌ಬಾಮ್ ಗ್ರಾಮದ ಲಿಬರಲ್ ಕಾಲೇಜಿನವರೆಗೆ ಪ್ರತಿಭಟನಾಕಾರರು ಮೆರವಣಿಗೆ ನಡೆಸಿದರು. ಪರಿಸ್ಥಿತಿ ಸೂಕ್ಷ್ಮವಾಗಿರುವ ಹಿನ್ನೆಲೆಯಲ್ಲಿ ಹೆದ್ದಾರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು.

‘ಮೊದಲು NRC, ಬಳಿಕ ಜನಗಣತಿ’

ಜನಗಣತಿ ನಡೆಸುವುದಕ್ಕೆ ತಮ್ಮ ವಿರೋಧವಿಲ್ಲ. ಆದರೆ ರಾಜ್ಯದ ಪ್ರಸ್ತುತ ಪರಿಸ್ಥಿತಿಯನ್ನು ಪರಿಗಣಿಸಿ ಮೊದಲು ರಾಷ್ಟ್ರೀಯ ನಾಗರಿಕರ ನೋಂದಣಿ ನಡೆಸಿ ನವೀಕರಿಸಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿದೆ. ಹೊರಗಿನವರನ್ನು ಗುರುತಿಸಿ ರಾಜ್ಯದಿಂದ ಹೊರಹಾಕಬೇಕು ಹಾಗೂ ಜನರ ಜೀವ ಮತ್ತು ಆಸ್ತಿಯ ರಕ್ಷಣೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಆಗಸ್ಟ್‌ನಲ್ಲಿ ಸರಣಿ ಪ್ರತಿಭಟನೆ

ರಾಷ್ಟ್ರೀಯ ನಾಗರಿಕರ ನೋಂದಣಿ ನವೀಕರಣಕ್ಕೆ ಆಗ್ರಹಿಸಿ ಮಣಿಪುರದಲ್ಲಿ ಆಗಸ್ಟ್ ತಿಂಗಳಿನಲ್ಲಿ ಸರಣಿ ಪ್ರತಿಭಟನೆಗಳು ನಡೆಯುತ್ತಿವೆ. ಆಗಸ್ಟ್ 23ರಂದು ಟಿಡ್ಡಿಮ್ ರಸ್ತೆಯಲ್ಲಿ ಮೀರಾ ಪೈಬಿ ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಸಿದ್ದರು. ಆಗಸ್ಟ್ 20ರಂದು ಜೆಇಡಿ ಕರೆ ಮೇರೆಗೆ ಇಂಫಾಲ್‌ನಲ್ಲಿ ಪ್ರತಿಭಟನೆ ನಡೆದಿತ್ತು.

ಆಗಸ್ಟ್ 16ರಿಂದ ಜೆಇಡಿತನ್ನ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದ್ದು, ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ಮತ್ತು ಪಂಜಿನ ಮೆರವಣಿಗೆಗಳನ್ನು ಆಯೋಜಿಸಿದೆ. ಜನಗಣತಿ ಪ್ರಕ್ರಿಯೆಯನ್ನು ಮುಂದೂಡಬೇಕು ಹಾಗೂ ಅದಕ್ಕೂ ಮುನ್ನ ರಾಷ್ಟ್ರೀಯ ನಾಗರಿಕರ ನೋಂದಣಿ ನವೀಕರಿಸಬೇಕು ಎಂದು ಸಂಘಟನೆ ಆಗ್ರಹಿಸುತ್ತಿದೆ.

Read More
Next Story