
West Bengal Election 2026: ಮುರ್ಷಿದಾಬಾದ್‌ನಲ್ಲಿ ಸಂಘರ್ಷ, ಬಾಂಬ್ ದಾಳಿ ಆರೋಪ, ಮತದಾರರಲ್ಲಿ ಭೀತಿ!
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನದ ವೇಳೆ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದು ನಡೆಯುತ್ತಿದ್ದು, ಮುರ್ಷಿದಾಬಾದ್‌ನಲ್ಲಿ ತೃಣಮೂಲ ಕಾಂಗ್ರೆಸ್ (TMC) ಕಾರ್ಯಕರ್ತರು ಮತ್ತು ಮಾಜಿ ಟಿಎಂಸಿ ನಾಯಕ ಹುಮಾಯೂನ್ ಕಬೀರ್ ಬೆಂಬಲಿಗರ ನಡುವೆ ಭಾರಿ ಸಂಘರ್ಷ ಏರ್ಪಟ್ಟಿದೆ. ಮತದಾರರಿಗೆ ಬೆದರಿಕೆ ಹಾಕಲಾಗುತ್ತಿದೆ ಎಂಬ ಆರೋಪಗಳ ನಡುವೆಯೇ ಈ ಘಟನೆ ನಡೆದಿದೆ.
ಚುನಾವಣಾ ಕಣದ ವಿವರ
ಪಶ್ಚಿಮ ಬಂಗಾಳದ ಒಟ್ಟು 294 ಸ್ಥಾನಗಳ ಪೈಕಿ ಮೊದಲ ಹಂತದಲ್ಲಿ 152 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಇದರಲ್ಲಿ ಉತ್ತರ ಬಂಗಾಳದ 8 ಜಿಲ್ಲೆಗಳ 54 ಸ್ಥಾನಗಳು ಸೇರಿದಂತೆ ಮುರ್ಷಿದಾಬಾದ್, ನಡಿಯಾ, ಬೀರ್ಭೂಮ್ ಮತ್ತು ಹೂಗ್ಲಿ ಜಿಲ್ಲೆಗಳ ಕ್ಷೇತ್ರಗಳು ಸೇರಿವೆ. ಎರಡನೇ ಹಂತದ ಮತದಾನ ಏಪ್ರಿಲ್ 29 ರಂದು ನಡೆಯಲಿದ್ದು, ಮೇ 4 ರಂದು ಫಲಿತಾಂಶ ಪ್ರಕಟವಾಗಲಿದೆ.
#WATCH | Murshidabad, West Bengal: One of the victims of the reported crude bomb incident in Murshidabad yesterday says, "I had stepped out yesterday to offer Namaz at around 8 pm... I was standing... two boys came and threw a bomb near my foot. Humayun Kabir's party workers have… pic.twitter.com/ASXxYu57xs
— ANI (@ANI) April 23, 2026
ಬಾಂಬ್ ಸ್ಫೋಟ ಮತ್ತು ಆರೋಪ-ಪ್ರತ್ಯಾರೋಪ
'ಆಮ್ ಜನತಾ ಉನ್ನಯನ್ ಪಾರ್ಟಿ' (AUJP) ಸಂಸ್ಥಾಪಕ ಹುಮಾಯೂನ್ ಕಬೀರ್ ಅವರು ನಿನ್ನೆ ಕಚ್ಚಾ ಬಾಂಬ್ ಸ್ಫೋಟಗೊಂಡಿದ್ದ ಮುರ್ಷಿದಾಬಾದ್ ಪ್ರದೇಶಕ್ಕೆ ಭೇಟಿ ನೀಡಿದಾಗ ಉದ್ವಿಗ್ನತೆ ಉಂಟಾಯಿತು.
ಘಟನೆಯ ಬಗ್ಗೆ ಸಂತ್ರಸ್ತನೊಬ್ಬ ಪ್ರತಿಕ್ರಿಯಿಸಿ, "ನಿನ್ನೆ ರಾತ್ರಿ ನಾನು ನಮಾಜ್ ಮುಗಿಸಿ ನಿಂತಿದ್ದಾಗ ಇಬ್ಬರು ಹುಡುಗರು ಬಂದು ನನ್ನ ಕಾಲಿನ ಬಳಿ ಬಾಂಬ್ ಎಸೆದರು. ಇದು ಹುಮಾಯೂನ್ ಕಬೀರ್ ಪಕ್ಷದ ಕಾರ್ಯಕರ್ತರ ಕೆಲಸ" ಎಂದು ಗಂಭೀರ ಆರೋಪ ಮಾಡಿದ್ದಾರೆ. ಇತ್ತ ತೃಣಮೂಲ ಸಂಸದ ಅಬೂ ತಾಹರ್ ಖಾನ್ ಕೂಡ ಈ ಬಾಂಬ್ ದಾಳಿಯ ಹಿಂದೆ ಕಬೀರ್ ಪಕ್ಷದ ಕೈವಾಡವಿದೆ ಎಂದು ದೂರಿದ್ದಾರೆ.
#WATCH | West Bengal Elections 2026 | A scuffle breaks out between TMC workers and Aam Janata Unnayan Party (AUJP) founder Humayun Kabir in Murshidabad.
— ANI (@ANI) April 23, 2026
Humayun Kabir is visiting the area where a crude bomb hurling incident was reported yesterday. pic.twitter.com/RTrRzg2eMr
ಚುನಾವಣಾ ಆಯೋಗದ ಮಧ್ಯಪ್ರವೇಶ
ಮುರ್ಷಿದಾಬಾದ್ ಜಿಲ್ಲೆಯ ಡೊಮ್ಕಲ್‌ನಲ್ಲಿ ಹಲವು ಮತದಾರರಿಗೆ ಮತ ಚಲಾಯಿಸಲು ಬಿಡುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಕೂಡಲೇ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ. ಡೊಮ್ಕಲ್ ವಿಧಾನಸಭಾ ಕ್ಷೇತ್ರದ ರಾಯ್‌ಪುರ ಗ್ರಾಮದಲ್ಲಿ ಮುಂಜಾನೆಯಿಂದಲೇ ಶಸ್ತ್ರಸಜ್ಜಿತ ವ್ಯಕ್ತಿಗಳು ಸಂಚರಿಸುತ್ತಿದ್ದು, ಮತದಾರರಲ್ಲಿ ಭೀತಿಯ ವಾತಾವರಣ ನಿರ್ಮಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

