ಮುಲಾಯಂ ಸಿಂಗ್ ಪುತ್ರ, ಅಪರ್ಣಾ ಯಾದವ್ ಪತಿ ಪ್ರತೀಕ್ ಯಾದವ್ ನಿಧನ!
x

ಮುಲಾಯಂ ಸಿಂಗ್ ಪುತ್ರ, ಅಪರ್ಣಾ ಯಾದವ್ ಪತಿ ಪ್ರತೀಕ್ ಯಾದವ್ ನಿಧನ!

ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಪುತ್ರ ಪ್ರತೀಕ್ ಯಾದವ್ ಬುಧವಾರ ಲಕ್ನೋದಲ್ಲಿ ನಿಧನರಾಗಿದ್ದಾರೆ. ಅಪರ್ಣಾ ಯಾದವ್ ಅವರ ಪತಿಯ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ


ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಪುತ್ರ ಮತ್ತು ಉತ್ತರ ಪ್ರದೇಶ ರಾಜ್ಯ ಮಹಿಳಾ ಆಯೋಗದ ಉಪಾಧ್ಯಕ್ಷೆ ಅಪರ್ಣಾ ಯಾದವ್ ಅವರ ಪತಿ ಪ್ರತೀಕ್ ಯಾದವ್ (38) ಅವರು ಬುಧವಾರ ಲಕ್ನೋದ ಸಿವಿಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಆಸ್ಪತ್ರೆಗೆ ದಾಖಲಿಸಿದ ಬೆನ್ನಲ್ಲೇ ಸಾವು

ಲಭ್ಯವಿರುವ ಮಾಹಿತಿಯ ಪ್ರಕಾರ, ಪ್ರತೀಕ್ ಯಾದವ್ ಅವರನ್ನು ಲಕ್ನೋದ ಸಿವಿಲ್ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ, ಪರೀಕ್ಷಿಸಿದ ವೈದ್ಯರು ಅವರು ಈಗಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಪ್ರಸ್ತುತ ಮರಣೋತ್ತರ ಪರೀಕ್ಷೆ ಪ್ರಕ್ರಿಯೆಗಳು ನಡೆಯುತ್ತಿದ್ದು, ಸಾವಿಗೆ ನಿಖರವಾದ ಕಾರಣ ಇನ್ನೂ ಅಧಿಕೃತವಾಗಿ ತಿಳಿದುಬಂದಿಲ್ಲ.

ರಾಜಕಾರಣದಿಂದ ದೂರವಿದ್ದ 'ಯಾದವ್' ಪುತ್ರ

ಪ್ರಬಲ ರಾಜಕೀಯ ಕುಟುಂಬದಲ್ಲಿ ಜನಿಸಿದರೂ ಪ್ರತೀಕ್ ಯಾದವ್ ಅವರು ಸಕ್ರಿಯ ರಾಜಕಾರಣದಿಂದ ದೂರವೇ ಉಳಿದಿದ್ದರು. ರಿಯಲ್ ಎಸ್ಟೇಟ್ ವ್ಯವಹಾರ ಮತ್ತು ಫಿಟ್‌ನೆಸ್ ಉದ್ಯಮದಲ್ಲಿ ಗುರುತಿಸಿಕೊಂಡಿದ್ದ ಇವರು, ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಲೈಫ್‌ಸ್ಟೈಲ್‌ನಿಂದಾಗಿ ಸದಾ ಸುದ್ದಿಯಲ್ಲಿದ್ದರು. ಇವರು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಸಹೋದರ.

ಕೆಲವು ವಾರಗಳ ಹಿಂದೆ ಪ್ರತೀಕ್ ಮತ್ತು ಅಪರ್ಣಾ ಯಾದವ್ ನಡುವೆ ಭಿನ್ನಾಭಿಪ್ರಾಯಗಳಿವೆ ಎಂಬ ವದಂತಿಗಳು ಹರಡಿದ್ದವು. ಆದರೆ, ನಂತರ ಇಬ್ಬರೂ ಒಟ್ಟಾಗಿರುವ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಈ ಎಲ್ಲಾ ಊಹೆಗಳಿಗೆ ತೆರೆ ಎಳೆದಿದ್ದರು. ಅಪರ್ಣಾ ಯಾದವ್ ಅವರು ಬಿಜೆಪಿ ನಾಯಕಿಯಾಗಿ ಸಕ್ರಿಯರಾಗಿದ್ದು, ಪ್ರತೀಕ್ ಅವರ ನಿಧನ ಯಾದವ್ ಕುಟುಂಬಕ್ಕೆ ದೊಡ್ಡ ಆಘಾತ ತಂದಿದೆ.

Read More
Next Story